ಬದುಕು ಬರಹ ಒಂದಾದಾಗ ಮಾತ್ರ ಬದ್ಧತೆ: ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳು

0
58

ಕಲಬುರಗಿ: ಸಾಹಿತಿಗಳು ಬರೆದಂತೆ ಬದುಕಿದರೆ ಜೀವನಕ್ಕೆ ಬದ್ಧತೆ ಬರುತ್ತದೆ ಎಂದು ಖಜೂರಿಯ ಕೋರಣ್ಣೇಶ್ವರ ಮಠದ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳು ಅಭಿಪ್ರಾಯಪಟ್ಟರು.

ಮಂಗಳವಾರ ತಾಲೂಕಿನ ಭೂಸನೂರ ಗ್ರಾಮದಲ್ಲಿ ಹಿರಿಯರ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಡಾ. ನೀಲಾಂಬಿಕಾ ಪೊಲೀಸ ಪಾಟೀಲ ಅವರು ಬರೆದ ನೀರತಾವರೆ ಅಕ್ಕನಾಗಮ್ಮ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಶಿವಚಿಂತೆ, ಶಿವಧ್ಯಾನ ಮಾಡುವುದರಿಂದ ಸನ್ಮಾರ್ಗ ಪ್ರಾಪ್ತಿಯಾಗುತ್ತದೆ ಅದಕ್ಕಾಗಿ ನಾನು ನನ್ನದು ಎನ್ನುವ ಭಾವ ಹೋಗಿ ನಮ್ಮದು ಸಮಾಜದು ಎನ್ನುವ ಭಾವ ಬರಬೇಕು ಈ ನಿಟ್ಟಿನಲ್ಲಿ ಎಲ್ಲರು ಸಮಾಜದಿಂದ ಪಡೆದುದ್ದನ್ನು ಸಮಾಜಕ್ಕೆ ನೀಡುವ ಮೂಲಕ ಬದ್ಧತೆ ಮೆರೆಯಬೇಕು ಎಂದು ಹೇಳಿದರು.

Contact Your\'s Advertisement; 9902492681

ಶರಣರ ವಚನಗಳು ಅತ್ಯಂತ ಸರಳ ರೂಪದಲ್ಲಿ ಲಭ್ಯವಿದ್ದು ಅವಗಳನ್ನು ನಿರಂತರವಾಗಿ ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ರೀತಿಯ ಸಮಸ್ಯೆಗಳು ಬದುಕಿನಲ್ಲಿ ಎದುರಾಗುವುದಿಲ್ಲ ಎಂದು ನುಡಿದರು. ಸಾನಿಧ್ಯ ವಹಿಸಿ ಮಾತನಾಡಿದ ಜಿಡಗಾ ಅಚಲೇರಿ ಮಠದ ಬಸವರಾಜೇಂದ್ರ ಸ್ವಾಮಿಗಳು, ಒತ್ತಡವನ್ನು ನಿವಾರಿಸಿಕೊಳ್ಳುವಲ್ಲಿ ಆಧ್ಯಾತ್ಮ ಸಹಕಾರಿಯಾಗಿದೆ. ಆಧ್ಯಾತ್ಮವೆಂದರೆ ಜಗದ ಎಲ್ಲ ಬಂಧನಗಳನ್ನು ತೊರೆಯುವುದು, ಅರಿಷಡ್ವರ್ಗಗಳನ್ನು ನಿಯಂತ್ರಿಸಿಕೊಳ್ಳುವುದಾಗಿದೆ. ಮನುಷ್ಯ ಚಿಕ್ಕ ವಸ್ತುಗಳು ಮೇಲೆ ಆಸೆ ಪಡುವುದನ್ನು ಬಿಡಬೇಕು ಬಿಟ್ಟಾಗ ದೊಡ್ಡದೊಂದು ಉಡುಗೊರೆ ನಿಮಗೆ ದೊರೆಯುತ್ತದೆ ಎಂದು ಹೇಳಿದರು.

ಪ್ರಕಟಿತ ಕೃತಿ ನೀರತಾವರೆ ಅಕ್ಕನಾಗಮ್ಮ ಆಧ್ಯಾತ್ಮದ ಸಾಧಕಿಯ ಬದುಕಿನ ಮಾರ್ಗವನ್ನು ತೆರದಿಡುತ್ತದೆ. ಅಕ್ಕನಾಗಮ್ಮವನರು ನಿಜಜೀವನದಲ್ಲಿಯೂ ಕಮಲದಂತೆ ಕಂಗೊಳಿಸುತ್ತಾರೆ. ಹುಟ್ಟಿದ ಮನೆ, ಕೊಟ್ಟ ಮನೆ ಎರಡನ್ನು ಬಿಟ್ಟು ಸಮಾಜದ ಒಳಿತಿಗೆ ಅವರು ಕ್ರಮಿಸಿದ ದಾರಿ ಬಹು ದೂರವಾದದ್ದು ಎಂದು ತಿಳಿಸಿದರು.

ವೇದಿಕೆಯ ಮೇಲೆ ಭೂಸನೂರ ಹಿರೇಮಠದ ಶಂಭು ಸೋಮನಾಥ ಸ್ವಾಮೀಜಿ, ಶರಣಬಸಪ್ಪ ಮಾಲಿಪಾಟೀಲ ಜಾವಳಿ, ಬಸವಂತರಾವ ಮಾಲಿಪಾಟೀಲ ಇದ್ದರು. ಡಾ. ಪುಟ್ಟಮಣಿ ದೇವಿದಾಸ ಕೃತಿಯ ಪರಿಚಯ ಮಾಡಿದರು.
ಡಾ. ಸೀಮಾ ಪಾಟೀಲ, ಪಂ. ರೇವಯ್ಯ ವಸ್ತ್ರದಮಠ ಸಂಗೀತ ಸೇವೆ ಸಲ್ಲಿಸಿದರು. ಡಾ. ನೀಲಾಂಬಿಕಾ ಪೊಲೀಸ್‌ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಮೃತಪ್ಪಗೌಡ ನಿರೂಪಿಸಿದರೆ, ಧರ್ಮರಾಜ ಸಾಹು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here