ಕಲಬುರಗಿ: ಪರಿಸರ ಈಗಾಗಲೇ ಅನೇಕ ಮಾಲಿನ್ಯಗಳಿಂದ ತತ್ತರಿಸಿ ಹೋಗಿದೆ. ದೀಪಾವಳಿಯ ಹಬ್ಬದಲ್ಲಿ ವಿಪರಿತ ಪಟಾಕಿ ಸಿಡಿಸಿ ಮತ್ತಷ್ಟು ಮಾಲಿನ್ಯ ಮಾಡುವುದು ಸಮಂಜಸವಲ್ಲ. ಬದಲಿಗೆ ದೀಪಗಳನ್ನು ಹೊತ್ತಿಸುವ ಮೂಲಕ ಪರಿಸರವನ್ನು ಶುದ್ಧವಾಗಿಸಬಹುದಾಗಿದೆ.ಇದರ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕಾಗಿದೆಯೆಂದು ಉಪನ್ಯಾಸಕ, ಚಿಂತಕ ಪ್ರೊ.ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ಅವರು ನಗರದ ಆಳಂದ ರಸ್ತೆಯ, ಕೆಎಚ್‍ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ, ಇಲ್ಲಿನ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ‘ದೀಪಾವಳಿ ಅರಿವು ಕಾರ್ಯಕ್ರಮ’ದ ನಿಮಿತ್ಯ ಸಾಮೂಹಿಕವಾಗಿ ದೀಪಗಳನ್ನು ಪ್ರಜ್ವಲಿಸುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಲಾಯಿತು.
ಸಮಾಜ ಸೇವಕ, ಚಿಂತಕ ಶಿವಕಾಂತ ಚಿಮ್ಮಾ ಮಾತನಾಡಿ, ಪ್ರತಿವರ್ಷವು ಅನೇಕ ಮಕ್ಕಳು ಕಣ್ಣಿಗೆ ಗಾಯ ಮಾಡಿಕೊಂಡು ದೃಷ್ಟಿ ಹೀನರಾಗುತ್ತಿರುವುದು ಕಂಡು ಬರುತ್ತದೆ.ಈ ರೀತಿಯಾಗಿ ಆಚರಣೆ ಮಾಡದೇ, ದೀಪಗಳನ್ನು ಬೆಳಗಿಸಿ ಮಾಲಿನ್ಯ ರಹಿತವಾಗಿ, ಪರಸ್ಪರ ಶಾಂತಿ, ಪ್ರೀತಿ, ಸೌಹಾರ್ದತವಾಗಿ ಸಿಹಿ-ತಿಂಡಿಗಳನ್ನು ವಿನಿಮಯ ಮಾಡಿಕೊಂಡು ಅಚರಿಸಬೇಕು. ಶ್ರೇಷ್ಠ ಮೌಲ್ಯವನ್ನು ಸಾರುವ ಈ ಹಬ್ಬದ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಹೋಗುವದು ತುಂಬಾ ಅವಶ್ಯಕವಾಗಿದೆಯೆಂದು ನುಡಿದರು.
ಕಾರ್ಯಕ್ರಮದಲ್ಲಿ ಬಳಗದ ಕಾರ್ಯದರ್ಶಿ ರಾಜಶೇಖರ ಬಿ.ಮರಡಿ, ಖಜಾಂಚಿ ಸೋಮಶೇಖರ ಮೂಲಗೆ, ಸದಸ್ಯ ಸೋಮಶೇಖರ ಮೂಲಗೆ, ಬಡಾವಣೆಯ ಪ್ರಮುಖಾದ ಮಹಾದೇವ ಹಿರೇಮಠ, ವೀರೇಶ ಬೋಳಶೆಟ್ಟಿ, ಸೂರ್ಯಕಾಂತ ಸಾವಳಗಿ, ಡಿ.ವಿ.ಕುಲಕರ್ಣಿ, ಸಂಗಮೇಶ ಸರಡಗಿ, ಚಂದ್ರಕಾಂತ ತಳವಾರ, ರಾಮದಾಸ ಪಾಟೀಲ, ಕೆ.ವಿ.ಕುಲಕರ್ಣಿ, ಅನಿತಾ ಬಕರೆ, ಜ್ಯೋತಿ ಚಿಮ್ಮಾ, ಬಾಲಾಜಿ ರುದ್ರವಾಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.