ವಿಮಾನ ನಿಲ್ದಾಣಕ್ಕೆ ಅಮೋಘವರ್ಷ ನೃಪತುಂಗ ಹೆಸರಿಡಲು ಒತ್ತಾಯ

0
398

ಕಲಬುರಗಿ: ಕಲಬುರಗಿ ನೂತನವಾಗಿ ಆರಂಭಗೊಳ್ಳಲಿರುವ ವಿಮಾನ ನಿಲ್ದಾಣಕ್ಕೆ ಕನ್ನಡ ಸಾಮ್ರಾಜ್ಯದ ಪ್ರಖ್ಯಾತ ದೊರೆ ಅಮೋಘವರ್ಷ ನೃಪತುಂಗ ಎಂದು ನಾಮಕರಣ ಮಾಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ, ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕನ್ನಡದ ಮೊಟ್ಟ ಮೊದಲ ಲಾಕ್ಷಣಿಕ ಗ್ರಂಥ ‘ಕವಿರಾಜಮಾರ್ಗ’ವನ್ನು ಕೊಟ್ಟಿರುವ ರಾಷ್ಟ್ರಕೂಟರ ಅರಸ, ಈ ಪ್ರದೇಶದ ಮೂಲಕ ಜಗತ್ತಿಗೆ ಪ್ರಖ್ಯಾತಿಯನ್ನು ಪಡೆದಿದ್ದಾನೆ. ಕಾವೇರಿಂದಾಮಾ ಗೋದಾವರಿಯವರೆಗೂ ಕನ್ನಡದ ಸಾಮ್ರಾಜ್ಯವನ್ನು ವಿಸ್ತರಿಸಿದ್ದ ನೃಪತುಂಗ, ಆ ಕಾಲದಲ್ಲಿಯೇ ಮಳಖೇಡ (ಮಾನ್ಯಖೇಟ) ರಾಜಧಾನಿಯನ್ನಾಗಿ ಮಾಡಿ ಆಡಳಿತ ನಡೆಸಿದ್ದ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

೯ ನೇ ಶತಮಾನದಲ್ಲಿಯೇ ರಾಷ್ಟ್ರಕೂಟರ ದೊರೆ ನೃಪತುಂಗ ಈ ಪ್ರದೇಶದಿಂದ ಆಡಳಿತ ಮಾಡಿದ್ದಾನೆ. ವಿಶ್ವ ಐತಿಹಾಸಿಕ ಪುಟಗಳಲ್ಲಿ ನೃಪತುಂಗನ ಹೆಸರು ರಾರಾಜಿಸಿದೆ. ಹೀಗಾಗಿ, ಕಲಬುರಗಿ ವಿಮಾನ ನಿಲ್ದಾಣಕ್ಕೆ ನೃಪತುಂಗನ ಹೆಸರು ಇಡುವ ಮೂಲಕ ಐತಿಹಾಸಿಕತೆಗೆ ಇಂಬು ಕೊಟ್ಟಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಲೇಖಕರು, ಇತಿಹಾಸಕಾರರು, ಸಂಶೋಧಕರು ಸೇರಿದಂತೆ ಬುದ್ದಿಜೀವಿಗಳು ಮತ್ತು ಕನ್ನಡಪರ ಸಂಘಟನೆಗಳ ಹೋರಾಟಗಾರರು ಆಲೋಚಿಸಬೇಕೆಂದು ಅವರು ಕೋರಿದ್ದು, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಈ ಕುರಿತು ಪರಿಶೀಲಿಸಿ, ನೃಪತುಂಗನ ಹೆಸರು ನಾಮಕರಣ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here