ಚಿತ್ತಾಪುರ: ಪಟ್ಟಣದಲ್ಲಿ ಹೊಸದಾಗಿ 50 ಲಕ್ಷ ವೆಚ್ಚದಲ್ಲಿ ಜೆಸ್ಕಾಂ ಉಪ ವಿಭಾಗದ ನೂತನ ಕಟ್ಟಡವನ್ನು ಇಂದು ಶಾಸಕ ಪ್ರಿಯಾಂಕ್ ಖರ್ಗೆ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು ರಾತ್ರಿ ಹಗಲೆನ್ನದೇ, ಮಳೆ-ಬಿಸಿಲಲ್ಲಿ ಶ್ರಮಪಡುವ ಜೆಸ್ಕಾಂ ನೌಕರರಿಗೆ ಮೂಲ ಸೌಕರ್ಯ ಒದಗಿಸುವುದರಿಂದ, ಅವರು ಸಾರ್ವಜನಿಕ ಸೇವೆ ಮಾಡಲು ಇನ್ನಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಸ್ಕಾಂ ಮುಖ್ಯ ಅಭಿಯಂತರರು, ಅಧೀಕ್ಷಕ ಅಭಿಯಂತರು, ಎಇಇ, ಜನಪ್ರತಿನಿಧಿಗಳು ಹಾಗೂ ನಾಗರಿಕರು ಉಪಸ್ಥಿತರಿದ್ದರು.