ಸುರಪುರ: ಸರ್ಕಾgದ ವಿವಿಧ ಯೋಜನೆಗಳ ಅಡಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಗೊಳಿಸಲು ಅಧಿಕಾರಿಗಳು ಯಾವಾಗಲು ತಮ್ಮ ಕೇಂದ್ರ ಸ್ಥಲದಲ್ಲಿದ್ದಿ ಅಭಿವೃದ್ಧಿ ಕೆಲಸಗಳನ್ನು ಆನುಷ್ಠನ ಗೊಳಿಸಬೇಕು ಕೆಲವು ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿ ಇರುವುದಿಲ್ಲ ಇನ್ನುಮೊಂದೆ ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಳದಲ್ಲೆ ಇರಲು ತಾಕಿತು ಮಾಡಿದರು.
ನಗರದ ತಾಲೂಕು ಪಂಚಾಯತ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾಹಿತಿ ಪಡೆದು ಮಾತನಾಡಿದ ಅವರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಅನೇಕ ಕಾಮಗಾರಿಗಳ ಸರಿಯಾದ ರೀತಿಯಲ್ಲಿ ಮಾಡಿರುವುದಿಲ್ಲವಾದರು ಯಾರದೂ ಒತ್ತಡಕ್ಕೆ ಮಣಿದು ಬಿಲ್ಲುಗಳನ್ನು ಮಾಡಿರುತ್ತೀರಿ ಇದು ಸರಿಯಲ್ಲ ನೀವು ಮಾಡಿರು ಅನೇಕ ರೋಡುಗಳು ಒಂದೆ ಮಳೆಗೆ ಕಿತ್ತುಹೋಗುವಂತಿವೆ ಕ್ರೀಯಾ ಯೋಜನೆಯಂತೆ ಸರಿಯಾಗಿ ಕಾಮಗಾರಿಯನ್ನು ಮಾಡಲು ಗುತ್ತಿಗೆದಾರರಿಗೆ ತಿಳಿಸಿ ಅವರಿಂದ ಸರಿಯಾದ ರೀತಿಯಲ್ಲಿ ಕಾಮಗಾರಿ ಮಾಡಿಸಿ ಎಲ್ಲಾ ಕಾಮಗಾರಿಗಳಿಗೆ ಯಂತ್ರೋಪಕರಣಗಳಿಂದ ಮಾಡಿಸಿ ಪ್ರತಿ ರೋಡ್ ಕಾಮಗಾರಿ ಡ್ರೇನ್ ಸೌಲಭ್ಯವನ್ನು ಅಳವಡಿಸಿ ಕಾಟಾಚಾರಕ್ಕೆ ಕೆಲಸ ಮಾಡುವುದು ಬೇಡ ಪ್ರತಿಯೊಂದು ಕಾಮಗಾರಿಯನ್ನು ನಾನು ಖುದ್ದಾಗಿ ಪರಿಶೀಲಿಸುವವರೆಗು ಬಿಲ್ ಮಾಡಬೇಡಿ ಎಂದು ಚಿಪಂ ಎಇಇ ಪುಟ್ಟ ಅವರಿಗೆ ಎಚ್ಚರಿಸಿದರು.
ಓಬೆರಾಯನ ಕಾಲದಂತೆ ಕಾಮಗಾರಿಗಳನ್ನು ನಿರ್ಮಿಸುವುದನ್ನು ಬಿಟ್ಟು ಹೊಸ ತಂತ್ರಾಜ್ಞಾನಗಳನ್ನು ಅಳವಡಿಸಿಕೊಂಡು ಅಭಿವೃದ್ಧಿ ಹೊಸ ರೂಪ ಕೊಡಲು ಮುಂದಾಗೋಣ ಇನ್ನು ಕೆಲವರು ರಾಜಕೀಯ ವ್ಯಕ್ತಗಳು ತಮ್ಮ ಮೇಲೆ ಒತ್ತಡಹಾಕಿ ಬೊಗಸ್ ಕಾಮಗಾರಿಯನ್ನು ಮಾಡುತ್ತಾರೆ ಅತಂಹ ವ್ಯಕ್ತಿಗಳಿಗೆ ಮಣಿಯಬೇಡಿ ಅತಂಹ ಸಮಸ್ಯಗಳಿದ್ದರೆ ನನಗೆ ತಿಳಿಸಿ ಹಾಗೇನಾದರು ತಾವು ಬೋಗಸ್ ಕೆಲಸವನ್ನು ಮಾಡಿದರು ನಿಮ್ಮ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಲ್ಲಾ ಅಧಿಕಾರಿಗಳಿಗೆ ಎಚ್ಚರಿಸಿದರು.
ಇನ್ನು ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕೈಗೊಂಡ ಕ್ರಮಗಳ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ವಿಶೇಷವಾಗಿ ತರಗಿತಿಗಳನ್ನು ನಡೆಸಲಾಗುತ್ತಿದೆ ಎಂದರು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೆ ಸರಿಯಾದ ರೀತಿ ಶಿಕ್ಷಣ ನೀಡಿದರು ಫಲಿತಾಂಶ ತನ್ನಿಂದ ತಾನೆ ಮೇಲೆ ಬರುತ್ತೆ ಹೀಗಾಗಿ ಒಂದು ಯೋಜನೆಯನ್ನು ರೋಪಿಸಿಕೊಂಡು ಉತ್ತಮ ಶಿಕ್ಷಕರಿಂದ ವಿಶೇಷವಾಗಿ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಿ ಎಂದು ಶಾಸಕರು ತಿಳಿಸಿದರು.
ಬಹುಮುಖ್ಯವಾಗಿ ಖಾಸಗಿ ಶಾಲೆಗಳಿಗಿಂತ ನಮ್ಮ ಸರ್ಕಾರಿ ಶಾಲೆಯಲ್ಲೆ ಹೆಚ್ಚು ಸೌಲಭ್ಯ ವದಗಿಸುವ ನಿಟ್ಟಿನಲ್ಲಿ ಹಾಗೂ ಗುಣ ಮಟ್ಟದ ಶಿಕ್ಷಣ ವದಗಿಸಲು ಅನುದಾನ ನೀಡಲು ಸಿದ್ದನಿದ್ದೇನೆ ಯಾವ ಶಾಲೆಯಲ್ಲಿ ಎನು ಸಮಸ್ಯಗಳಿವೆ ಅವುಗಳನ್ನು ಪಟ್ಟಿಮಾಡಿ ಕಾಮಗಾರಿಗಳ ಯೋಜನೆಯನ್ನು ತಯಾರಿಸಿ ನೀಡಿ ಎಂದು ಸೂಚಿಸಿದರು. ಇನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿದ ಕಾಮಗಾರಿಗಳ ಪ್ರಗತಿಯ ಕುರಿತು ಪ್ರಶ್ನಿಸಿದ ಅವರು ಈ ನಿರ್ಮಿತಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳೆ ಅಧ್ಯಕ್ಷರಿದ್ದರು ಈ ಕೇಂದ್ರದ ಕಾಮಗಾರಿಗಳು ಪರಿಪೂರ್ಣವಾಗಿ ಮುಗಿಸಲು ಸುಮಾರು ಐದರಿಂದ ಆರುವರ್ಷಗಳು ಬೇಕಾಗುತ್ತದೆ ಕ್ಷೇತ್ರದಲ್ಲಿ ಕಳೆದ ಕೆಲವು ವರ್ಷಗಳ ಹಿಂದ ಒಟ್ಟು ೧೬೫ ಕಾಮಗಾರಿಗಳನ್ನು ವಹಿಸಲಾಗಿದೆ ಅದರಲ್ಲಿ ಬರೀ ೮೧ ಕಾಮಗಾರಿಗಳು ಮಾತ್ರ ಮುಕ್ತಾಯ ಹಂತದಲ್ಲಿದೆ ಎಂದು ಬೆಸರ ವ್ಯಕ್ತ ಪಡಿಸಿದರು.
ಇನ್ನು ಎಸ್.ಸಿ ಮತ್ತು ಎಸ್.ಟಿ ಜಮೀನು ಇಲ್ಲದ ರೈತರಿಗೆ ಉಚಿವಾಗಿ ಜಮೀನು ದ್ವರಕಿಸಿಕೊಡುವ ಯೋಜೆನೆ ಇದೆ ಆ ಯೋಜನೆಯನ್ನು ಬಳಸಿಕೊಳ್ಳಲು ಸಮಾಜ ಕಲ್ಯಾನ ಇಲಾಖಾ ಅದೀಕಾರಿಗಳು ಈ ಯೋಜನೆಯ ಕುರಿತು ಸಮಾಜದ ಜನರಿಗೆ ತಿಳಿಸಿ ಪ್ರಚಾರ ಪಡಿಸಿ ಎಂದು ಹೇಳಿದರು.
ನಾರಾಯಣಪುರ ಅರಣ್ಯ ವಲಯದ ಯಂಕಪ್ಪ ಅನ್ನುವ ಉಪ ಅರಣ್ಯಾಧಿಕಾರಿಯು ವ್ಯಾಪರಸ್ಥರಿಂದ ಹಣ ಪಡೆದು ರೈತನು ಬೇಳೆದಿರುವ ಸಾಗವಾನಿ ಮರಗಳ ಮಾರಾಟಮಾಡಿ ರೈತನಿಗೆ ಮೊಸಮಾಡಿದ್ದಾನೆ ಈ ಪ್ರಕರಣವನ್ನು ವಲಯ ಅರಣ್ಯಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಆತನ ಮೇಲೆ ಶಿಸ್ತು ಕ್ರಮ ಜರುಗಿಸಿ ಃಇಗೆ ರೈತನಿಗೆ ಅನ್ಯಾ ಮಡುವ ಅಧಿಕಾರಿಯನ್ನು ಉಳಿಸಿಕೊಳ್ಳುವಬಾರದು ಎಂದು ಸೂಚಿಸಿದರು.
ತಾಪಂ ಅಧ್ಯಕ್ಷೆ ಶಾರದಾ ಭಿಮಣ್ಣ ಬೇವಿನಾಳ, ಉಪಾಧ್ಯಕ್ಷೆ ಮಂಜುಳಾ ಮತ್ತು ಇಒ ಅಂಬ್ರೇಶ, ತಹಶಿಲ್ದಾರ ನಿಂಗಣ್ಣ ಬಿರಾದರ ವೇದಿಕೆಯಲ್ಲಿದ್ದರು. ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.