ಇಲಾಖೆಯ ಬೇಜವಾಬ್ದಾರಿ : ರೇಲ್ವೆ ನಿಲ್ದಾಣ ಹುಡುಕುವ ಪರಿಸ್ಥಿತಿ ನಿರ್ಮಾಣ

0
35

ಶಹಾಬಾದ:ನಗರದ ರೇಲ್ವೆ ನಿಲ್ದಾಣದ ಹಳೆ ಕಟ್ಟದ ಮುಂದೆ ಪರದೆ ನಿರ್ಮಿಸಿದ ಹಾಗೇ ಕಾಮಗಾರಿ ಮಾಡಿದ್ದರಿಂದ ನಗರದ ರೇಲ್ವೆ ನಿಲ್ದಾಣ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರಕಾರದ ಅಮೃತ ಭಾರತ ಯೋಜನೆಯಡಿ ಶಹಾಬಾದ ರೇಲ್ವೆ ನಿಲ್ದಾಣದ ಅಭಿವೃದ್ಧಿಗಾಗಿ ಕೋಟಿಗಟ್ಟಲೇ ಹಣ ಬಿಡುಗಡೆಯಾಗಿದೆ. ಗುತ್ತಿಗೆ ಹಿಡಿದ ಗುತ್ತಿಗೆದಾರ ಕೆಲಸ ಪ್ರಾರಂಭಿಸಿ ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾನೆ.ಸುಮಾರು ಆರು ತಿಂಗಳಿನಿಂದ ಕಾಮಗಾರಿ ನಿಂತಿವೆ. ಹಳೆ ಕಟ್ಟಡದ ಮುಂದೆ ಅಂದ ಹೆಚ್ಚಿಸಲು ಗೋಡೆ ತರಹ ಕಾಮಗಾರಿ ಕೈಗೊಳ್ಳಲಾಗಿದೆ.ಅದನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ.ಇದರಿಂದ ರೇಲ್ವೆ ನಿಲ್ದಾಣ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಉಂಟಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ.

Contact Your\'s Advertisement; 9902492681

ರೇಲ್ವೆ ಬರುವ ಡಿಜಿಟಲ್ ಬೋರ್ಡ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸರಿಯಾದ ಧ್ವನಿ ವರ್ಧಕದ ಮೂಲಕ ಮಾಹಿತಿ ಒದಗಿಸುತ್ತಿಲ್ಲ. ನಿಲ್ದಾಣದ ಹೊರಗಡೆ ಬೆಳಕಿನ ವ್ಯವಸ್ಥೆಯಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ.ಅಲ್ಲದೇ ಸರಿಯಾದ ಪಾರ್ಕಿಂಗ್ ವ್ಯವಸ್ಥೆಯಿಲ್ಲದ ಕಾರಣ ಸಾರ್ವಜನಿಕರ ಎರಡು ಬೈಕ್‍ಗಳು ಕಳ್ಳತನವಾಗಿದೆ. ಅಮೃತ ಭಾರತ್ ನಿಲ್ದಾಣ’ ಯೋಜನೆಯಡಿ ರಾಜ್ಯದ 11 ರೈಲ್ವೆ ನಿಲ್ದಾಣ ಆಧುನೀಕರಣಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿ ವರ್ಷವೇ ಗತಿಸಿತು.ಇಲ್ಲಿಯವರೆಗೆ ಶಹಾಬಾದ ರೇಲ್ವೆ ನಿಲ್ದಾಣ ಮೊದಲಿಗಿಂತಲೂ ಇನ್ನಷ್ಟೂ ಸೌಲಭ್ಯಗಳು ಕಳೆದುಕೊಂಡಿದೆ.

ಕೋಟಿಗಟ್ಟಲೇ ಹಣ ಬಿಡುಗಡೆ ಮಾಡಿದ್ದೆವೆ ಎಂದು ಹೇಳಿದ್ದಾರೆ ಹೊರತು ಕಾರ್ಯರೂಪಕ್ಕೆ ಇನ್ನೂ ಬಂದಿಲ್ಲ. ಕೂಡಲೇ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳನ್ನು ರೇಲ್ವೆ ಇಲಾಖೆ ಒದಗಿಸಬೇಕು.ಅಲ್ಲದೇ ಅಮೃತ ಭಾರತ್ ನಿಲ್ದಾಣ’ ಯೋಜನೆಯಡಿ ಕೈಗೊಳ್ಳುವ ಕಾಮಗಾರಿ ಪ್ರಾರಂಭಿಸಿ ತ್ವರಿತವಾಗಿ ಮುಗಿಸಬೇಕು.ಇಲ್ಲದಿದ್ದರೇ ಕಾಂಗ್ರೆಸ್ ಪಕ್ಷದಿಂದ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here