ಕಲಬುರಗಿ: ಕರ್ನಾಟಕ ರಾಜ್ಯ ಹಾಗೂ ಕಲಬುರಗಿ ಜಿಲ್ಲೆಯ ಬಡ ರೈತರ ಜಮೀನಿನ ಪಹಣಿಯಲ್ಲಿ ಮತ್ತು ಮಠ, ಮಂದಿರಗಳ ಆಸ್ತಿ ದಾಖಲೆಯಲ್ಲಿ ಕಾಣಿಸಿಕೊಳ್ಳುತ್ತಿರುವ ವಕ್ಸ್ ಪದವನ್ನು ಹಾಗೂ ವಕ್ಸ್ 1974ರ ಕಾಯ್ದೆಯನ್ನು ತೆಗೆದು ಹಾಕಬೇಕೆಂದು ಹಿಂದೂರಾಷ್ಟ್ರ ಸೇನೆ ಜಿಲ್ಲಾ ಜಿಲ್ಲಾಧ್ಯಕ್ಷ ರಾಕೇಶ ಆರ್.ಜಮಾದಾರ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಹಾಗೂ ಕರ್ನಾಟಕ ರಾಜ್ಯ ಬಡ ರೈತರ ಆಸ್ತಿ ಹಾಗೂ ಮಠ, ಮಂದಿರ, ಶಾಲೆಯ ಆಸ್ತಿಗಳಲ್ಲಿ ಏಕಾ-ಏಕಿ ವಕ್ಸ್ ಆಸ್ತಿ ಎಂದು ಕಾಣಿಸಿಕೊಳ್ಳುತ್ತಿದ್ದು, ಇದನ್ನು ನೋಡಿ ನೋಡದಂತೆ ಇರುವುದನ್ನು ಕಂಡರೆ ಕರ್ನಾಟಕ ರಾಜ್ಯ ಸರಕಾರ ಮಾನ್ಯ ಮುಖ್ಯ ಮಂತ್ರಿಗಳ ಕುಮ್ಮಕ್ಕೂ ಇದೇ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ.
ಈ ಕೂಡಲೇ ಮುಖ್ಯ ಮಂತ್ರಿಗಳು ವಕ್ಸ್‍ಗೆ ನೀಡಿದ ಅಸಂವಿಧಾನಿಕ ಹಕ್ಕುಗಳ ಕಾಯ್ದೆಯನ್ನು ಹಾಗೂ ವಕ್ಸ್ ಬೋಡನ್ನು ನಿಷೇದಿಸಬೇಕು. ಅಂದಿನ ಕಾಂಗ್ರೇಸ್ ಸರಕಾರ ಹೊರಡಿಸಿದ 1974ರ ವಕ್ಸ್ ಗೆಜೆಟ್ ರದ್ದು ಗೊಳಿಸಬೇಕು. ನಂತರ ವಕ್ಸ್‍ನ ಎಲ್ಲಾ ಆಸ್ತಿಯನ್ನು ಕರ್ನಾಟಕ ಸರಕಾರದ ಅಧೀನಕ್ಕೆ ವಶಪಡಿಸಿಕೊಂಡು ರಾಜ್ಯಾಂತ ಇರುವ ಬಡ ದಲಿತರಿಗೆ ಹಾಗೂ ಆಸ್ತಿ ರಹಿತ ಬಡ ಕುಟುಂಬಗಳಿಗೆ ವಿತರಿಸಬೇಕು. ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಗೌರವಾಧ್ಯಕ್ಷ ವೀರೇಶ ಪಾಟೀಲ ಕಟ್ಟಿಸಂಗಾವಿ, ಜಿಲ್ಲಾ ಉಪಾಧ್ಯಕ್ಷ ರೋಹಿತ ಪಿಸಕೆ, ಮುಖಂಡರಾದ ಲಕ್ಷ್ಮಣ, ಸಂತೋಷ, ಕೃಷ್ಣ ಸೇರಿದಂತೆ ಇತರರು ಇದ್ದರು.