ಸುರಪುರ: ತರಕಾರಿ ಮಾರುಕಟ್ಟ ನೆಲಸಮಕ್ಕೆ ಮುಂದಾಗಿರುವ ನಗರಸಭೆ ಅಧಿಕಾರಿಗಳಿಗೆ ವ್ಯಾಪಾರಸ್ಥರ ಆಕ್ರೋಶ ಎದುರಿಸುವ ಘಟನೆ ಇಂದು ನಡೆಯಿತು ನಗರೋತ್ಥಾನ ಫೇಸ ಮೂರರಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿ ಪರಿಪೂರ್ಣ ಮಾಹಿತಿಯನ್ನು ವ್ಯಾಪಾರಸ್ಥರಿಗೆ ಮನವರಿಕೆ ಮಾಡಿ ಕಾಮಗಾರಿ ಪ್ರಾರಂಭಿಸಿದರು.
ನಗರೋತ್ಥಾನ ಯೊಜನೆಯ ಮೂರನೆ ಹಂತದ ಕಾಮಗಾರಿ ಕೈಗೆತ್ತಿಕೊಳ್ಳುವತ್ತ ಮುಂದಾಗಿರುವ ನಗರಸಭೆಯು ನಗರದಲ್ಲಿರುವ ತರಕಾರಿ ಮಾರುಕಟ್ಟೆ ನೆಲಸಮಗೊಳಿಸುವ ಕಾರ್ಯಾಚರಣೆ ಆರಂಭಿಸಿತು.ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಅಲ್ಲಿಯ ತರಕಾರಿ ಮಾರಾಟಗಾರರು ಹಾಗು ಕಿರಾಣಿ ಹಾಗೂ ದಿನಸಿ ಅಂಗಡಿಗಳ ಮಾಲೀಕರು ನಗರಸಭೆ ವಿರುಧ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಹಿಂದೆ ಒಂದುಬಾರಿ ತರಕಾರಿ ಮಾರುಕಟ್ಟೆ ನೆಲಸಮಗೊಳಿಸುವುದಾಗಿ ಮೌಖಿಕವಾಗಿ ಹೇಳಿದ್ದರು.ಆದರೆ ಯಾವ ದಿನ ಮತ್ತು ಯಾವ ಸಮಯಕ್ಕೆ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ನಿಖರ ಮಾಹಿತಿ ನೀಡಿರಲಿಲ್ಲ.ಆದರೆ ಇಂದು ಏಕಾಕಿ ಜೆಸಿಬಿಗಳನ್ನ ತಂದು ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ಮುಂದಾಗಿರುವುದು ನೋವಿನ ಸಂಗತಿಯಾಗಿದೆ. ನಮಗೆ ಒಂದು ವಾರದ ಮುಂಚೆ ಹೇಳಿದ್ದರೆ ನಾವು ನಮ್ಮ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಿಕೊಳ್ಳುತ್ತಿದ್ದೆವು, ಆದರೆ ಯಾವುದೆ ಸೂಚನೆ ನೀಡದೆ ಕಾರ್ಯಾಚರಣೆ ನಡೆಸಿರುವುದು ಬೇಸರ ತಂದಿದೆ ಎಂದು ಅನೇಕ ಜನ ವ್ಯಾಪಾರಸ್ಥರು ತಮ್ಮ ನೋವು ತೋಡಿಕೊಂಡಿದ್ದಾರೆ.
ನಗರೋತ್ತಾನ ಫೇಸ್ ಮೂರರಲ್ಲಿ ಕಾಮಗಾರಿಯನ್ನು ಜಿಲ್ಲಾ ನಗರಾಭಿವೃದ್ಧಿ ಅಡಿಯಲ್ಲಿ ೨.೩೭ ಕೋಟಿ ರೂಗಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.ಈ ಕಾಮಗಾರಿಯು ೨೦೧೭-೧೮ರಲ್ಲಿ ಅನುಮೊದನೆಯಾಗಿತ್ತು ಟೆಂಡರ್ ಪ್ರಕ್ರೀಯೆ ಮುಗಿದು ಈಗ ಪ್ರಾರಂಭಿಸಲಾಗಿದೆ ಎಂದು ಪೌರಾಯುಕ್ತ ಜೀವನ ಕುಮಾರ ತಿಳಿಸಿದ್ದಾರೆ.