ಸಮಾಜಮುಖಿ ವೈದ್ಯರ ಪ್ರಮಾಣ ವೃದ್ಧಿಯಾಗಲಿ: ಡಾ.ಎಸ್.ಎಚ್.ಕಟ್ಟಿ

0
53

ಕಲಬುರಗಿ: ವೈದ್ಯರನ್ನು ದೇವರ ಸ್ವರೂಪದಲ್ಲಿ ಕಾಣಲಾಗುತ್ತದೆ. ಪವಿತ್ರ ಈ ಕ್ಷೇತ್ರದಲ್ಲಿ ವಾಣಿಜ್ಯೀಕರಣ ದೃಷ್ಟಿಯಿಂದಲೇ ಕಾಣುವುದು ಬೇಡ. ಸಮಾಜದಲ್ಲಿರುವ ಬಡವರು, ಅಸಹಾಯಕರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಬೇಕೆಂಬ ಸಮಾಜಮುಖಿ ವೈದ್ಯರ ಪ್ರಮಾಣ ಪ್ರಸ್ತುತ ದಿವಸಗಳಲ್ಲಿ ಹೆಚ್ಚಳವಾಗಬೇಕಾಗಿದೆಯೆಂದು ಖ್ಯಾತ ವೈದ್ಯ ಡಾ.ಎಸ್.ಎಚ್.ಕಟ್ಟಿ ಅಭಿಪ್ರಾಯಪಟ್ಟರು.

ನಗರದ ಕೇಂದ್ರ ಬಸ್ ನಿಲ್ದಾಣದ ಎದುರುಗಡೆಯಿರುವ ’ಸಿದ್ದಾರ್ಥ ಮೆಡಿ ಸೆಂಟರ್’ನಲ್ಲಿ, ’ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ’ರಾಷ್ಟ್ರೀಯ ಆಯುರ್ವೇದ ದಿನಾಚರಣೆ’ ಯಲ್ಲಿ ಪರಿಷತ ವತಿಯಿಂದ ಸತ್ಕಾರ ಸ್ವೀಕರಿಸಿ, ನಂತರ ಮಾತನಾಡುತ್ತಿದ್ದ ಅವರು, ಇಂದಿನ ಆಧುನಿಕ ಒತ್ತಡ ಬದುಕಿನಲ್ಲಿ ಆರೋಗ್ಯದೆಡೆಗೆ ನಿಷ್ಕಾಳಜಿ ವಹಿಸಿ, ನಾವೇ ಅನೇಕ ರೋಗಗಳಿಗೆ ಆಹ್ವಾನ ನೀಡುತ್ತಿದ್ದೇವೆಯೆಂದು ವಿಷಾದಿಸಿದರು.

Contact Your\'s Advertisement; 9902492681

ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ಯಾವುದೇ ರೀತಿಯ ಅಡ್ಡ ಪರಿಣಾಮಗಳ್ಳಿಲ್ಲದ, ಸಂಪೂರ್ಣ ಗುಣಮುಖವಾಗುವ ವೈದ್ಯಕೀಯ ಪದ್ಧತಿಯನ್ನು ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆ ನಮಗೆ ನೀಡಿದ್ದಾರೆ. ಜನರು ಇದರ ಬಗ್ಗೆ ಅಲಕ್ಷ್ಯ ಮಾಡಿ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದು ಭವಿಷ್ಯದ ದೃಷ್ಟಿಯಿಂದ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪ್ರಸ್ತುತ ತುಂಬಾ ಅಗತ್ಯವಾಗಿದೆಯೆಂದರು.

ಪರಿಷತ ಕಾರ್ಯದರ್ಶಿ ಪ್ರೊ.ಎಚ್.ಬಿ.ಪಾಟೀಲ ಮಾತನಾಡಿ, ಶಾಂತಪ್ಪ ಅವಟೆ ಅವರಂತಹ ನಾಟಿ ಹಾಗೂ ಆಯುರ್ವೇದ ವೈದ್ಯರು ನಮ್ಮ ಜಿಲ್ಲೆಯಲ್ಲಿ ಅನೇಕರು ಇದ್ದಾರೆ. ಅವರನ್ನು ಗುರ್ತಿಸಿ ಸೇವೆಯನ್ನು ಬಳಸಿಕೊಳ್ಳಬೇಕಾದದ್ದು ತುಂಬಾ ಅಗತ್ಯವಾಗಿದೆ. ಆಯುರ್ವೇದ ನಮ್ಮ ದೇಶದ ಮೂಲ ವೈದ್ಯಕೀಯ ಪದ್ಧತಿಯಾಗಿದೆ. ಜಾನಪದ ಮೂಲ ಸಂಸ್ಕೃತಿಯಾಗಿದೆ. ಇವೆರಡರ ನಡುವೆ ಸಾಮ್ಯತೆಯಿದೆಯೆಂದು ನುಡಿದರು.

ರಾಜ್ಯ ಯುವ ಪ್ರಶಸ್ತಿ ಪುರಷ್ಕೃತ ಸಮಾಜ ಸೇವಕ ಬಸವರಾಜ ತೋಟದ ಮಾತನಾಡಿ, ಡಾ.ಕಟ್ಟಿ ಅವರು ಕಳೆದ ೪೫ ವರ್ಷಗಳಿಂದ ಅಮೋಘವಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ನಂತರ ಅವರ ಸುಪುತ್ರ ಕೂಡಾ ಅವರ ದಾರಿಯಲ್ಲಿಯೇ ಸಾಗುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಡಾ.ಅರವಿಂದ ಎಸ್.ಕಟ್ಟಿ, ನಾಟಿ ವೈದ್ಯ ಶಾಂತಪ್ಪ ಅವಟೆ, ಪರಿಷತ ಪದಾಧಿಕಾರಿಗಳಾದ ಈರಗಪ್ಪ ಬರ್ಗಲಿ ಕುಸನೂರ, ಶಿವಶಂಕರ ಬಿ, ಪ್ರಮುಖರಾದ ಅಮರ ಬಂಗರಗಿ, ಅಲ್ತಾಫ್ ಹುಸೇನ್, ಚಂದ್ರಕಲಾ ಭೋವಿ, ರಾಮು ಕಾಸರ್, ವಿಜಯಕುಮಾರ ನೆಲೋಗಿ, ತ್ಯಾಗರಾಜ ಕಣ್ಣಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಹಾಗೂ ಮತ್ತಿತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here