ಸುರಪುರ: ಮಾಜಿ ಸಚಿವರು ಹಾಗು ಕಲ್ಯಾಣ ಕರ್ನಾಟಕ ಭಾಗದ ಅಭಿವೃಧ್ಧಿಗಾಗಿ ಆರ್ಟಿಕಲ್ ೩೭೧(ಜೆ) ಜಾರಿಗಾಗಿ ನಿರಂತರ ಹೋರಟದ ಮಾಡಿದ ಮಹನಿಯರಾದ ವೈಜನಾಥ ಪಾಟೀಲರ ನಿಧನ ತೀವ್ರ ದುಖಃ ಮೂಡಿಸಿದೆ ಎಂದು ಹೈಕ ಹೋರಾಟ ಸಮಿತಿ ಮುಖಂಡ ಉಸ್ತಾದ ವಜಾಹತ್ ಹುಸೇನ ಮಾತನಾಡಿದರು.
ವಯಜನಾಥ ಪಾಟೀಲರಿಗೆ ಶ್ರಧ್ಧಾಂಜಲಿ ಅರ್ಪಿಸಲು ಸಭೆ ನಡೆಸಿ ಮಾತನಾಡಿ,ಇಂದು ಪಾಟೀಲಜಿಯವರನ್ನು ಕಳೆದುಕೊಂಡು ಈ ಭಾಗ ಬಡವಾಗಿದೆ.ಅವರೊಂದಿಗೆ ಕಲಂ ೩೭೧ ಜೆ ಕ್ಕಾಗಿ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದು ನನ್ನ ಬದುಕಿನಲ್ಲಿ ಮರೆಯಲಾರದ ಕ್ಷಣಗಳಾಗಿವೆ ಎಂದು ಶೋಕ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗಿಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ,ನಮ್ಮ ಭಾಗದ ದಿಟ್ಟ ರಾಜಕಾರಣಿ ಹಾಗು ಈ ಭಾಗದ ಅಭಿವೃಧ್ಧಿಗಾಗಿ ಎಂತಹ ಹೋರಾಟಕ್ಕು ಸಿದ್ದವಾಗಿದ್ದ ವೈಜನಾಥ ಪಾಟೀಲರು ಇನ್ನೂ ಹತ್ತಾರು ವರ್ಷ ನಮ್ಮೊಂದಿಗೆ ಇರಬೇಕಿತ್ತು.ಇಂದು ಅವರು ನಮ್ಮನ್ನು ಅಗಲಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲಾಗದು.ಅವರ ಆಶಯದಂತೆ ಮುಂದೆ ನಾವೆಲ್ಲರು ಹೋರಾಟ ಮಾಡಿ ೩೭೧ ಜೆ ಸಂಪೂರ್ಣ ಜಾರಿಗಾಗಿ ಒತ್ತಾಯಿಸೋಣ ಅದೆ ನಾವು ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿಯಾಗಲಿದೆ ಎಂದರು.
ಸಭೆಯಲ್ಲಿ ಗೋಪಾಲ ಬಾಗಲಕೋಟೆ,ಅನೀಲ ಗುತ್ತೇದಾರ,ಶೌಕತ್ ಅಲಿ,ಹಣಮಂತ ವಾಗಣಗೇರಾ,ಅಲ್ತಾಫ್ ಸಗರಿ,ನಜೀರ್ ಅಹ್ಮದ್,ಗೋಪಾಲ ಚಿನ್ನಾಕಾರ,ಅನಿಲ ಖಂಡಾರೆ,ಗುರಣ್ಣ ಮಡಿವಾಳ ಸೇರಿದಂತೆ ಅನೇಕರಿದ್ದರು.