ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಒಂದು ರಾಷ್ಟ್ರ ಒಂದು ಚುನಾವಣೆ’ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದಕ್ಕೆ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು ಒಂದು ದೇಶ ಒಂದು ಚುನಾವಣೆ ಜಾರಿಗೆ ಪಣತೊಟ್ಟಿರುವ ಬಿಜೆಪಿ ಉದ್ದೇಶಿತ ಮಸೂದೆ ಮಂಡನೆಗಾಗಿ ಸಿದ್ಧತೆ ನಡೆಸಿದೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಬುಧವಾರವಷ್ಟೇ ಒಂದು ರಾಷ್ಟ್ರ ಒಂದು ಚುನಾವಣೆ ಕುರಿತು ಪ್ರಬಲ ಪ್ರತಿಪಾದನೆ ಮಾಡಿ, ದೇಶದಲ್ಲಿ ಆಗಾಗ್ಗೆ ಚುನಾವಣೆಗಳು ನಡೆಯುವುದು ಒಟ್ಟಾರೆ ಪ್ರಗತಿಗೆ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದರು. ಆ ಮೂಲಕ ಮಸೂದೆ ಜಾರಿಯ ಸುಳಿವು ನೀಡಿದ್ದರು.
ಭಾರತದ ಪ್ರಗತಿ ಮತ್ತು ಅಭಿವೃದ್ಧಿಗೆ ಆಗಾಗ್ಗೆ ಚುನಾವಣೆಗಳು ನಡೆಯುವುದು ಅಡಚಣೆಯಾಗಿ ಕಾಡುತ್ತಿದೆ. ದೇಶದಲ್ಲಿ ಬೇರೆ ಯಾವುದೇ ವಿಷಯ ನಡೆಯುತ್ತಿರಬಹುದು ಅಥವಾ ನಡೆಯದೇ ಇರಬಹುದು. ಆದರೆ ಚುನಾವಣಾ ತಯಾರಿ ವರ್ಷದ ಹನ್ನೆರಡು ತಿಂಗಳಲ್ಲೂ ಮುಂದುವರಿಯುತ್ತಿರುತ್ತದೆ.
ಲೋಕಸಭಾ ಚುನಾವಣೆ ಮುಗಿದರೆ ವಿಧಾನಸಭೆ ಚುನಾವಣೆ.ಈಗ ಹರಿಯಾಣ, ಜಮ್ಮು-ಕಾಶ್ಮೀರ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ಎಲೆಕ್ಷನ್ ಮುಗಿದಿದೆ. ದೆಹಲಿ ವಿಧಾನಸಭಾ ಚುನಾವಣೆ ಸದ್ಯದಲ್ಲೇ ನಡೆಯಲಿದೆ ಎಂದು ವಿವರಿಸಿದರು.
ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದ ಉನ್ನತ ಸಮಿತಿಯ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ನಡೆಯಬೇಕು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಹಂತಹಂತವಾಗಿ ಚುನಾವಣೆ ನಡೆಸಬೇಕು ಎಂಬ ಬಗೆಗಿನ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಅಂಗೀಕರಿಸಿತ್ತು ಎಂದು ತಿಳಿಸಿದರು.
ಆರ್ಥಿಕ ಹೊಣೆ ಕಡಿಮೆ: ಒಂದು ರಾಷ್ಟ್ರ ಒಂದು ಚುನಾವಣೆ ಯಿಂದ ದೇಶದ ಚುನಾವಣೆ ಸಮಯ ವರ್ಥ ಆಗುವುದು ಕಡಿತ ಆಗುತ್ತೆ, ದೇಶದ ಚುನಾವಣೆ ವೆಚ್ಚದ ಆರ್ಥಿಕ ಹೊಣೆ ಕೂಡ ಉಳಿತಾಯ ಆಗುತ್ತೆ, ದೇಶದ ಅಭಿವೃದ್ಧಿ ಕೂಡ ವೇಗ ಆಗುತ್ತದೆ .ಪ್ರಧಾನಿ ಮೋದಿ ಅವರ ಇ ನಿರ್ಧಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.