ಕಿತ್ತೂರು ರಾಣಿ ಚೆನ್ನಮ್ಮಗೆ ಭಾರತ ರತ್ನ ಪ್ರಶಸ್ತಿ ನೀಡಲು ಆಗ್ರಹ

0
78

ಸುರಪುರ: ನಗರದ ತಹಸೀಲ್ ಕಾರ್ಯಾಲಯದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜಯಂತಿಯನ್ನು ತಾಲ್ಲೂಕು ಆಡಳಿತದಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಚೆನ್ನಮ್ಮನವರ ಭಾವಚಿತ್ರಕ್ಕೆ ತಹಸೀಲ್ದಾರ ನಿಂಗಣ್ಣ ಬಿರೆದಾರ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಾತನಾಡಿ,ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದ ಧೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮನಾಗಿದ್ದಾಳೆ.ಈಬಾರಿ ಚೆನ್ನಮ್ಮನವರ ಜಯಂತಿಯನ್ನು ಅಧ್ಧೂರಿಯಾಗಿ ಆಚರಿಸಬೇಕಿತ್ತು.ಆದರೆ ರಾಜ್ಯದಲ್ಲಿ ನೆರೆ ಹಾವಳಿಯಿಂದ ಜನರು ಸಂಕಷ್ಟದಲ್ಲಿರುವ ಕಾರಣದಿಂದ ಸರಳವಾಗಿ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಲ್ಲೂಕು ಬಣಜಿಗರ ಸಂಘದ ಪ್ರಧಾನ ಕಾರ್ಯದರ್ಶಿ ನಾಗಭೂಷಣ ಯಾಳಗಿ ಮಾತನಾಡಿ,ಕಿತ್ತೂರ ರಾಣಿ ಚೆನ್ನಮ್ಮನವರಿಗೂ ಸುರಪುರ ಸಂಸ್ಥಾನಕ್ಕೂ ಅವಿನಾಭಾವ ಸಂಬಂಧವಿತ್ತು.ಅಂದು ಸಂಗೊಳ್ಳಿ ರಾಯಣ್ಣನವರು ಸುರಪುರ ಸಂಸ್ಥಾನಕ್ಕೆ ಭೇಟಿ ನೀಡಿದ್ದರು,ಅಲ್ಲದೆ ಕಿತ್ತೂರು ರಾಣಿ ಚೆನ್ನಮ್ಮನು ಕೂಡ ಸುರಪುರ ಅರಸರ ಸೇನೆಯ ಸಹಕಾರ ಪಡೆದು ಯುದ್ಧ ಮಾಡಿದ ಇತಿಹಾಸವಿದೆ ಎಂದರು. ಚೆನ್ನಮ್ಮನವರು ಇಡೀ ದೇಶಕ್ಕೆ ಮಾದರಿ ಧೀರ ಮಹಿಳೆಯಾಗಿದ್ದಾಳೆ.ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುಧ್ಧ ಹೋರಾಡಿದ ಪ್ರಥಮ ಮಹಿಳೆಯಾಗಿದ್ದು.ಚೆನ್ನಮ್ಮನವರು ಅಂದು ಬಳಸುತ್ತಿದ್ದ ಖಡ್ಗ ಇಂದು ಇಂಗ್ಲೆಂಡಿನಲ್ಲಿದೆ.ಅದನ್ನು ಭಾರತಕ್ಕೆ ತರುವ ಕೆಲಸವನ್ನು ಕೇಂದ್ರ ಸರಕಾರ ಮಾಡಬೇಕಿದೆ ಜೊತೆಗೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದ ಕಿತ್ತೂರು ರಾಣಿ ಚೆನ್ನಮ್ಮನವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.

Contact Your\'s Advertisement; 9902492681

ಮತ್ತೋರ್ವ ಮುಖಂಡ ಡಿ.ಬಿ.ಪಾಟೀಲ ಮಾಲಗತ್ತಿ ಮಾತನಾಡಿ,ಒಬ್ಬ ಮಹಿಳೆಯಾಗಿ ರಾಜ್ಯಭಾರ ನಡೆಸಿ ಅಂದು ಬ್ರಿಟೀಷರ ವಿರುಧ್ಧ ಎದ್ದು ನಿಂತಿದ್ದ ಕಿತ್ತೂರ ರಾಣಿ ಚೆನ್ನಮ್ಮ ದೇಶದ ಎಲ್ಲಾ ಅರಸರಿಗೆ ಮಾದರಿಯಾಗಿದ್ದರು.ಇವರ ಸೇನೆಯ ದಂಡನಾಯಕನಾಗಿದ್ದ ಸಂಗೊಳ್ಳಿ ರಾಯಣ್ಣ ಇಂದು ಇತಿಹಾಸದಲ್ಲಿ ಅಚ್ಚಳಿಯದ ಹೋರಾಟಗಾರನಾಗಿ ಉಳಿಯುವಲ್ಲಿ ಚೆನ್ನಮ್ಮನವರ ಕೊಡುಗೆಯಿದೆ.ಸರಕಾರ ಮುಂದೆ ಅವರ ಜಯಂತಿಯನ್ನು ಇನ್ನೂ ಅಧ್ಧೂರಿಯಾಗಿ ಆಚರಿಸಬೇಕೆಂದರು.

ಕಾರ್ಯಕ್ರಮದಲ್ಲಿ ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ,ಎಪಿಎಂಸಿ ಸದಸ್ಯ ಮಲ್ಲಣ್ಣ ಸಾಹು ಮುಧೋಳ,ಸೂಗುರೇಶ ಮಾರದ,ಅಮರೇಶ ದೇಸಾಯಿ ದೇವಾಪುರ,ಶಿವು ಸಾಹುಕಾರ ರುಕ್ಮಾಪುರ,ಶಿವಕುಮಾರ ಕಲಕೇರಿ,ಚೆನ್ನಬಸವ ವಾಲಿ,ಸೂಗಪ್ಪ ತಳವಾರಗೇರಾ,ಭೀಮನಗೌಡ ಕೂಡಲಗಿ,ಶಿವನಗೌಡ ಬಿರೆದಾರ,ಬಸವರಾಜ ಹಯ್ಯಾಳ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here