ಕಾರಾಗೃಹದ ಪ್ರತಿಯೊಬ್ಬ ಬಂದಿಯು ತಮ್ಮಜೀವನದಲ್ಲಿ ಗಾಂಧೀಜಿಯವರ ತತ್ವಾದರ್ಶ ಅಳವಡಿಸಿಕೊಳ್ಳಿ

0
38

ಕಲಬುರಗಿ: ಕಾರಾಗೃಹದ ಪ್ರತಿಯೊಬ್ಬ ಬಂದಿಯು ಕಾಯಕ ಶ್ರಮಜೀವಿಯಾಗಿ ಸನ್ನಡತೆ ಆಧಾರದ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆ ಹೊಂದಿ ಕುಟುಂಬರೊಡನೆ ಉತ್ತಮ ಜೀವನ ನಡೆಸುವುದರ ಜೊತೆಗೆ ತಮ್ಮ ಜೀವನದಲ್ಲಿ ಗಾಂಧೀಜಿಯವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಗೋಮತಿ ರಾಘವೇಂದ್ರ ಅವರು ತಿಳಿಸಿದ್ದಾರೆ.

ಅವರು ಮಂಗಳವಾರ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಮಹಾತ್ಮ ಗಾಂಧೀಜೀಯವರ ೧೫೦ನೇ ಜಯಂತಿಯ ಹಿನ್ನೆಲೆಯಲ್ಲಿ ಅಲ್ಪಾವಧಿ ಶಿಕ್ಷಾ ಬಂದಿ ಅವಧಿ ಪೂರ್ವ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗುತ್ತಿರುವ ಬಂದಿಯಾದ ಬ್ರಿಜೇಶಕುಮಾರ ಶಿವಬಾಲಕ ಇವರಿಗೆ ಬಿಡುಗಡೆ ಪ್ರಮಾಣಪತ್ರ ಹಾಗೂ ಗಾಂಧೀಜಿ ಕುರಿತು ಪುಸ್ತಕ, ಕಾರಾಗೃಹದ ಬೇಕರಿಯಲ್ಲಿ ತಯಾರಿಸಿದ ಸಿಹಿ ತಿಂಡಿ ವಿತರಣೆ, ಹೊಲಿಗೆ ವಿಭಾಗದಲ್ಲಿ ಸಿದ್ಧಗೊಂಡ ಬ್ಯಾಗ್ ವಿತರಿಸಿ ಮಾತನಾಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್. ರಮೇಶ್ ಮಾತನಾಡಿ, ಪ್ರತಿಯೊಬ್ಬರು ಎಲ್ಲ ಬಂದಿಗಳ ಜೊತೆಗೆ ಸಹೋದರತ್ವ ಬೆಳೆಸಿಕೊಳ್ಳಬೇಕು. ಸಹಬಂದಿಗಳನ್ನು ಪ್ರೀತಿಯಿಂದ ಕಾಣಬೇಕು. ಕಾರಾಗೃಹದಲ್ಲಿನ ಕಾರ್ಖಾನೆ ವಿಭಾಗದಲ್ಲಿ ಕೆಲಸ ಮಾಡಿ ಆರ್ಥಿಕವಾಗಿ ಸಬಲರಾಗಿ ಕುಟುಂಬದವರ ಮೇಲೆ ಅವಲಂಬಿತರಾಗದೇ ಸ್ವಾವಲಂಬಿಯಾಗಿ ಬದುಕುವುದಕ್ಕೆ ಶ್ರಮವಹಿಸಿ ಕೆಲಸ ಮಾಡಬೇಕು. ಒಳ್ಳೆಯ ನಡತೆಯನ್ನು ಬೆಳೆಸಿಕೊಂಡು ಇಲ್ಲಿಂದ ಬಿಡುಗಡೆಯಾಗಿ ಹೋಗಬೇಕು ಎಂದು ಹೇಳಿದರು.

ಈ ಸಮಾರಂಭದಲ್ಲಿ ಕಾರಾಗೃಹದ ಅಧೀಕ್ಷಕ ಡಾ.ಐ.ಜಿ ಮ್ಯಾಗೇರಿ, ಡಾ.ಬಸವರಾಜ ಕಿರಣಗಿ, ವೈದ್ಯಾಧಿಕಾರಿಗಳು ಮತ್ತು ಜೈಲರ್ ವೃಂದವರು ಪಾಲ್ಗೊಂಡಿದ್ದರು. ವಿಕ್ಷಕಿಯಾದ ದೇವಮ್ಮ ಸ್ವಾಗತ ಗೀತೆ ಹಾಡಿದರು ಜೈಲರ್ ಸುನಂದಾ ಸ್ವಾಗತಿಸಿದರು. ಜೈಲರ್ ಸರೋಜಾ ವಂದಿಸಿದರು. ಶಿಕ್ಷಕ ನಾಗರಾಜ ಮುಲಗೆ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here