ಕಲಬುರಗಿ: ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಲಕ್ಕಲಕಟ್ಟಿ ಗ್ರಾಮದ ರಮೇಶ್ ಮಾದರ ಹಾಗೂ ಗಂಗಮ್ಮ ಮಾದರ (ಲಂಬಾಣಿ) ಅವರ ಮರ್ಯಾದೆ ಕೊಲೆ ಖಂಡಿಸಿ ಇಂದು ಚಿಂಚೋಳ್ಳಿ ತಾಲ್ಲೂಕಿನಲ್ಲಿ ಕರ್ನಾಟಕ ಮಾದಿಗರ ಸಂಘ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು.
ಪಟ್ಟಣದ ತಹಶೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಂಘ ಜಿಲ್ಲಾ ಅಧ್ಯಕ್ಷ ರು ಸುನಿಲ್ ಸಲಗರ ಮಾತನಾಡಿ ಮರ್ಯಾದೆ ಹತ್ಯೆ ನಡೆಸಿದ ಆರೋಪಿಗಳನ್ನು ಸರಕಾರ ಕೂಡಲೇ ಬಂಧಿಸಿ ದಂಪತಿಗಳ ಎರಡೂ ಮಕ್ಕಳ ಪಾಲನೆ ಪೋಷಣೆ ಸರ್ಕಾರ ವಹಿಸಬೇಕೆಂದು ಆಗ್ರಹಿಸಿದರು.
ನಂತರ ತಹಶಿಲ್ದಾರರ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಮಾದಿಗರ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿವಿಜಯ ರಾಜ್, ಸಾಯಿಬಣ್ಣ ಓಂಕಾರ, ಅನಿಲ ಕಾಂತ್ರಿ ರುಸ್ತುಂಪೂರ, ಬಸವರಾಜ ಚಿಮ್ಮಇದಲಾಯಿ, ಶರಣಪ್ಪ ಸಿರೋಳ್ಳಿ, ರಮೇಶ್ ರುಸ್ತುಂಪೂರ, ನಿಶಾಂತ ಗಾರಂಪಳ್ಳಿ, ಸತೀಶ್ ಕಿತ್ತೂರು ಚಿಮ್ಮ ಇದಾಲಾಯಿ, ಹಣಮಂತ ನಿಡಗುಂದ, ಯಲ್ಲಲಿಂಗ ದಂಡಿನ, ಶುಭಷ ನಿಡಗುಂದ ಸೇರಿದಂತೆ ಮತ್ತಿತರರು ಇದ್ದರು.