ಕಲಬುರಗಿ: ಹಿರಿಯ ಪತ್ರಕರ್ತರಾದ ಅಜೀಜುಲ್ಲಾ ಸರ್ಮ ಅವರ 47ನೇ ವರ್ಷಗಳ ಉರ್ದು ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಸೇವೆ ಹಾಗೂ ಉರ್ದು ಪತ್ರಿಗೆಯಲ್ಲಿನ ಅವರ ಪ್ರಭಾವಿಕಾರಿ ಬರವಣಿಗೆ ಶ್ಲಾಘನೀಯವಾಗಿದೆ ಎಂದು ಶಾಸಕ ಅಲ್ಲಮ ಪ್ರಭು ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಯಾ ಸಾವೇರ ಸಂಘಟನೆ ಅರ್ಷದ ಇಸ್ಮಾಯಿಲ್ ಸ್ಮಾರಕ ಶಿಕ್ಷಣ ಟ್ರಸ್ಟ್ ಮತ್ತು ಅಂಜುಮನ್ ತಾರಕ್ಕಿ ಉರ್ದು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸರಂಭದಲ್ಲಿ ಅಜೀಜುಲ್ಲಾ ಸರ್ಮಸ್ತ್ ಅವರನ್ನು ‘ನ್ಮಾನಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕುಡಾ ಅಧ್ಯಕ್ಷರಾದ ಮಜರ್ ಆಲಂ ಖಾನ್, ನಯಾ ಸವೇರ ಸಂಘಟನೆಯ ಅಧ್ಯಕ್ಷ ಮೊದೀನ್ ಪಟೇಲ್ ಅಣಬಿ, ಖ್ಯಾತ ಉದ್ಯಮಿ ಇಲಿಯಾಸ್ ಸೇಠ ಬಾಗಬಾನ್, ಅಬ್ದುಲ್ ಜಬ್ಬಾರ್ ಗೋಲಾ, ಮೋದಿ ಇಸ್ಮಾಯಿಲ್ ಸಾಜಿದ್ ರಂಜೋಳ್ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.