ಸುರಪುರ: ನಗರದ ಪೊಲೀಸ್ ಠಾಣೆಯಲ್ಲಿ ದಲಿತರ ದಿನಾಚರಣೆಯಲ್ಲಿ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವಾಯ್‌ಎಸ್‌ಪಿ ಶಿವನಗೌಡ ಪಾಟೀಲ ಮಾತನಾಡಿ,ತಾಲ್ಲೂಕಿನ ಯಾವುದೆ ಗ್ರಾಮದಲ್ಲಿ ದಲಿತರ ಯಾವುದೆ ಕಾನೂನಾತ್ಮಕ ದೂರುಗ ಳಿದ್ದರೆ ಅವುಗಳಿಗೆ ತತಕ್ಷಣದಲ್ಲಿ ಪೊಲೀಸ್ ಇಲಾಖೆ ಸ್ಪಂಧಿಸಲಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಅಕ್ರಮ ಸಾರಾಯಿ ಮಾರಾಟ ದಂಧೆ ಹಿಚ್ಚಾಗಿದ್ದು ಕಡಿವಾಣ ಹಾಕುವಂತೆ ದಲಿತ ಮುಖಂಡರು ಮಾಡಿದ ಮನವಿಗೆ ಉತ್ತರಿಸುತ್ತ,ಯಾವುದೇ ಗ್ರಾiದಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿ,ಅಕ್ರಮವಾಗಿ ಮಾರಾಟ ಮಾಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.ಕ್ರಮ ಕೈಗೊಳ್ಳದಿದ್ದಲ್ಲಿ ನನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗುವುದಾಗಿ ಭರವಸೆ ನೀಡಿದರು.
ಕಾಂiiಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಸುರಪುರ ಠಾಣೆ ಪಿಐ ಆನಂದರಾವ್ ಮಾತನಾಡಿ,ಮುಖಂಡರುಗಳು ನಗರದಲ್ಲಿರುವ ಗೌತಮ್ ಬುದ್ಧ ವಿಹಾರದಲ್ಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ಗಮನಕ್ಕೆ ತಂದಿರುವಿರಿ,ಬುದ್ಧ ವಿಹಾರಕ್ಕೆ ಒಬ್ಬರು ಬೀಟ್ ಪೊಲೀಸರನ್ನು ನೇಮಿಸಲಾಗುವುದು ಎಂದು ತಿಳಿಸಿದರು.ಅಲ್ಲದೆ ಗ್ರಾಮೀಣ ಭಾಗದಲ್ಲಿ ಇನ್ನೂ ದಲಿತ ಜನಾಂಗದವರಿಗೆ ಹೋಟೆಲುಗಳಲ್ಲಿ ಪ್ರವೇಶ ನೀಡುತ್ತಿಲ್ಲವೆಂದು ತಿಳಿಸಿದ್ದಾರೆ.ಇದನ್ನು ಸಹಿಸುವುದಿಲ್ಲ ಅಂತಹ ಹೋಟೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಅನೇಕ ದಲಿತ ಸಂಘಟನೆಗಳ ಮುಖಂಡರು ಮಾತನಾಡಿ,ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ದಲಿತರ ದೂರುಗಳನ್ನು ಸ್ವೀಕರಿಸುತ್ತಿಲ್ಲ ಅಲ್ಲಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಬೇಕು.ಡಾ:ಬಾಬಾ ಸಾಹೇಬ ಅಂಬೇಡ್ಕರ್ ಮೂರ್ತಿ ಸುತ್ತಲು ವಾಹನಗಳ ನಿಲ್ಲಿಸುವ ಮೂಲಕ ಸಂಚಾರಕ್ಕೆ ತೊಂದರೆ ಮಾಡಲಾಗುತ್ತಿದೆ ಇದನ್ನು ತಡೆಯಬೇಕು ಮತ್ತು ದಲಿತ ಸಮುದಾಯದ ಯಾವುದೇ ದೂರುಗಳು ಬಂದಲ್ಲಿ ತಕ್ಷಣವೆ ದೂರು ಸ್ವೀಕರಿಸಿ ಕ್ರಮಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.ಪೊಲೀಸ್ ಸಿಬ್ಬಂದಿ ದಯಾನಂದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವೇದಿಕೆ ಮೇಲೆ ಹುಣಸಗಿ ಸರ್ಕಲ್ ಇನ್ಸ್ಪೇಕ್ಟರ್ ವಿ.ಎಸ್.ಹಿರೇಮಠ, ನಗರ ಠಾಣೆ ಅಪರಾಧ ವಿಭಾಗದ ಪಿಎಸ್‌ಐ ಶರಣಪ್ಪ,ಕೊಡೇಕಲ್ ಪಿಎಸ್‌ಐ ಬಾಷುಮಿಯಾ ಇದ್ದರು.ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಮಾಜಿ ನಗರಸಭೆ ಸದಸ್ಯ ವೆಂಕಟೇಶ ಹೊಸ್ಮನಿ,ಮಾಳಪ್ಪ ಕಿರದಳ್ಳಿ,ನಿಂಗಣ್ಣ ಗೋನಾಲ,ಮಲ್ಲು ಬಿಲ್ಲವ್,ಚಂದ್ರಶೇಖರ ಕವಡಿಮಟ್ಟಿ,ನಾಗರಾಜ,ತಿಪ್ಪಣ್ಣ ಶೆಳ್ಳಿಗಿ,ರಾಜು ಕಟ್ಟಿಮನಿ,ಎಂ.ಪಟೇಲ,ಬಸವರಾಜ ಮುಷ್ಠಳ್ಳಿ,ರಾಮಣ್ಣ ಶೆಳ್ಳಿಗಿ,ಭೀಮರಾಯ ಸಿಂಧಗೇರಿ,ಶಿವಲಿಂಗ ಹಸನಾಪುರ,ಅಜ್ಮೀರ,ದಾನಪ್ಪ ಲಕ್ಷ್ಮೀಪುರ,ಮಲ್ಲು ಮುಷ್ಠಳ್ಳಿ ಸೇರಿದಂತೆ ಅನೇಕರಿದ್ದರು.