ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ ಎಲ್ಲರು ಸಹಕರಿಸಿ: ತಹಸೀಲ್ದಾರ ಬಿರೆದಾರ

0
51

ಸುರಪುರ: ಈ ಬಾರಿ ನವೆಂಬರ್ ೧ ರಂದು ಅದ್ಧೂರಿಯಾಗಿ ಕನ್ನಡ ರಜ್ಯೋತ್ಸವವನ್ನು ಆಚರಿಸಲಾಗುವುದು,ಎಲ್ಲಾ ಇಲಾಖೆಯವರು ಸಹಕರಿಸುವಂತೆ ನೂತನ ತಹಸೀಲ್ದಾರ ನಿಂಗಣ್ಣ ಬಿರೆದಾರ ಮಾತನಾಡಿದರು.

ನಗರದ ತಹಸೀಲ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಅಂಗವಾಗಿ ಕರೆದಿದ್ದರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ರಾಜ್ಯೋತ್ಸವದಂದು ಬೆಳಿಗ್ಗೆ ಎಲ್ಲಾ ಇಲಾಖೆ ಕಚೇರಿಗಳಲ್ಲಿ ಮತ್ತು ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜು ಹಾಗು ಗ್ರಾಮ ಪಂಚಾಯತಿಗಳಲ್ಲಿ ಕಡ್ಡಾಯವಾಗಿ ಆಚರಣೆ ಮಾಡಿ,ನಂತರ ಒಂಬತ್ತು ಗಂಟೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣಕ್ಕೆ ಆಗಮಿಸಿ,ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಯುವ ಕನ್ನಡ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯಲ್ಲಿ ಭಾಗವಹಿಸಿ ನಂತರ ಮಹರ್ಷಿ ವಾಲ್ಮೀಕಿ ಭವನದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸಿದರು.

Contact Your\'s Advertisement; 9902492681

ವಾಲ್ಮೀಕಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕರಾದ ನರಸಿಂಹ ನಾಯಕ(ರಾಜುಗೌಡ) ಹಾಗು ಇತರೆ ಗಣ್ಯರು ಭಾಗವಹಿಸಲಿದ್ದು,ಬಿಸಿಯೂಟದ ಅಧಿಕಾರಿ ಮೌನೇಶ ಕಂಬಾರ ರಾಜ್ಯೋತ್ಸವ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.ಅಲ್ಲದೆ ಇಂದಿನ ಸಭೆಗೆ ಬಾರದಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಕೂಡಲೆ ನೋಟಿಸ್ ಕಳುಹಿಸಿ ಜೊತೆಗೆ ಜಿಲ್ಲಾಧಿಕಾರಿಗಳಿಗೆ ಕ್ರಮಕ್ಕಾಗಿ ಪತ್ರ ಬರೆಯುವಂತೆ ತಹಸೀಲ್ ಕಾರ್ಯಾಲಯದ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ,ತಾಲ್ಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ,ಬಿಇಒ ನಾಗರತ್ನ ಓಲೆಕಾರ,ಬಿಸಿಯೂಟದ ಅಧಿಕಾರಿ ಮೌನೇಶ ಕಂಬಾರ,ಶಾಸಕರ ಆಪ್ತ ಕಾರ್ಯದರ್ಶಿ ವಿರುಪಾಕ್ಷ ಕೋನಾಳ,ತಾ.ಪಂ ಸಹಾಯಕ ನಿರ್ದೇಶಕ ವಿಶ್ವನಾಥ,ಪೊಲೀಸ್ ಇಲಾಖೆಯ ಎ.ಎಸ್.ಐ ಹಣಮಂತ್ರಾಯ,ಅಬಕಾರಿ ಪಿಎಸ್‌ಐ ಸೋಮಪ್ಪ,ಕಂದಾಯ ನಿರೀಕ್ಷಕ ಗುರುಬಸಪ್ಪ,ನಾಯಕ ಹಾಗು ಮುಖಂಡರಾದ ರಮೇಶ ದೊರೆ,ವೆಂಕಟೇಶ ಬೇಟೆಗಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗು ಸಾರ್ವಜನಿಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here