ಕಲಬುರಗಿ: ಶ್ರೀ ದತ್ತೋಪಂತ ಠೇಂಗಡಿಯವರ ಜನ್ಮ ಜಯಂತಿ ಆಚರಣೆ

0
76

ಕಲಬುರಗಿ: ಭಾರತೀಯ ಮಜ್ದೂರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಕಾಂತ್ ಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಸಾಮಾಜಿಕ ಕ್ಷೇತ್ರದ ಅನನ್ಯ ರಾಷ್ಟ್ರ ಋಷಿ, ಅಪೂರ್ವ ದಾರ್ಶನಿಕ ಯುಗಪ್ರವರ್ತಕ, ಭಾರತೀಯ ಮಜ್ದೂರಸಂಘ, ಭಾರತೀಯ ಕಿಸಾನ್ ಸಂಘ, ಸ್ವದೇಶಿ ಜಾಗರಣ ಮಂಚ್ ಮುಂತಾದ ಸಂಘಟನೆಗಳ ಸಂಸ್ಥಾಪಕರು,ಕಾರ್ಮಿಕ ಕ್ಷೇತ್ರದ, ಸ್ವದೇಶಿ ಆರ್ಥಿಕತೆಯ ಹರಿಕಾರ ಶ್ರೀ ದತ್ತೋಪಂತ ಠೇಂಗಡಿಯವರ ಜನ್ಮ ಜಯಂತಿಯನ್ನು ಭಾರತೀಯ ಮಜ್ದೂರ ಸಂಘದ ಜಿಲ್ಲಾ ಕಚೇರಿಯಲ್ಲಿ ಆಚರಿಸಲಾಯಿತು.

ಇದೆ ಸಂಧರ್ಭದಲ್ಲಿ ಶ್ರೀಕಾಂತ್ ಸ್ವಾಮಿ ರವರು ಮಾತನಾಡಿ ಭಾರತೀಯ ಮಜದೂರ್ ಸಂಘದ ಸ್ಥಾಪನೆ ಶೂನ್ಯದಿಂದ ಒಂದು ಸಂಘಟನೆಯನ್ನು ಕಟ್ಟಿ ಬೆಳೆಸುವ ಡಾತ್ತೋಪಂತ್ ತೆಂಗಡೆಜಿವರ ಸಂಕಲ್ಪ ವಾಗಿತ್ತು, ಇದರ ಮುಖ್ಯ ಉದ್ದೇಶ ವೇನೆಂದರೆ – ಮಜದೂರ್ ಕ್ಷೇತ್ರದಲ್ಲಿ ಒಂದು ಶ್ರಮಿಕರ ಸಂಘಟನೆ ಮಾಡಿ ಈ ಸಂಘಟನೆ ಕೇವಲ ” ಮಜ್ದೂರರ,ಮಜ್ದೂರರ ಮೂಲಕ ಮತ್ತು ಮಜ್ದುರರಿಗಾಗಿ” ಎಂಬ ಸಿದ್ದಾಂತ್ ಮೇಲೆ ಮುಖ್ಯವಾಗಿ ರಾಷ್ಟ್ರಹಿತ,ಉದ್ಯೋಗ ಹಿತ, ಹಾಗೂ ಮಜ್ದೂರರ ಹಿತಕ್ಕಾಗಿ ಕೆಲಸ ಮಾಡುವದು, ಅಲ್ಲದೆ ನಿಯೋಜಕರ ಪ್ರಭಾವದಿಂದಾಗಲಿ ಇದರ ಮೇಲೆ ಪ್ರಭಾವ ಬಿರದೆ ರಾಷ್ಟ್ರಹಿತವನ್ನು ಮನಸ್ಸಿನಲ್ಲಿಟ್ಟುಕೊಂಡು ಸ್ವತಂತ್ರವಾಗಿ ಸಂಘಟನೆ ಮತ್ತು ಆಂದೋಲನದಲ್ಲಿ ಕಾರ್ಯ ತತ್ಪರವಾಗುವುದಾಗಿದೆ.

Contact Your\'s Advertisement; 9902492681

ಭಾರತೀಯ ಸಂಸ್ಕøತಿ ಹಾಗೂ ಪರಂಪರೆ ಮತ್ತು ಭಾರತದ ಆರ್ಥಿಕ ಚಿಂತನೆ, ಭಾರತದ ಅರ್ಥವ್ಯವಸ್ಥೆಯ ಯನ್ನುಆಧಾರವಾಗಿಟ್ಟುಕೊಂಡು ಮುಂದುವರೆಯುವದು. ಭಾರತೀಯ ಮಜ್ದೂರ ಸಂಘದ ಸೌಮ್ಯವಾದಿ ವಿಚಾರಧಾರೆಯ” ವರ್ಗ ಸಂಘರ್ಷ ” ದಲ್ಲಿ ನಂಬಿಕೆ ಇರುವುದಿಲ್ಲ, ಇದರ ಪ್ರಕಾರ ಎಲ್ಲ ಭಾರತೀಯರು ಭಾರತ ಮಾತೆಯ ಮಕ್ಕಳು ಮತ್ತು ಸಂತಾನ, ಇಲ್ಲಿ ವರ್ಗ ಸಂಘರ್ಶಕ್ಕೆ ಬೆಲೆ ಇಲ್ಲ, ಆದರೆ ಅನ್ಯಾಯ,ಶೋಷಣೆ, ಆರ್ಥಿಕ,ಮತ್ತು ಸಾಮಾಜಿಕ ಅಸಮತೆ ವಿರುದ್ಧ ಸಂಘರ್ಷ ಮಾಡುವದು ಇದರ ಧ್ಯೇಯ, ಎಲ್ಲಿ ಸಂಘರ್ಷದ ಅವಶ್ಯಕತೆ ಇದೆಯೋ ಅಲ್ಲಿ ಸಂಘರ್ಷ ಮತ್ತು ಎಲ್ಲಿ ಸಹಕಾರದ ಅವಶ್ಯಕತೆ ಇದೆಯೋ ಅಲ್ಲಿ ಸಹಕಾರ ಕೊಡಬೇಕೆಂದು ಇದರ ನಿಯಮ, ನಿಯೋಜಕರು ಅಥವಾ ಸರ್ಕಾರ ಇದರ ವಿರುದ್ಧವಾದರೆ ಇವರು ಸಹ ವಿರುದ್ಧವಾಗಿ ನಿಲ್ಲುವರು, ಒಂದು ವೇಳೆ ನಿಯೋಜಕರು ಅಥವಾ ಅಥವಾ ಸರ್ಕಾರ ಸಹಯೋಗ ಕೇಳಿದರೆ ಇವರು ಸಹಕಾರ ಕೊಡುವರು,ಇದನ್ನು ಭಾರತಿಯ ಮಜ್ದೂರ ಸಂಘ ” ಪ್ರತ್ಯುತ್ತರ ಸಹಯೋಗ ” ಅಥವಾ ರೆಸ್ಪಾಸಿವ್ ಕೋ ಓಪರೇಷನ್ಎಂದು ಹೆಸರಿಸಿ ನಿಯೋಜಕರಿಗೆ ಹಾಗೂ ಸರ್ಕಾರಕ್ಕೆ ಈ ನಿಯಮಗಳನ್ನು ಒಪ್ಪಿಕೊಳ್ಳುವಂತೆ ತೆಂಗಡೆಜಿ ರವರಿಂದ ಆಹ್ವಾನ ನೀಡಲಾಗಿತ್ತು ಎಂದು ತಿಳಿಸಿದರು.

ದೇಶದಲ್ಲಿ ಔದ್ಯೋಗಿಕರಣಉದ್ಯೋಗ ದಲ್ಲಿ ಶ್ರಮಿಕರ ಪಾತ್ರ ಹಾಗೂ ಶ್ರಮಿಕರ ರಾಷ್ಟೀಕರಣ” ಈ ಮೂರು ಸೂತ್ರಗಳಲ್ಲಿ ಭಾರತೀಯ ಮಜ್ದೂರ ಸಂಘ ತನ್ನ ಉದ್ದೇಶವನ್ನು ಸ್ಪಷ್ಟ ಪಡಿಸಿದೆ. “ದೇಶದ ಹಿತಕ್ಕಾಗಿ ಕೆಲಸ ಮಾಡುವದು, ಕೆಲಸಕ್ಕೆ ತಕ್ಕಂತೆ ಬೆಲೆ ತೆಗೆದುಕೊಳ್ಳವದು ಹಾಗೂ ಭಾರತೀಯ ಮಜ್ದುರ ಸಂಘದ ಗುರುತೇನೆಂದು ಕೇಳಿದರೆ ತ್ಯಾಗ, ತಪಸ್ಸು ಮತ್ತು ಬಲಿದಾನ ” ಎಂದು ಘೋಷಣೆ ಮಾಡಲಾಯಿತು.

ಅದೇ ಇನ್ನೊಂದು ಕಡೆ ಕಮ್ಯುನಿಸ್ಟ್ ರ ಘೋಷಣೆ – ವಿಶ್ವ ದ ಶ್ರಮಿಕರೆ ಒಗ್ಗಟ್ಟಾಗಿ ” ಎಂದಾದರೆ ಶ್ರಮಿಕರೆವಿಶ್ವವನ್ನು ಒಗ್ಗಟಾಗಿಸಿ ” ಎನ್ನುವುದು ಭಾರತೀಯ ಮಜ್ದುರ ಸಂಘದ ಘೋಷಣೆಗಳಾದವು, ಕಮ್ಯುನಿಸ್ಟ್ ರ ಇಂಕಿಲಾಬ್ ಮತ್ತು ಲಾಲ್ ಸಲಾಂ ಘೋಷಣೆಗೆ ಬದಲಾಗಿ ಭಾರತೀಯ ಮಜ್ದುರ ಸಂಘದವರು ” ಭಾರತ್ ಮಾತಾ ಕಿ ಜೈ ಮತ್ತು ವಂದೇ ಮಾತರಂ ” ಉದ್ಘೋಷಣೆ ಆಯ್ದುಕೊಂಡರು.

ಮೊದಲು ಶ್ರಮಿಕ ವರ್ಗದವರಿಗೆ ಈ ಘೋಷಣೆ ಅಪರಿಚಿತವಾಗಿತ್ತು. ಭಾ.ಮ.ಸಂಘವು ಸೌಮ್ಯವಾದಿಗಳು ಕೆಂಪು ಬಣ್ಣದ ಬದಲಾಗಿ ಕೇಸರಿ ಬಣ್ಣದ ಧ್ವಜವನ್ನು ತಮಗೆ ಸ್ಪೂರ್ತಿದಾಯಕವೆಂದು ಆರಿಸಿಕೊಂಡರು, ಕಡಗೋಲು ಮತ್ತು ಸುತ್ತಿಗೆ ಬದಲಾಗಿ ಮನುಷ್ಯರ ಹೆಬ್ಬೆಟ್ಟು ಹಾಗೂ ಉದ್ಯೋಗ ಚಕ್ರವನ್ನು ತಮ್ಮ ಚಿಹ್ನೆಯನ್ನಾಗಿ ಬಳಸಿಕೊಂಡರು, ಸೌಮ್ಯವಾದಿಗಳು ಮೇ 1 ರ ಬದಲಾಗಿ ಸೆಪ್ಟೆಂಬರ್ 17 ರ ವಿಶ್ವ ಕರ್ಮ ಜಯಂತಿಯನ್ನು ಶ್ರಮಿಕರ ರಾಷ್ಟ್ರೀಯ ಶ್ರಮ ದಿವಸವೆಂದು ಘೋಷಿಸಿದರು.

1955 ರಲ್ಲಿ ದತ್ತೋಪಂತ್ ತೆಂಗಡೆಜಿರವರುಭಾರತೀಯ ಮಜ್ದುರ ಸಂಘದ ಸ್ಥಾಪನೆ ಮಾಡಿದಾಗ ಪ್ರಪಂಚದ ಬೇರೆ ಕಡೆಗಳಲ್ಲಿ ಹಾಗೂ ಭಾರತದಲ್ಲಿಯೂ ಸಹ ಸೌಮ್ಯವಾದ ತನ್ನ ಉತ್ತಂಗದ ಸ್ಥಿತಿಯಲ್ಲಿತ್ತು,ಇನ್ನೊಂದೆಡೆ ಭಾರತೀಯ ಮಜ್ದುರ ಸಂಘ ವು ಶೂನ್ಯದಿಂದ ಪ್ರಾರಂಭವಾಗಿದ್ದು ಇದರಲ್ಲಿ ಸದಸ್ಯರಾಗಲಿ, ಹಣವಾಗಲಿ, ತನ್ನದೇ ಆಟದ ಮೈದಾನವಾಗಲಿ, ಕಾರ್ಯಾಲಯವಾಗಲಿ ಯಾವುದನ್ನು ಹೊಂದಿರಲಿಲ್ಲ ಈಗ ಎಲ್ಲಕಾರ್ಮಿಕ ಸಂಘಟನೆ ಗಳಿಗಿಂತ ಒಂದು ದೊಡ್ಡ ಕೇಂದ್ರೀಯ ಶ್ರಮಿಕ ಸಂಘಟನೆಯಾಗಿ ಹೊರಹೊಮ್ಮಿದೆ, ಇದು ದತ್ತೋಪಂತ ತೆಂಗಡೆಜಿ ಯವರ ಕುಶಲ, ನಿಷ್ಠೆ, ಮತ್ತು ಚಮತ್ಕಾರಿ ನೇತೃತ್ವದ ಪರಿಣಾಮವಾಗಿತ್ತು ಎಂದು ಕಾರ್ಯಕ್ರಮದಲ್ಲಿ ದತ್ತೋ ಪಂತ್ ತೆಂಗಡೆಜಿ ರವರು ತೋರಿದ ಸಾಮಾಜಿಕ ಕಳಕಳಿ ಹಾಗೂ ನಿಸ್ವಾರ್ಥ ಸೇವೆಯ ಬಗ್ಗೆಜಯಂತೋತ್ಸವ ಕಾರ್ಯಕ್ರಮ ಉದ್ದೇಶಿಸಿಮಾತನಾಡಿದರು.

ಇದೆ ಸಂಧರ್ಭದಲ್ಲಿ ಭಾರತೀಯ ಮಜ್ದೂರ ಸಂಘದ ಮಾಜಿ ರಾಜ್ಯಾಧ್ಯಕ್ಷರಾದ ಶಂಕರ ಸುಲೇಗಾಂವ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಸೂಗಣ್ಣ ಅವಂತಿ, ಹಿರಿಯರಾದ ನರಸಿಂಹ ಮಳಖೇಡ್ಕರ್, ಸಹ ಕಾರ್ಯದರ್ಶಿಗಳಾದ ಶಿವರಾಜ್ ವಾರಿಕ್ಸಿಮೆಂಟ್ ನ ಸಂಘದ ಅಧ್ಯಕ್ಷರಾದ ಬಸವರೆಡ್ಡಿ, ಪ್ರಧಾನ್ ಕಾರ್ಯದರ್ಶಿಗಳಾದ ಶೇಖರ ರೆಡ್ಡಿ, ಕಟ್ಟಡ ಕಾರ್ಮಿಕ ಸಂಘದ ಗೀತಾ ಕುಲಕರ್ಣಿ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here