ಇ-ಮೀಡಿಯಾ ಲೈನ್ ನ್ಯೂಸ್
ಕಲಬುರಗಿ: ತಮಟೆ ಸಿನಿಮಾ ನವೆಂಬರ್ 29ರಂದು ಬಿಡುಗಡೆಯಾಗಿದ್ದು, ಅನ್ಯ ಭಾಷೆ ಚಿತ್ರದಿಂದ ಬಿಡುಗಡೆಯಾದ ಒಂದೆ ವಾರದಲ್ಲಿ ಪ್ರಸಾರ ನಿಲ್ಲಿಸಲಾಗಿದೆ ಎಂದು ತಮಟೆ ಸಿನಿಮಾದ ನಿರ್ದೇಶಕ, ನಾಯಕ ನಟ ಮದನ್ ಪಟೇಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನ್ಯ ಭಾಷೆಯ ಬಹುದೊಡ್ಡ ಸಿನಿಮಾ ರಿಲೀಸ್ ಆಗಿರುವುದರಿಂದ ಕನ್ನಡ ಸಿನಿಮಾಕ್ಕೆ ಬಹುದೊಡ್ಡ ಹೊಡೆತ ಬಿದ್ದಿದ್ದೆ. ಪ್ರಸಾರ ಕಡಿಮೆಗೊಳಿಸಿದರಿಂದ ಚಿತ್ರ ತಂಡ ಸಿನಿಮಾ ರೀ ರಿಲಿಸ್ ಮಾಡುವ ಚಿಂತನೆ ನಡೆಸಿದೆ. ಇದೊಂದು ತಳ ಸಮುದಾಯದ ಶೋಷಣೆಯ ಆಧರಿಸಿ ನಿರ್ಮಿಸಿದ ಚಿತ್ರವಾಗಿದ್ದು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರವನ್ನು ವೀಕ್ಷಿಸಿ ಸಹಕರಿಸಬೇಕು ಎಂದು ಸಿನಿ ಪ್ರೀಯರಲ್ಲಿ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಚಿತ್ರದ ಖಳನಾಯಕ ನಟ, ಪತ್ರಕರ್ತ ಮಹಿಪಾಲ್ ರೆಡ್ಡಿ ಮುನ್ನೂರ, ಮಾದಿಗ ಸಮಾಜದ ಮುಖಂಡ ವಿಜಯಕುಮಾರ್ ಆಡಕಿ, ಶಿವಕುಮಾರ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.