ಕಲಬುರಗಿ: ಭಾರತ ದೇಶವು ಶತಮಾನಗಳಿಂದ ಕಾತರದಿಂದ ಕಾಯುತ್ತಿದ್ದ ಐತಿಹಾಸಿಕ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ತೀರ್ಪನ್ನು ಕೊನೆಗೂ ಸುಪ್ರೀಂಕೋರ್ಟ್ ಪ್ರಕಟಿಸಿದೆ. ಈ ಐತಿಹಾಸಿಕ ತೀರ್ಪನ್ನು ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರೂ ಹಾಗೂ ಬಿಜೆಪಿ ಕಲಬುರಗಿ ಜಿಲ್ಲಾ ಉಪಾಧ್ಯಕ್ಷರಾದ ಅಂಬಾರಾಯ ಅಷ್ಠಗಿ ಸ್ವಾಗತಿಸಿದ್ದಾರೆ.
ಅಯೋಧ್ಯೆಯಲ್ಲಿಯ ವಿವಾದಾತ್ಮಕ 2.77 ಎಕರೆ ಜಾಗವನ್ನು “ರಾಮಲಲ್ಲಾಗೆ” ವಹಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ಈ ಮೂಲಕ ವಿವಾದಿತ ಜಾಗಕ್ಕೆ ಹೋರಾಡುತ್ತಿದ್ದ ಅಸಂಖ್ಯಾತ ಜನರ ನಂಬಿಕೆಗೆ ಐತಿಹಾಸಿಕ ಜಯ ಲಭಿಸಿದೆ. ಹಾಗೆಯೇ ಬಾಬರಿ ಮಸೀದಿಗೆ ಪ್ರತ್ಯೇಕ 5 ಎಕರೆ ಜಾಗವನ್ನು ಅಯೋಧ್ಯೆಯಲ್ಲಿ ಕೊಡುಬೇಕೆಂದು ಕೋರ್ಟ್ ಸರಕಾರಕ್ಕೆ ಸೋಚಿಸಿದೆ. ವಿವಾದಿತ ಸ್ಥಳದಲ್ಲಿ ರಾಮನ ಜನನ ಸತ್ಯ ಎಂದಿರುವ ಸುಪ್ರೀಂ ಕೋರ್ಟ್, ಕಾನೂನಾತ್ಮಕ ನಿಯಮ ರೂಪಿಸಿ ಮಂದಿರ ನಿರ್ಮಾಣಕ್ಕೆ ಮುಂದಾಗುವಂತೆ ಸರ್ಕಾರಕ್ಕೆ ಸ್ಪಷ್ಟವಾಗಿ ನಿರ್ದೇಶಿಸಿದೆ. ಇದರಿಂದ ರಾಮ ಮಂದಿರ ನಿರ್ಮಾಣದ ಬಾಗಿಲು ತೆರೆದಿದೆ.
ಭಾರತ ದೇಶವು “ಸರ್ವ ಜನಾಂಗದ ಶಾಂತಿಯ ತೋಟ ” ಎನ್ನುವ ಮಾತನ್ನು ಸುಪ್ರೀಂಕೋರ್ಟ್ ಆದೇಶ ಸಾಬೀತುಪಡಿಸಿದೆ.ಆದ್ದರಿಂದ ಸುಪ್ರೀಂಕೋರ್ಟ್ ತೀರ್ಪು ಎಲ್ಲರೂ ಒಟ್ಟಾಗಿ ದೇಶವನ್ನು ಕಟ್ಟಲು ಮುನ್ನುಡಿ ಬರೆದಿದೆ ಮತ್ತು ಕೋಮು ಸೌಹಾರ್ದತೆಯಿಂದ ಮತ್ತು ಸಾಮರಸ್ಯದಿಂದ ಬದುಕಲು ಅನುವು ಮಾಡಿಕೊಟ್ಟಿದೆ.
ಈ ತೀರ್ಪು ಯಾರ ವಿರುದ್ಧವೂ ಅಲ್ಲ ಯಾರ ಪರವೂ ಅಲ್ಲ ಇದು ಇಡೀ ಭಾರತ ದೇಶದ ಪರವಾಗಿದೆ. ಭಾರತ ದೇಶದ ‘ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನ’ವಾಗಿದೆ ಎಂದು ಅಂಬಾರಾಯ ಅಷ್ಠಗಿ ಬಣ್ಣಿಸಿದ್ದಾರೆ.