ಸಮಾನತೆಯ ಸಸಿ ನೆಟ್ಟವರು ವಚನಕಾರರು: ತೇಗಲತಿಪ್ಪಿ ಅಭಿಮತ

0
135

ಕಲಬುರಗಿ: ಮುಢನಂಬಿಕೆಗಳೆಂಬ ಪೆಡಂಬೂತಕ್ಕೆ ಶರಣರ ವಚನಗಳೇ ಮಂತ್ರದಂಡಗಳಾಗಲಿವೆ. ಇಂದಿನ ಆಧುನಿಕ ಯುಗದಲ್ಲಿಯೂ ಅನೇಕರು ಮೂಢನಂಬಿಕೆಗಳಿಗೆ ಜೋತು ಬೀಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಎಂದು ಹೇಳಿದರು.

ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಬೀದರ ಜಿಲ್ಲೆಯ ಹುಮನಾಬಾದ ಪಟ್ಟಣದ ಗೃಹ ನಿರ್ಮಾಣ ಸಹಕಾರ ಸಂಘದ ಕಲ್ಯಾಣ ಮಂಟಪದಲ್ಲಿ ರವಿವಾರ ನಡೆದ ‘ಬಸವಜ್ಯೋತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಅನುಭಾವ ನೀಡಿದ ಅವರು, ಶರಣರು ಕಾಯಕಕ್ಕೆ ಮೊದಲ ಆದ್ಯತೆ ನೀಡಿದ್ದರು. ಮನಶುದ್ಧತೆ ಅಳವಡಿಸಿಕೊಂಡು ಸಮಾಜಾಭಿವೃದ್ಧಿಗೆ ಶ್ರಮಿಸಿದ ಪ್ರಪಂಚದ ಪ್ರಜಾಪ್ರಭುತ್ವದ ಪಾಠವನ್ನೂ ಶರಣರು ಹೇಳಿಕೊಟ್ಟಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಬೀದರಿನ ಲಿಂಗಾಯತ ಮಹಾಮಠದ ಪೂಜ್ಯ ಶ್ರಿ ಅಕ್ಕ ಅನ್ನಪೂರ್ಣ ಅವರು, ನಮ್ಮ ನೆಲದ ಸಾಂಸ್ಕೃತಿಕ ಸಂಪತ್ತು ವಚನ ಚಳವಳಿ. ಮನಕುಲದ ಕೊಳೆ ತೊಳೆದು ಜಾತೀಯತೆ, ಮೂಢನಂಬಿಕೆ, ಅಜ್ಞಾನದ ಕತ್ತಲೆಯನ್ನು ವಚನ ದೀಪ್ತಿಯಿಂದ ಬೆಳಗಿದವರು ಕಲ್ಯಾಣದ ಶರಣರು. ಇಂಥ ಶರಣರ ತಾತ್ವಿಕ ಚಿಂತನೆಯನ್ನು ಜನತೆಗೆ ಮುಟ್ಟಿಸುವ ಅಗತ್ಯವಿದೆ ಎಂದು ನುಡಿದರು.

ಪ್ರಗತಿಪರ ರೈತ ಕಾಶಿನಾಥ ಧಾನಾ ಸಮಾರಂಭ ಉದ್ಘಾಟಿಸಿದರು. ಪ್ರಮುಖರಾದ ಶರಣಪ್ಪ ಪಾಟೀಲ ಬೆಳಕೇರಾ, ಸುಭಾಶ ವಾರದ, ಕಲ್ಲಪ್ಪಾ ಮಾಶೆಟ್ಟಿ ಹುಡಗಿ, ಮಲ್ಲಿಕಾರ್ಜುನ ರಾಚಯ್ಯಾ ಸ್ವಾಮಿ ಸಂಗಮಕರ್, ಬಿ.ಎನ್.ಬಾಳೆ, ರವೀಂದ್ರ ಕೋಳಕೂರ, ಬಾಬುರಾವ ಪಾಟೀಲ, ಬಾಬುರಾವ ಮಾಳಿ, ಡಾ.ಸೋಮನಾಥ ಯಾಳವಾರ, ಡಾ.ಎಸ್.ಆರ್.ಮಠಪತಿ, ಬಸವರಾಜ ರುದ್ರವಾಡಿ ವೇದಿಕೆ ಮೇಲಿದ್ದರು. ಶರಣ ಚಿಂತಕಿ ಶೋಭಾ ಔರಾದೆ ಅಧ್ಯಕ್ಷತೆ ವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here