ಶಹಾಬಾದ: ನಗರದಲ್ಲಿರುವ ವಿಕಲಚೇತನರಿಗೆ ಶೇ.5% ಅನುದಾನದಲ್ಲಿ ತ್ರಿಚಕ್ರ ವಾಹನ ಹಾಗೂ ಸರಕಾರದಿಂದ ಲಭಿಸುವ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿ ಮಂಗಳವಾರ ನಗರಸಭೆಯ ಮುಂಭಾಗದಲ್ಲಿ ಶಹಾಬಾದ ತಾಲೂಕಾ ವಿಕಲಚೇತನ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಭಟನೆಗೆ ಬೆಂಬಲ ನೀಡಿ ಮಾತನಾಡಿದ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ, ನಗರಸಭೆಯ ಅಧಿಕಾರಿಗಳು ವಿಕಲಚೇತನರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಕೊಡಬೇಕಾದುದು ಮೊದಲ ಕರ್ತವ್ಯ.ಆದರೆ 2022-23ರಲ್ಲಿ ಅರ್ಜಿ ಹಾಕಿದವರಿಗೆ ತ್ರಿಚಕ್ರ ವಹನ ನೀಡಿಲ್ಲ.ಅಲ್ಲದೇ 2023-24ನೇ ಸಾಲಿನ 5% ವಿಕಲಚೇತನರ ಅನುದಾನದಲ್ಲಿ ವಿಕಲಚೇತನರಿಗೆ ಸೌಲಭ್ಯಗಳನ್ನು ನೀಡಿಲ್ಲದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸಾಮನ್ಯ ವ್ಯಕ್ತಿಗಳ ತಮ್ಮ ಕೆಲಸಕ್ಕೆ ಬಂದಾಗ ಅವರಿಗೆ ಸತಾಯಿಸುವುದು ಕಂಡಿದ್ದೆವೆ.ಆದರೆ ವಿಕಲಚೇತನರಿಗೂ ಸತಾಯಿಸುವ ದುರ್ಬದ್ಧಿ ಯಾರಿಗೂ ಇರಕೂಡದು.ಅವರಿಗೆ ಮೊದಲ ಆದ್ಯತೆ ನೀಡಬೇಕಾದುದು ನಾಗರಿಕ ಸಮಾಜದ ಮೊಲ ಕರ್ತವ್ಯ.ಆದ್ದರಿಂದ ಕೂಡಲೇ ಅವರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲೇಶಿ ಭಜಂತ್ರಿ, ಹೋರಾಟಗಾರ ಮಲ್ಕಣ್ಣ ಮುದ್ದಾ ಮಾತನಾಡಿ, ಕೋವಿಡ್ ನಂತರ ತೆಗೆದಿರಿಸಲಾದ 5% ಅನುದಾನ ಬಿಡುಗಡೆ ಮಾಡಿಲ್ಲ. ನಗರದಲ್ಲಿ ಸುಮಾರು ಒಂದು ಸಾವಿರಕ್ಕಿಂತ ಹೆಚ್ಚು ವಿಶೇಷ ಚೇತನರು ವಾಸವಾಗಿದ್ದಾರೆ.
ಈಗಾಗಲೇ 60 ಜನ ವಿಕಲಚೇತನರು ಅರ್ಜಿ ಸಲ್ಲಿಸಿದ್ದು ಇದರಲ್ಲಿ 35 ಜನ ರನ್ನ ಆಯ್ಕೆ ಮಾಡಲಾಗಿದೆ.ಆದರೂ ಆದರೆ ಇನ್ನೂವರೆಗೂ ತ್ರಿಚಕ್ರ ವಾಹನ ವಿತರಿಸಿಲ್ಲ. ವಿಕಲಚೇತನ ಕ್ಷೇಮಾಭಿವೃದ್ಧಿ ಸಂಘದವರು ಈಗಾಗಲೇ ಐದಾರು ಬಾರಿ ಮನವಿ ಪತ್ರಗಳನ್ನು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ನಂತರ ಜಿಲ್ಲಾಧಿಕಾರಿಗಳ ಕಚೇರಿ ಗಮನಕ್ಕೆ ತರಲಾಗಿದೆ .ಆದರೂ ತ್ರಿಚಕ್ರ ವಾಹನ ನೀಡುತ್ತಿಲ್ಲ. ಕೂಡಲೇ ಬೇಡಿಕೆಗಳನ್ನು ಈಡೇರದಿದ್ದರೇ ದಸಂಸ, ಕರವೇ, ಪ್ರಗತಿಪರ ಸಂಘಟನೆಗಳು ಸೇರಿ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಧರಣಿ ಸತ್ಯಾಗ್ರಹದಲ್ಲಿ ತಾಲ್ಲೂಕ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಅನಿಲ ಮಠಪತಿ, ಮಲ್ಲಿಕಾರ್ಜುನ ಹಳ್ಳಿ, ಮಿಲಿಂದ ಕುಮಾರ, ಸುಭಾಸ ಕಾಂಬಳೆ, ಅಮ್ಜದ ಶರೀಫ, ಶಂಕರ, ಲಕ್ಷ್ಮಣ, ಜ್ಯೋತಿ, ಗಂಗೂಬಾಯಿ, ಲಕ್ಷ್ಮೀ, ಗೋವರ್ಧನ ರಾಠೋಡ, ಹಾಗೂ ನಾಗಪ್ಪ ರಾಯಚೂರಕರ, ಮಲ್ಲಿಕಾರ್ಜುನ ಕಟ್ಟಿಮನಿ, ಬಸವರಾಜ ಮಯೂರ, ರಾಘವೇಂದ್ರ ಎಂಜಿ, ಜಗನ್ನಾಥ ಎಸ್.ಹೆಚ್, ನರಸಿಂಹಲು, ಗೋವಾ ಬಾಬು, ಕರವೇ ವಿಶ್ವರಾಜ ಫೀರೋಜಬಾದ ಸೇರಿದಂತೆ ಅನೇಕ ಜನ ವಿಕಲಚೇತನರು ಉಪಸ್ಥಿತರಿದ್ದರು.