ಥಾರಕಾರ ಮಳೆ: ಹಲವಡೆ ಸಂಪರ್ಕ ಕಡಿತ, ಶಾಲೆ, ಕಾಲೇಜಿಗೆ ನುಗ್ಗಿದ ನೀರು: ಕೋಚ್ಚಿದ ಸೇತುವೆ

0
156

ಆಳಂದ: ತಾಲೂಕಿನ ಖಜೂರಿ, ಆಳಂದ ಮತ್ತು ಕೋರಳ್ಳಿ ವಲಯದಲ್ಲಿ ದಾರಕಾರ ಮಳೆಯಾಗಿದ್ದರಿಂದ ಕೃಷಿ ಚುಟವಟಿಕೆ ಸೇರಿದಂತೆ ಇನ್ನಿತರ ವ್ಯಾಪಾರ ವೈಹಿವಾಟಿಕೆಗೆ ಅಡೆ, ತಡೆಯಾಗಿ ಜನ ಜೀವನ ಅಸ್ತವ್ಯವಸ್ಥವಾಗಿದೆ.
ತಾಲೂಕಿನಲ್ಲಿ ಮುಂಗಾರಿನ ಮಳೆ ಕೊರತೆಯ ಚಿಂತೆಯ ನಡುವೆ ಹಿಂಗಾರಿನಲ್ಲಿ ಖಜೂರಿ, ಆಳಂದ ಕೋರಳ್ಳಿ ಮತ್ತು ನಿಂಬರಗಾ ವಲಯದಲ್ಲಿ ಉತ್ತಮ ಉಳೆಯಾದ ಹಿನ್ನೆಲೆಯಲ್ಲಿ ರೈತ ಸಮುದಾಯದಲ್ಲಿ ಸಂತಷ ಮೂಡಿಸಿದೆ. ಹೆಚ್ಚು ಕಡಿಮೆ ನರೋಣಾ ಮತ್ತು ಮಾದಹಿಪ್ಪರಗಾ ವಲಯದಲ್ಲಿ ಮಳೆಯ ಕೊರತೆ ಕಂಡುಬಂದರು ಸದ್ಯ ಬೆಳೆಗಳಿಗೆ ತೃಪ್ತಿಕರವಾಗಿ ಪರಿಣಮಿಸಿದೆ ಎನ್ನಲಾಗಿದೆ.

ತಾಲೂಕಿನ ಏಳು ಮಳೆಮಾಪನ ಕೇಂದ್ರ ವ್ಯಾಪ್ತಿಯ ಪೈಕಿ ಸೋಮವಾರ ಬೆಳಗಿನ ಜಾವ ಖಜೂರಿ ವಲಯದಲ್ಲಿ ೧೩೦ ಮಿ.ಮೀ ವರ್ಷದ ಹೆಚ್ಚಿನ ಮಳೆಯಾಗಿ, ಹಳ್ಳ, ನಾಲಾ, ಕೆರೆ ಕಟ್ಟೆಗಳು ಭರ್ತಿಯಾಗಿ ಹರಿಯತೊಡಗಿದ್ದು, ಅಲ್ಲಲ್ಲಿ ಕೊಳವೆ ಬಾವಿ, ತೆರೆದ ಬಾವಿಗಳಿಗೆ ನೀರು ಮರುಪೂರಣಗೊಂಡು ಆಶಾದಾಯಕವಾಗಿ ಪರಿಣಮಿಸಿದೆ. ಅಲ್ಲದೆ, ಆಳಂದ ವಲಯದಲ್ಲಿ ೬೦.೪ ಮಿ.ಮೀ, ಕೋರಳ್ಳಿ ೮೫ ಮಿ.ಮೀ ಮಳೆಯಾಗಿದ್ದರಿಂದ ಅಂತರ್ಜಲ ಹೆಚ್ಚಾಗಿದೆ.

Contact Your\'s Advertisement; 9902492681

ನರೋಣಾ ಅತಿಕಡಿಮೆ ೯.೦ ಮಿ.ಮೀ, ನಿಂಬರಗಾ ೧೨.೬ ಮಿ.ಮೀ, ಮಾದನಹಿಪ್ಪರಗಾ ೩.೪ ಮಿ.ಮೀ, ಸರಸಂಬಾ ೪.೪ ಮಿ. ಮೀ, ಮಾತ್ರ ಮಳೆಯಾಗಿದೆ. ಕಳೆದ ತಿಂಗಳ ನಿಂಬರಗಾ ವಲಯದಲ್ಲಿ ಅ. ೨೫ರಂದು ೧೪೦ ಮಿ.ಮೀ ಮಳೆಯಾಗಿ ಸದ್ಯ ನೀರಿನ ದಾಹ ಹಿಂಗಿಸಿದೆ ಎನ್ನಲಾಗಿದೆ.

ನೀರು ಸಂಗ್ರಹ: ಶಾಲಾ ಆರಂಭದಿನವಾಗಿದ್ದ ಸೋಮವಾರ ಪಟ್ಟಣದ ಜೂನಿಯರ ಕಾಲೇಜು ಮತ್ತು ತೆಲಾಕುಣಿ ಗ್ರಾಮದ ಶಾಲೆ ಆವರಣದಲ್ಲಿ ನೀರು ನುಗ್ಗಿದ್ದರಿಂದ ಮಕ್ಕಳು ಕೋಣೆಯೊಳಗೆ ಬಾರದಂತಾಗಿದೆ. ಮತ್ತೊಂದಡೆ ಕಿಣ್ಣಿಸುಲ್ತಾನ ಗ್ರಾಮದ ಕೆಲವು ಮನೆಗಳಲ್ಲಿ ನೀರು ನುಗ್ಗು ಸಾಮಗ್ರಿಗಳ ಹಾಳಾಗು ಬದುಕು ದುಸ್ಥರವಾದ ವರದಿಯಾಗಿದೆ.

ರಸ್ತೆ ಸಂಪರ್ಕ ಕಡಿತ: ನೀರಿನ ಪ್ರವಾಹದಿಂದಾಗಿ ಪಟ್ಟಣದ ಹೊರವಲಯದ ಆಳಂದ-ತಡಕಲ್ ಮಾರ್ಗದ ರಾಜ್ಯ ಹೆದ್ದಾರಿ ಸಂಖ್ಯೆ ೩೨ರ ಸಂಪರ್ಕ ರಸ್ತೆ ಸೇತುವೆಗೆ ನಸುಕಿನ ಜಾವದಿಂದ ಮಧ್ಯಾಹ್ನದ ವರೆಗೆ ನೀರಿನ ಪ್ರವಾಹದಿಂದಾಗಿ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಸೇರಿ ವಾಹನ ಸವಾರು ಪರದಾಡಿದರು. ಅಲ್ಲದೆ, ದೂರದ ಮಾರ್ಗ ಬದಲಿಸಿ ಸಂಚರಿಸಿ ಊರು ಮುಟ್ಟಿದರು. ಪಟ್ಟಣದ ಹನುಮಾನ ರಸ್ತೆಯ ಡಿಗ್ರಿ ಕಾಲೇಜು ರಸ್ತೆಯ ಸೇತುವೆ ಮೇಲಿಂದ ಹೆಚ್ಚಿನ ಪ್ರಮಾಣದ ನೀರು ಹರಿದ ಪ್ರಯುಕ್ತ ಸಂಪರ್ಕ ಕಡಿತಗೊಂಡು ಜನ ತೊಂದರೆ ಅನುಭವಿಸಿದ್ದಾರೆ. ಅಲ್ಲದೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಾದೇವಿ ವಣದೆ ಅವರಿಗೆ ಸೇರಿದ ಚೆಂಡು ಹೂವಿನ ತೋಟ ಜಲಾವೃತಗೊಂಡ ಹಾನಿಯಾಗಿದೆ. ಮತ್ತೊಂದಡೆ ಕೋತನಹಿಪ್ಪರಗಾ ವಲಯದಲ್ಲಿ ಸೇತುವೆ ನೀರು ಉಕ್ಕಿ ಹರಿದು ಕೆಲಕಾಲ ಸಂಪರ್ಕ ಕಡಿತೊಂಡಿದೆ. ಅಮರ್ಜಾ ಹಳ್ಳಕ್ಕೆ ಭೂಸನೂರ ಮತ್ತು ಸಕ್ಕರೆ ಕಾರ್ಖಾನೆ ನಡುವಿನ ಸೇತುವೆ ಅಪಾರ ಪ್ರಮಾಣದ ನೀರು ಹರಿದ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಜನ ಪರದಾಡಿದ್ದಾರೆ.

ಸೇತುವೆ ಹಾನಿ: ತಾಲೂಕಿನ ಕೋತನಹಿಪ್ಪರಗಾ ನಂದಗೂರ ಗ್ರಾಮದಲ್ಲಿ ಸಂಪರ್ಕ ಸೇತುವೆ ಮತ್ತು ಕಡಲನಿಂದ ಕಣಮುಸ್ ಸಂಪರ್ಕ ಸೇತುವೆ ಮಳೆ ನೀರಿಗೆ ಕೊಚ್ಚಿಹೋಗಿ ಸಂಪರ್ಕ ಪೂರ್ಣವಾಗಿ ಕಡಿತಗೊಂಡಿದೆ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಈರಣ್ಣಾ ಕುಣಿಕೇರಿ ಅವರು ತಿಳಿಸಿದ್ದಾರೆ. ಮನೆ ಕುಸಿತ: ಧಾರಾಕಾರ ಮಳೆಯಿಂದಾಗಿ ತಡೋಳಾ ಗ್ರಾಮದಲ್ಲಿ ಸುಮಾರು ಐದಾರು ಮನೆಗಳು ಭಾಗಃಶ ಕುಸಿದು ಬಿದ್ದಿವೆ. ಇಲ್ಲಿನ ಗೌರಿಶಂಕರ ಬಿ. ಬೋಳಶೆಟ್ಟಿ, ದೇವಿದಾಸ ಕಾಂಬಳೆ, ಚಂದ್ರಕಾಂತ ಬೋಳಶೆಟ್ಟಿ ಸೇರಿ ಐದಾರು ಮನೆಗಳು ಕುಸಿದು ಹಾನಿಗೀಡಾಗಿದೆ. ಯಾವುದೇ ಜೀವಹಾನಿಯಾಗಿಲ್ಲ ಎಂದು ಗ್ರಾಮದ ರಾಮಮೂರ್ತಿ ಗಾಯಕವಾಡ ಅವರು ಹೇಳಿಕೊಂಡಿದ್ದಾರೆ.

ಅಮರ್ಜಾಕ್ಕೆ ನೀರು: ಮಳೆಗಾಲದ ತುದಿಯಲ್ಲಿ ಆಳಂದ, ಸಾಲೇಗಾಂವ, ಖಜೂರಿ, ಚಿತಲಿ, ಮಟಕಿ, ವಲಯದ ಹಳ್ಳದ ಪ್ರವಾಹ ಹರಿದ ಹಿನ್ನೆಲೆಯಲ್ಲಿ ಅಮರ್ಜಾ ಅಣೆಕಟ್ಟೆಗೆ ನಾಲ್ಕು ಅಡಿ ನೀರು ಮಾತ್ರ ಭರ್ತಿಯಾಗಿದೆ. ಇನ್ನೂ ಪೂರ್ಣ ಭರ್ತಿಗೆ ಸುಮಾರು ೨೦ ಅಡಿ ಬಾಕಿಯಿದೆ ಎಂದು ಅಂದಾಜಿಸಲಾಗಿದೆ. ಭಾಗಃಶ ಭರ್ತಿಯಾಗದೆ ಹೋದರೆ ಆಳಂದ, ಕೇಂದ್ರೀಯ ವಿವಿ ಸೇರಿ ಇನ್ನಿತರ ಕಡೆ ಕುಡಿಯುವ ನೀರಿಗಾಗಿ ಬೇಸಿಗೆಯಲ್ಲಿ ನೀರಿನ ಕೊರತೆಯಾಗುವ ಸಾಧ್ಯತೆ ಇದೆ.

ಬೆಳೆ ಹಾನಿ: ಆಳಂದ ಖಜೂರಿ, ಕೋರಳ್ಳಿ ಇನ್ನಿತರ ಕಡೆ ಹೀಗೆ ಮಳೆ ಮುಂದುವರೆದರೆ ಬೆಳೆದು ನಿಂತ ತೊಗರಿ ಹಾನಿಯಾಗುವ ಸಾಧ್ಯತೆ ಎದುರಾಗಿದ್ದು, ಅಲ್ಲದೆ ಕೋಯ್ಲಿಗೆ ಬಂದ ನೋರಾರು ರೈತರ ಸೋಯಾಭೀನ್ ಬೆಳೆ ಹಾನಿಯಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here