ಪೂಜ್ಯ ಶ್ರೀ ಬಸವಾನಂದ ಮಹಾಸ್ವಾಮಿಗಳು ಅವರು ಡಾ.ಚನ್ನಬಸವ ಪಟ್ಟದ್ದೇವರ ಅನುಭವಮಂಟಪ ಪ್ರಶಸ್ತಿಗೆ ಆಯ್ಕೆ

0
135

ಬಸವಕಲ್ಯಾಣ: ವಿಶ್ವ ಬಸವ ಧರ್ಮ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ನ. ೨೩ ಮತ್ತು ೨೪ ರಂದು ೪೦ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಜರುಗಲಿದೆ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.

೨೦೧೯ನೇ ಸಾಲಿನ ಡಾ. ಚನ್ನಬಸವ ಪಟ್ಟದ್ದೇವರ ಅನುಭವ ಮಂಟಪ ಪ್ರಶಸ್ತಿಗೆ ಈ ಬಾರಿ ಧಾರವಾಡ ಜಿಲ್ಲೆಯ ಮನಗಂಡಿಯ ಶಿವಾನಂದ ಸ್ವಾಮಿಗಗಳು ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

೧೨ನೆಯ ಶತಮಾನದ ಅನುಭವಮಂಪಟದ ಕಲ್ಪನೆ ಮತ್ತು ಸ್ಥಾಪನೆ ಬಸವಣ್ಣನವರದು. ಅನುಭವಮಂಟಪದ ಮರುಸ್ಥಾಪನೆ ಭಾಲ್ಕಿಯ ಡಾ.ಚನ್ನಬಸವ ಪಟ್ಟದ್ದೇವರು ಅನುಭವಮಂಪಟದ ಮೂಲಗುರಿ. ಬಸವಾದಿ ಶರಣರಂತೆ ೨೦ನೆಯ ಶತಮಾನದಲ್ಲಿ ಕಾರ್ಯಗೈದವರು ಭಾಲ್ಕಿಯ ಪೂಜ್ಯರಾದ ಡಾ.ಚನ್ನಬಸವ ಪಟ್ಟದ್ದೇವರು. ಈ ಪ್ರಶಸ್ತಿಯನ್ನು ೧೯೯೯ ರಂದು ಸ್ಥಾಪಿಸಲಾಯಿತು. ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ವತಿಯಿಂದ ಶ್ರೀ ಈಶ್ವರ ಖಂಡ್ರೆಯವರು ಈ ಪ್ರಶಸ್ತಿಯ ದಾಸೋಹಿಗಳಾಗಿದ್ದಾರೆ. ಪ್ರತಿವರ್ಷ ಐವತ್ತು ಸಾವಿರ ರೂಪಾಯಿ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಶಸ್ತಿ ಪುಸ್ಕೃತ ಶಿವಾನಂದ ಸ್ವಾಮಿಗಳ ಪರಿಚಯ: ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗೋಣಿಸೋಮನಹಳ್ಳಿ ಗ್ರಾಮದ ತಂದೆ ಹಲಗಪ್ಪ ತಾಯಿ ಜಯಮ್ಮನವರ ಸುಪುತ್ರರಾಗಿ ೧೯೭೧ ರ ನವ್ಹೆಂಬರ್ ೧೩ ರ ರಂದು ಇವರು (ಪೂರ್ವಾಶ್ರಮದ ಹೆಸರು ಪುಟ್ಟಬಸಪ್ಪ) ಜನಿಸಿದರು. ಒಂಭತ್ತು ತಿಂಗಳು ಮಗುವಾಗಿರುವಾಗಲೇ ಇವರಿಗೆ ದೃಷ್ಟಿಹೀನತೆ ಆವರಿಸಿತು. ಕಣ್ಣಿಲ್ಲದ ಮಗನೆಂದು ಅಪ್ಪ ಅಮ್ಮ ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ. ೮ ನೆಯ ವಯಸ್ಸಿಗೆ ಮೈಸೂರಿನ ಅಂಧ ಮಕ್ಕಳ ಪಾಠಶಾಲೆಗೆ ಸೇರುತ್ತಾರೆ.

೧೯೯೦ ರಲ್ಲಿ ಎಸ್.ಎಸ್.ಎಲ್.ಸಿ. ಮುಗಿಸುತ್ತಾರೆ. ೧೯೯೨ ರಲ್ಲಿ ಪಿ.ಯು.ಸಿ. ಶಿಕ್ಷಣ ಪೂರೈಸುತ್ತಾರೆ. ಕಣ್ಣಿಲ್ಲದಿದ್ದರೂ ಅತ್ಯಂತ ಪ್ರತಿಭೆಯುಳ್ಳ ವಿದ್ಯಾರ್ಥಿಯಾಗಿ ಸದಾಕಾಲ ಚುರುಕಾಗಿ ಬೆಳೆಯುತ್ತಾರೆ. ಬಸವಾದಿ ಶರಣರ ವಚನ ಸಾಹಿತ್ಯ ಇವರ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಚಾಮರಸ ಕವಿಯ ಪ್ರಭುಲಿಂಗಲೀಲೆ ಬ್ರೈಲ್‌ಲಿಪಿಯಲ್ಲಿ ಬರೆದುಕೊಂಡು ಪ್ರವಚನ ಮಾಡುತ್ತ ಬಸವಭಕ್ತರ ಮೆಚ್ಚುಗೆಗೆ ಕಾರಣರಾಗುತ್ತಾರೆ. ಗದಗ ತೋಂಟದಾರ್ಯ ಮಠದ ಜಗದ್ಗುರು ಡಾ.ಸಿದ್ಧಲಿಂಗ ಮಹಾಸ್ವಾಮಿಗಳು ಇವರಿಗೆ ಎಲ್ಲ ರೀತಿಯ ಆಶ್ರಯ ಕೊಟ್ಟು ಬೆಳೆಸುತ್ತಾರೆ.

೨೦೦೫ ರ ಏಪ್ರಿಲ್ ೯ ರಂದು ಕರ್ನಾಟಕದ ಹಿರಿಯ ಮಠಾಧೀಶರ ಸಮ್ಮುಖದಲ್ಲಿ ಸಾವಿರಾರು ಭಕ್ತರ ಮಧ್ಯ ಧಾರವಾಡದ ಮನಗುಂಡಿ ಗ್ರಾಮದಲ್ಲಿ ಶ್ರೀಗುರು ಬಸವಮಹಾಮನೆ ಸ್ಥಾಪಿಸಿಕೊಂಡು ಆ ಮೂಲಕ ಆಧ್ಯಾತ್ಮ ಪ್ರವಚನ ಜನಮನಕ್ಕೆ ಮುಟ್ಟಿಸುತ್ತ Do not sit like a rock Do work as a clockಎಂಬಂತೆ ಕ್ರಿಯಾಶೀಲರಾಗಿದ್ದಾರೆ.

ಪೂಜ್ಯರು ಪ್ರಶಸ್ತಿ ಹಿಂದೆ ಬೆನ್ನು ಹತ್ತಿದವರಲ್ಲ. ಅನೇಕ ಪ್ರಶಸ್ತಿಗಳು ಇವರನ್ನು ಹುಡುಕೊಂಡು ಬಂದಿವೆ. ಎಲ್ಲಕ್ಕಿಂತ ಮಿಗಿಲಾಗಿ ದಯೆ, ಪ್ರೀತಿ, ಅಂತಃಕರಣ ಅಂತರಂಗದಲ್ಲಿ ಪೂರ್ಣವಾಗಿ ತುಂಬಿಕೊಂಡಿದ್ದಾರೆ. ಅನುಭವಮಂಟಪ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಸಬೇಕೆಂಬ ಹಂಬಲ ಅವರು ಹೊಂದಿದ್ದಾರೆಂದು ಹೇಳಲು ಹೆಮ್ಮೆ ಎನಿಸುತ್ತದೆ.
ಅವರ ಸಮಗ್ರ ಸೇವೆಯನ್ನು ಗುರುತಿಸಿ, ೨೦೧೯ ರ ಡಾ.ಚನ್ನಬಸವ ಪಟ್ಟದ್ದೇವರು ಅನುಭವಮಂಟಪ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here