ಬೆಂಗಳೂರು: ಕರ್ನಾಟಕ ಸರ್ಕಾರವು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ಅಧ್ಯಕ್ಷತೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಸರ್ಕಾರಿ/ಸಾರ್ವಜನಿಕ ಉದ್ಯೋಗಗ ಈಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಕುರಿತು ವರದಿಯನ್ನು ನೀಡುವಂತೆ ಆಯೋಗವನ್ನು ಸರ್ಕಾರ ಆದೇಶ ನೀಡಿದೆ ಎಂದು ಜಂಟಿ ನಿರ್ದೇಶಕ ಕಾರ್ಯದರ್ಶಿ ನ್ಯಾ. ನಾಗಮೋಹನ್ ದಾಸ್ ತಿಳಿಸಿದ್ದಾರೆ.
ಸಾರ್ವಜನಿಕ ಪ್ರಕಟನೆ ಹೊರಡಿಸಿ ಆಸಕ್ತಿಯಿರುವ ಸಾರ್ವಜನಿಕರು, ಸಂಬಂಧಿಸಿದ ಸಮುದಾಯಗಳು, ಸಂಘ ಸಂಘಟನೆ-ಸಂಸ್ಥೆಗಳು, ವಿದ್ವಾಂಸರು, ಸಾಮಾಜಿಕ ಕಾರ್ಯಕರ್ತರು, ಇತರೆ ಯಾರೂ ಕೂಡ ಆಯೋr ಮನವಿ/ ಅಹವಾಲುಗಳನ್ನು, ವರದಿಗಳನ್ನು, ಬೇಡಿಕೆಗಳನ್ನು ಅರಿತ ರೂಪದಲ್ಲಿ ಸಲ್ಲಿಸಬಹುದು.
ತಹ ಮನವಿಗಳು ಆಯೋಗದ ವಿಷಯಕ್ಕೆ ಮಾತ್ರ ಸಂಬಂಧಿಸಿರಬೇಕು ಮತ್ತು ಅವು ಸಾಧ್ಯವಾದ ಸಂಕ್ಷಿಪ್ತವಾಗಿರಬೇಕು. ಈ ಮನವಿಗಳನ್ನು 2019 ಡಿಸೆಂಬರ್ 10ರ ಒಳಗೆ ಆಯೋಗಕ್ಕೆ ಕೆಳಗೆ ನೀಡಿರು ವಿಳಾಸಕ್ಕೆ ಅಂಚೆಯ ಮೂಲಕ ಅಥವಾ ಖುದ್ದಾಗಿ ತಲುಪಿಸಬಹುದು, ಈ ಮೂಲಕ ಆಯೋಗದ ಕಾರ್ಯಕ್ಕೆ ನೆರವು ನೀಡಬೇಕೆಂದು ಸಾರ್ವಜನಿಕರಿಲ್ಲಿ ಅವರು ಕೋರಿದ್ದಾರೆ.