ಖಾಸಗಿ ಶಾಲೆಗಳ ರಜೆ ರದ್ದುಗೊಳಿಸಿ: ವಿದ್ಯಾರ್ಥಿಗಳೊಂದಿಗೆ ರಾಜ್ಯೋತ್ಸವ ಆಚರಣೆಗೆ ಒತ್ತಾಯ

0
30

ಆಳಂದ: ಕನ್ನಡ ರಾಜ್ಯೋತ್ಸವ ವಿದ್ಯಾರ್ಥಿಗಳೊಂದಿಗೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಆಚರಿಸಲು ಕ್ರಮಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಬಸವರಾಜ ಎಸ್. ಕೋರಳ್ಳಿ ಅವರು ಇಂದಿಲ್ಲಿ ಒತ್ತಾಯಿಸಿದರು.

ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಗುರುವಾರ ಪತ್ರ ಬರೆದಿರುವ ಅವರು, ಸರ್ಕಾರವು ಶಾಲೆಗಳಿಗೆ ಅ. ೬ರಿಂದ ೨೦ರವರೆಗೆ ರಜೆ ನೀಡಲಾಗಿತು. ನಂರತ ಅ.೨೧ರಿಂದ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆಯ ಆದೇಶವಿದೆ. ಆದರೆ, ಆಳಂದ ತಾಲೂಕಿನ ಅನೇಕ ಖಾಸಗಿ ಶಾಲೆಗಳೂ ಸರ್ಕಾರದ ಆದೇಶ ಗಾಳಿಗೆ ತೂರಿ ತಮ್ಮ ಶಾಲೆಗಳಿಗೆ ರಜೆ ಮುಂದುವರೆಸಿ ನ.೪ರಂದು ಶಾಲೆ ಪ್ರಾರಂಭ ಕೈಗೊಂಡು ಆದೇಶ ಉಲ್ಲಂಘಿಸಿವೆ ಎಂದು ಆಕ್ಷೇಪಿಸಿದರು.

Contact Your\'s Advertisement; 9902492681

ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ರಜೆ ಮುಂದುವರೆಸಿದ್ದರಿಂದಾಗಿ ನ.೧ರಂದು ಆಚರಿಸುವ ರಾಜ್ಯೋತ್ಸವ ಆಚರಣೆಯಿಂದ ಮಕ್ಕಳಿಗೆ ದೂರವಿಟ್ಟಂತಾಗಿದೆ. ಕೇವಲ ಶಾಲೆ, ಕಾಲೇಜು ಮುಖ್ಯಸ್ಥರು ಸೇರಿ ಮಕ್ಕಳಿಲ್ಲದೆ ಕಾಟಾಚಾರದ ಕಾರ್ಯಕ್ರಮ ಧ್ವಜಾರೋಹಣ ಮಾಡಿ ಕೈತೊಳೆದುಕೊಂಡರೆ ಸಾಲದು, ಇಲ್ಲಿ ಕೇವಲ ಧ್ವಜಾರೋಹಣ ಮಾಡಿಮುಗಿಸಿದರೆ ಸಾಕು ಎಂಬ ಇವರ ಉದ್ದೇಶವಾಗಿದೆ ಎಂದರು. ಆದರೆ ವಾಸ್ತವ್ಯವಾಗಿ ಮಕ್ಕಳಿಗೆ ಕನ್ನಡ ನಾಡು ನುಡಿಯ ಬಗ್ಗೆ ಅರಿವು ಮೂಡಿಸಬೇಕಾದ ಸಮಯದಲ್ಲಿ ಶಾಲೆಗಳಿಗೆ ರಜೆ ನೀಡಿ ಅವರನ್ನು ನಾಡು, ನುಡಿಯ ಬಗ್ಗೆ ತಿಳಿವಳಿಕೆಯ ಅರಿವಿನಿಂದ ವಂಚಿತರನ್ನಾಗಿ ಮಾಡಿದಂತಾಗುತ್ತದೆ. ವಾಸ್ತವಿಕವಾಗಿ ಕೆಲವು ಖಾಸಗಿ ಕನ್ನಡ ಉತ್ಸವದ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದು ಖಾಸಗಿ ಶಾಲೆಗಳ ಕರ್ತವ್ಯವಾಗಿದೆ. ಆದರೆ ಇವರು ಶಾಲೆಗೆ ರಜೆ ಘೋಷಿಸಿದ್ದರಿಂದ ಮಕ್ಕಳು ಶಾಲೆಗೆ ಬಾರದೆ ದೂರ ಉಳಿದಂತಾಗುತ್ತದೆ.

ಈ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡಲೇ ಆದೇಶ ಹೊರಡಿಸಿ ನ.೧ರಂದು ಮಕ್ಕಳು ಒಳಗೊಂಡು ಕನ್ನಡ ರಾಜ್ಯೋತ್ಸವ ಆಚರಣೆ ಕೈಗೊಳ್ಳಲು ಆದೇಶಿಸಬೇಕು. ಒಂದೊಮ್ಮೆ ಈ ಆದೇಶ ಮಿರುವ ಶಾಲೆಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಈ ಕ್ರಮಕ್ಕೆ ಮುಂದಾಗದೆ ಹೋದಲ್ಲಿ ಸಂಘಟನೆಯಿಂದ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳಲಾಗುವುದು ಎಂದು ಬರೆದ ಪತ್ರದಲ್ಲಿ ಕೋರಳ್ಳಿ ಅವರು ಎಚ್ಚರಿಸಿದ್ದಾರೆ.

ಆಚರಣೆ: ಪಟ್ಟಣದಲ್ಲಿ ತಾಲೂಕು ಆಡಳಿತ ಆಶ್ರಯದಲ್ಲಿ ನ.೧ರಂದು ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಳು ಆಯೋಜಿಸಲಾಗಿದೆ. ಅಂದು ಬೆಳಗಿನ ೮:೩೦ಕ್ಕೆ ತಹಸೀಲ್ದಾರ ಕಚೇರಿಯಲ್ಲಿ ಧ್ವಜಾರೋಹಣ, ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪನಮನ, ನಂತರ ಗುರುಭವನದಲ್ಲಿ ವೇದಿಕೆಯ ಸಮಾರಂಭ ಜರುಗಲಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ, ತಹಸೀಲ್ದಾರ ದಯಾನಂದ ಪಾಟೀಲ ಅವರು ತಿಳಿಸಿದ್ದಾರೆ.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಮಾದನಹಿಪ್ಪರಗಾ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳ ವಹಿಸುವರು. ಶಾಸಕ ಸುಭಾಷ ಗುತ್ತೇದಾರ ಅವರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷೆ ನಾಗಮ್ಮ ಅಶೋಕ ಗುತ್ತೇದಾರ, ಗುರುನಾಥ ಡಿ. ಪಾಟೀಲ, ಕಸಾಪ ಅಧ್ಯಕ್ಷ ವಿಶ್ವನಾಥ ಭಕರೆ ಆಗಮಿಸಲಿದ್ದಾರೆ. ಉಪನ್ಯಾಸಕ ಸಂಜಯ ಪಾಟೀಲ ಉಪನ್ಯಾಸ ನೀಡುವರು. ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು, ನಾಗರಿಕರು, ಕನ್ನಡಪರ ಸಂಘಟನೆಗಳ ಮುಖಂಡರು ಪಾಲ್ಗೊಳ್ಳಬೇಕು ಎಂದು ಅವರು ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here