“ಸಮನ್ವಯ ಚೇತನ’ ಪುಸ್ತಕ ಲೋಕಾರ್ಪಣೆ

0
66

ಶಹಾಪುರ: ಪ್ರಜ್ಞಾಪೂರ‍್ವಕವಾಗಿ ಮತ್ತೊಂದು ಜನಾಂಗವನ್ನು ಎತ್ತಿಕಟ್ಟಿ ದ್ವೇಷದ ವಿಷ ಬೀಜ ಬಿತ್ತುವುದು. ಪ್ರಶ್ನೆ ಕೇಳುವುದನ್ನು ದೇಶದ್ರೋಹ ಎನ್ನುವ ಆತಂಕಕಾರಿ ಬೆಳವಣಿಗೆಯನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮೂಡಿಸುತ್ತಿವೆ. ನಾವೆಲ್ಲರೂ ಇನ್ನಷ್ಟು ಜಾಗೃತರಾಗಿಬೇಕು ಎಂದು ಸಾಹಿತಿ ಡಾ.ಕಾಶಿನಾಥ ಅಂಬಲಗಿ ತಿಳಿಸಿದರು.

ಇಲ್ಲಿನ ಚರಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಸಯ್ಯದ ಚಾಂದಸಾಬ್ ಇನಾಮದಾರ(ಪೂಲಛಡಿ) ಅವರ ವಿಕ್ತಿತ್ವ ಮತ್ತು ಸಾಧನೆ ಕುರಿತು ಉಪನ್ಯಾಸಕ ರಾಘವೇಂದ್ರ ಹಾರಣಗೇರಾ ಸಂಪಾದಿಸಿದ ಡಿದ”ಸಮನ್ವಯ ಚೇತನ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾರು.

Contact Your\'s Advertisement; 9902492681

ಗೋ ಹತ್ಯೆ ಹೆಸರಿನಲ್ಲಿ ನರಬಲಿಯಾಗುತ್ತಿದೆ. ನಾವು ಊಟ ಮಾಡುವ ಆಹಾರವನ್ನು ಮತ್ತೊಬ್ಬರು ಕೇಳಿ ತಿನ್ನುವಂತೆ ಆಗಿದೆ. ಕೋಮುವಾದಿಗಳು ಮನಸ್ಸುಗಳನ್ನು ಒಡೆದು ಚೂರು ಮಾಡುತ್ತಿದ್ದಾರೆ. ಕೂಡಿಬಾಳುವ ಬದುಕಿಗೆ ಹಾಗೂ ಸಾರ‍್ವಜನಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಭೀತಿಯಲ್ಲಿ ಕಾಲ ಕಳೆಯುತ್ತಿದ್ದೇವೆ.ಇಲ್ಲದೆ ಹೋದರೆ ಶೂಟೌಟ್ ನಡೆಯತ್ತಿದೆ. ಭಾವೈಕ್ಯತೆಯ ತಾಣ ಕಲ್ಯಾಣ ಕರ‍್ನಾಟಕವಾಗಿದೆ. ಜಾತಿಯ ಹಾಗೂ ಧರ‍್ಮದ ಸೊಂಕು ಇಲ್ಲದೆ ನಾವೆಲ್ಲರೂ ಸೋದರತ್ವದ ಭಾವನೆಯಲ್ಲಿ ಕಾಲ ಕಳೆಯುತ್ತಿದ್ದೆವೆ ಎನ್ನುವದಕ್ಕೆ ಚಾಂದಸಾಬ್ ಮೇಸ್ಟ್ರು ನಮ್ಮೆಲ್ಲರಿಗೆ ಪ್ರೇರಣೆ ಹಾಗೂ ದಾರಿ ದೀಪವಾಗಿದ್ದಾರೆ ಎಂದರು.

ಕಲಬುರ‍್ಗಿ ಕೇಂದ್ರಿವ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಅಪ್ಪಗೆರೆ ಸೋಮಶೇಖರ ಕೃತಿಯ ಬಗ್ಗೆ ಮಾತನಾಡಿದ ಅವರು, ನಾವೆಲ್ಲರೂ ವಿನಯ ಹಾಗೂ ಹಿರಿಯರ ಮಾತು ಕೇಳುತ್ತಿಲ್ಲವಾಗಿದ್ದರಿಂದ ದಾರಿ ತಪ್ಪಿದ ಮಕ್ಕಳಾಗುತ್ತಿದ್ದೇವೆ. ಬಹುಜನರ ಹಿತಾಸಕ್ತಿಯನ್ನು ಒಬ್ಬರ ಹಿತಾಸಕ್ತಿಯನ್ನು ಬಿಂಬಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಜಾತಿ, ಧರ‍್ಮ ಹಾಗೂ ಭಾಷೆಯನ್ನು ಮೀರಿ ಬದುಕುವ ಕಲೆಯನ್ನು ಅಣ್ಣ ಬಸವಣ್ಣನವರು ನಮಗೆ ತಿಳಿಸಿದರು.ಅಲ್ಲದೆ ಎಲ್ಲವುದಕ್ಕಿಂತ ಸಂಬಂಧವೇ ದೊಡ್ಡದು ಎಂಬುವುದರ ಹೆಗ್ಗುರುತಿನ ಫಲವಾಗಿ ಫೂಲ್‌ಛಡಿಯ ಚಾಂದಪಾಶ ಮೇಸ್ಟ್ರು ಸಮನ್ವಯದ ಚೇತನಕ್ಕೆ ಸಾಕ್ಷಿಯಾಗಿದ್ದಾರೆ.

ಜನರನ್ನು ಒಂದುಗೂಡಿಸುವುದು ದೇವರನ್ನು ಬೆಂಬಿಲಿಸಿದಂತೆ. ದೇವರು ಮತ್ತು ಗುರು ಇಬ್ಬರಲ್ಲಿ ಯಾರು ಶ್ರೇಷ್ಟರು ಎನ್ನುವಾಗ ದೇವರು ಇರುವಿಕೆ ಅರಿವು ಮೂಡಿಸಿದವರು ಗುರು ಆಗಿದ್ದಾರೆ. ಆದರಿಂದ ದೇವರಿಗಿಂತ ಗುರು ದೊಡ್ಡವರು ಆಗಿದ್ದಾರೆ. ಆದರೆ ಈಗ ಹಿಂಸೆಯನ್ನು ಧ್ಯಾನಿಸುವ ಕಾಲದಲ್ಲಿ ಮತ್ತು ಪರಸ್ಪರ ಅನುಮಾನ ಹುಟ್ಟಿಸುವ ಗಳಗೆಯನ್ನು ತೊಡೆದು ಹಾಕಲು ಇನ್ನಷ್ಟು ಚಾಂದಸಾಬ್ ನಂತಹ ಮೇಸ್ಟ್ರು ಬೇಕಾಗಿದೆ ಎಂದರು.

ಶಾಸಕ ಶರಣಬಸಪ್ಪ ದರ‍್ಶಣಾಪುರ, ಸಮನ್ವಯ ಚೇತನ ಪುಸ್ತಕ ಸಂಪಾದಕ ರಾಘವೇಂದ್ರ ಹಾರಣಗೇರಾ, ವೇದಮೂರ‍್ತಿ ಬಸವಯ್ಯ ಶರಣರು, ಚಂದಾಹುಸೇನಿ ದರ‍್ಗಾದ ಸಯ್ಯದ ಹುಸೇನಿ,ಸಯ್ಯದ ಷಾ ಮಹಿಬೂಬು ಹುಸೇನಿ, ಕಲ್ಯಾಣದಯ್ಯ ಸ್ವಾಮಿ, ಸಂಸ್ಥೆಯ ಆಡಳಿತಾಧಿಕಾರಿ ಭೀಮಣ್ಣಗೌಡ ಇಟಗಿ, ಕಾಶಿನಾಥರಡ್ಡಿ, ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ್, ಪ್ರಗತಿಪರ ಚಿಂತಕ ರಾಹುಲ ಬೆಳಗಲಿ, ಗುಂಡಪ್ಪ ತುಂಬಿಗಿ, ಸಾಹಿತಿಗಳಾದ ಸಿದ್ರಾಮ ಹೊನ್ಕಲ್, ಚಂದ್ರಕಾಂತ ಕರದಳ್ಳಿ, ರವಿ ಹಿರೇಮಠ, ಸಿದ್ದಲಿಂಗಪ್ಪ ಆನೇಗುಂದಿ, ಶಿವಣ್ಣ ಇಜೇರಿ, ಗುರುಬಸವಯ್ಯ ಗದ್ದುಗೆ, ಸಣ್ಣ ನಿಂಗಪ್ಪನಾಯ್ಕೋಡಿ, ಆನಂದ ಸಾಸನೂರ,ಶಿವರಂಜನ ಸತ್ಯಂಪೇಟೆ, ಡಾ.ಮಹೇಶ ಗಂವ್ಹಾರ, ಕಾಲೇಜಿನ ಪ್ರಾಚಾರ‍್ಯರಾದ ಸಿದ್ದಲಿಂಗಣ್ಣ ಸಾಹು, ಧರ‍್ಮಣ್ಣಗೌಡ ಹುಲಕಲ್, ಅನಿತಾ ಪಾಟೀಲ್,ಸಿದ್ದಣ್ಣ ಮಾನಸೂಣಗಿ, ಶುಭಲಕ್ಷ್ಮಿ ಸಿದ್ದಯ್ಯ ಸ್ವಾಮಿ ಕನ್ಯಾಕೊಳ್ಳೂರ,ಡಾ.ಶೈಲಜಾ ಬಾಗೇವಾಡಿ, ಹಣಮಂತಿ ಗುತ್ತೆದಾರ, ಭಾಗ್ಯಶ್ರೀ ದೊರೆ, ಬಸವರಾಜ ಸಿನ್ನೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here