ಕವಿಗಳ ಮೇಲಿದೆ ಸಮಾಜದ ಜವಾಬ್ದಾರಿ: ಡಾ. ಅಬ್ದುಲ್ ಕರೀಂ ಕನ್ಯಾಕೋಳೂರ

0
48

ಶಹಾಪುರ: ಕವಿಗಳಾದವರು ಸಮಾಜದಲ್ಲಿರುವ ಓರೆಕೋರೆಗಳನ್ನು ಬರವಣಿಗೆಯ ಮೂಲಕ ತಿದ್ದುವ ಕೆಲಸ ಮಾಡುವುದರ ಜೊತೆಗೆ ಗೊಡ್ಡು ಸಂಪ್ರದಾಯಗಳ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಹಿರಿಯ ಸಾಹಿತಿ ಹಾಗೂ ಕನ್ನಡ ಉಪನ್ಯಾಸಕರಾದ ಡಾಕ್ಟರ್ ಅಬ್ದುಲ್ ಕರೀಂ ಕನ್ಯಾಕೋಳೂರ ಹೇಳಿದರು.

ನಗರದ ಶ್ರೀ ಎಸ್ ಬಿ ದೇಶ್ಮುಖ್ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದಿನ ಯುವಜನತೆ ಮೊಬೈಲ್ ನಿಂದ ದೂರ ಉಳಿದು ಬರವಣಿಗೆಯ ಮೂಲಕ ತೊಡಗಿಸಿಕೊಂಡು ಉತ್ತಮ ಸಮಾಜ ಕಟ್ಟುವುದಕ್ಕೆ ಕಂಕಣಬದ್ಧರಾಗಿ ನಿಲ್ಲಬೇಕು ಎಂದು ಹೇಳಿದರು.

Contact Your\'s Advertisement; 9902492681

ಯುವ ಕವಿಗಳಿಗೆ ತಮಗಾದ ಅನುಭವಗಳನ್ನು ಜನಮಾನಸಕ್ಕೆ ಹಾಗೂ ಸಮಾಜಕ್ಕೆ ತಿಳಿಯಬೇಕಾದರೆ ಇಂತಹ ವೇದಿಕೆ ಅವಶ್ಯಕವಾಗಿ ಬೇಕು ಆದ್ದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯ ಶ್ಲಾಘನೀಯವಾದದ್ದು ಎಂದು ಖ್ಯಾತ ಕಥೆಗಾರರಾದ ಸಿದ್ದರಾಮ ಹೊನ್ಕಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.

ಈ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸುಮಾರು ಇಪ್ಪತ್ತೈದು ಕ್ಕೂ ಹೆಚ್ಚು ಯುವ ಕವಿಗಳು ಭಾಗವಹಿಸಿ ಸ್ವರಚಿತ ಕವನ ವಾಚಿಸಿದರು ಅದರಲ್ಲೂ ವಿಶೇಷವಾಗಿ ಭೀಮಪ್ಪ ಭಂಡಾರಿಯವರು ಇಂದಿನ ಗ್ರಾಮೀಣ ಭಾಗದ ಬದುಕಿನ ವಾಸ್ತವ ಸ್ಥಿತಿಗತಿಗಳ ಕುರಿತು ವಾಚಿಸಿದರು ರಮೇಶ ಯಾಳಗಿ ರೈತರ ನೋವಿನ ಬಗ್ಗೆ ವಿವರಿಸಿದರು ರಾಘವೇಂದ್ರ ಹಾರಣಗೇರಾ ಬಾಲ್ಯದ ನೆನಪುಗಳ ಬುತ್ತಿ ಬಿಚ್ಚಿಟ್ಟು ಋಣಾನು ಸಂಬಂಧಗಳ ಮೂಲಕ ಹಲವಾರು ಭಾವನಾತ್ಮಕ ಸಂಬಂಧಗಳನ್ನು ಕುರಿತು ವಿಶ್ಲೇಷಿಸಿದರು ಸಿಎಸ್ ಭೀಮರಾಯ ಅವರು ಆಘಾತಕಾರಿಯಾಗಿ ಬೆಳೆಯುತ್ತಿರುವ ಮಹಾನಗರಗಳ ಕುರಿತು ಮನವರಿಕೆ ಮಾಡಿಕೊಟ್ಟರು ರಾಜು ಕುಂಬಾರ ಅವರು ವಾಸ್ತವಿಕ ಸಮಾಜದ ಚಿಂತನೆಗಳ ಜೊತೆಗೆ ದೇವರು ಹುಡುಕುತ್ತಿರುವ ಹುಚ್ಚು ಮನಸ್ಸುಗಳು ಕುರಿತು ಕವನ ವಾಚಿಸಿದರು ಶಂಕರ ಹುಲ್ಕಲ್ ಅವರು ಹೆಣ್ಣಿನ ಸೌಂದರ್ಯ ಸೆಡವು ಸಿಟ್ಟು ಒನಪು ವಯ್ಯಾರ ಗಳ ಕುರಿತು ಬಣ್ಣಿಸಿದರು.

ಈ ಸಮಾರಂಭದ ವೇದಿಕೆಯ ಮೇಲೆ ಎಸ್ಪಿ ದೇಶ್ಮುಖ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶಿವರಾಜ ದೇಶಮುಖ ಅಧ್ಯಕ್ಷತೆ ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ತಪ್ಪಾಗಲು ಸಾಮಾಜಿಕ ಕಾರ್ಯಕರ್ತರಾದ ಮಾನಪ್ಪ ಹಡಪದ ಹಾಗೂ ಇತರರು ಉಪಸ್ಥಿತರಿದ್ದರು.

ಶ್ಯಾಮಲಾ ಸಗರ ಪ್ರಾರ್ಥಿಸಿದರು ಬಸವರಾಜ ಸಿನ್ನೂರ ನಿರೂಪಿಸಿದರು ಮಹೇಶ ಪತ್ತಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here