ಸುರಪುರಕ್ಕೆ ಉಪವಿಭಾಗಾಧಿಕಾರಿ ಕಚೇರಿ ಆರಂಭಿಸಲು ಒತ್ತಾಯ

0
69

ಸುರಪುರ: ಸುರಪುರ ತಾಲ್ಲೂಕು ಹೆಚ್ಚು ಗ್ರಾಮಗಳನ್ನು ಹೊಂದಿದೆ. ಕಂದಾಯ ಕಾರ್ಯಗಳಿಗಾಗಿ ಉಪ ವಿಭಾಗಾಧಿಕಾರಿ ಕಚೇರಿ ಯಾದಗಿರಿಗೆ ಹೋಗಲು ಜನರಿಗೆ ತೊಂದರೆಯಾಗುತ್ತಿದೆ.

ನಾರಾಯಣಪುರದಿಂದ ಯಾದಗಿರಿಗೆ ಹೋಗಲು ೧೫೦ ಕಿ.ಮೀ ಹೋಗಬೇಕಾಗುತ್ತದೆ ಕಾರಣ ಸುರಪುರ, ಹುಣಸಗಿ ಮತ್ತು ಶಹಾಪುರ ಸೇರಿಸಿ ಉಪ ವಿಭಾಗಾಧಿಕಾರಿ ಕಚೇರಿಯನ್ನು ಸುರಪುರದಲ್ಲಿ ಆರಂಭಿಸಬೇಕು ಎಂದು ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಸುರಪುರ ತಾಲ್ಲೂಕಿನ ಕೃಷ್ಣಾಪುರದಲ್ಲಿ ೧೦೦ ಎಕರೆಗೂ ಹೆಚ್ಚು ಜಮೀನು ಕೆಬಿಜೆಎನ್‌ಎಲ್‌ಗೆ ಸೇರಿದ್ದು ಈ ಸ್ಥಳದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಬೇಕು. ಈ ಸ್ಥಳ ಯಾದಗಿರಿ, ಸುರಪುರ, ಶಹಾಪುರ, ಹುಣಸಗಿಗೆಗೆ ಮಧ್ಯದಲ್ಲಿ ಇದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕಾರಣ ಯಾದಗಿರಿಗೆ ಮಂಜೂರಿಯಾಗಿರುವ ಸರಕಾರಿ ಮೆಡಿಕಲ್ ಕಾಲೇಜನ್ನು ಕೃಷ್ಣಾಪುರದಲ್ಲಿ ಆರಂಭಿಸಬೇಕು ಎಂದು ಉಸ್ತಾದ್ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here