ಕಲಬುರಗಿ; ಬಳ್ಳಾರಿ ಜಿಲ್ಲೆ ಸಂಡೂರ ಉಪ ಚುನಾವಣೆಯ ಕಣದಲ್ಲಿ ಇದ್ದ ಕೆಕೆ ಆರ್ ಡಿ ಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಧರ್ಮಸಿಂಗ್ ಅವರು ಅಲ್ಲಿಂದ ನೇರವಾಗಿ ಕಲಬುರಗಿಗೆ ಧಾವಿಸಿ ಬಂದು ಗುರುವಾರ ರಾತ್ರಿ ನಡೆದ ಹಜರತ್ ಖಾಜಾ ಬಂದಾ ನವಾಜ್ ದರ್ಗಾದ ಪೀಠಾಧಿಪತಿ ಹಾಗೂ ಕೆಬಿಎನ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿಡ್ಡ ಡಾ. ಸೈಯದ್ ಷಾ ಖ್ರುಸ್ರೋ ಹುಸೈನಿ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು ಅಗಲಿದ ಆತ್ಮಕ್ಕೆ ಶೃದ್ಧಾಂಜಲಿ ಅರ್ಪಿಸಿದರು.
ದರ್ಗಾ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಧಾರ್ಮಿಕ ವಿಧಿಗಳೊಂದಿಗೆ ನಡೆದ ಅಂತಿಮ ಯಾತ್ರೆಯ ಪ್ರಕ್ರಿಯೆಗಳಿಗೆ ಡಾ. ಅಜಯ್ ಸಿಂಗ್ ಸಾಕ್ಷಿ ಆದರು. ಸೈಯದ್ ಷಾ ಖ್ರುಸ್ರೋ ಹುಸೈನಿ ಅವರು, ಪ್ರಸಿದ್ಧ ಸೂಫಿ ಸಂತ ಹಜರತ್ ಖಾಜಾ ಬಂದಾ ನವಾಜ್ ಅವರ 23ನೇ ವಂಶಸ್ಥರಾಗಿದ್ದರು. ತಮ್ಮ ಆಳವಾದ ಆಧ್ಯಾತ್ಮಿಕತೆಗೆ ಮಾತ್ರವಲ್ಲದೆ ಬೌದ್ಧಿಕ ಕೊಡುಗೆಗಳಿಗಾಗಿಯೂ ಕಲ್ಯಾಣ ಕರ್ನಾಟಕ ಹಾಗೂ ಇಡೀ ರಾಜ್ಯದಲ್ಲಿ ಹೆಸರುವಾಸಿಯಾಗಿದ್ದನ್ನು ಡಾ. ಅಜಯ್ ಸಿಂಗ್ ಸ್ಮರಿಸಿದರು.
ದಿವಂಗತ ಖುಸ್ರೋ ಹುಸೇನಿ ಅವರ ಪರಿವಾರದ ಸದಸ್ಯರನ್ನು ಕಂಡು ಡಾ ಅಜಯ್ ಸಿಂಗ್ ಅವರು ಸಾಂತ್ವನ ಹೇಳಿದರು. ಮಹಾನ್ ವಿದ್ವಾಂಸರಾಗಿದ್ದ ಡಾ. ಖುಸ್ರೋ ಹುಸೇನಿ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಅರ್ಪಿಸಿದರು.
ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ ಅಜಯ್ ಧರ್ಮಸಿಂಗ್ ಅವರು ಮತ್ತೆ ಗುರುವಾರದ ರಾತ್ರಿಯೇ ಸಂಡೂರ್ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ನ. 8 ಹಾಗೂ ನ. 9* ರಂದು ಸಂಡೂರು ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.