ಇಲಾಖೆ ಮಾಡುವ ಕೆಲಸ, ಜಿಲ್ಲಾ ಜಾನಪದ ಕಲಾವಿದರಿಂದ ಮುಂದುವರೆಯಲಿ: ಕೊಟ್ರೇಶ ಮರಬನಳ್ಳಿ

0
59

ಕಲಬುರಗಿ: ಕರ್ನಾಟಕ ಸರ್ಕಾರದಿಂದ ನೇಮಕಗೊಂಡಿರುವ ಸದಸ್ಯರನ್ನು ಮತ್ತು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಕಲಬುರಗಿ ನಗರದ ಕಲಾ ಮಂಡಳದಲ್ಲಿಂದು ಇಲ್ಲಿನ ಜಾನಪದ ಕಲಾವಿದರ ಬಳಗದ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಗೌರವಿಸಿದ ಅಪರೂಪದ ಕಾರ್ಯಕ್ರಮ ಜರುಗಿತು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಇಲಾಖೆ ಮಾಡುವ ಕೆಲಸವನ್ನು ಜಿಲ್ಲಾ ಜಾನಪದ ಕಲಾವಿದರು ಮಾಡುತ್ತಿದ್ದಾರೆ. ಅಂಥ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಕಲಾವಿದರ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಅನೇಕ ಜನಪರ-ಕಲಾವಿದರ ಪರ ಕಾರ್ಯ ಮಾಡಲಾಗುತ್ತಿದೆ ಎಂದರು.

Contact Your\'s Advertisement; 9902492681

ಪ್ರಾಸ್ತಾವಿಕ ಮಾತುಗಳನ್ನಾಡಿದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ನಶಿಸಿ ಹೋಗುತ್ತಿರುವ ವಿವಿಧ ಕಲೆಗಳ ಉಳಿವಿಗಾಗಿ ಶ್ರಮಿಸುತ್ತಿರುವ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಅವರನ್ನೂ ಸಹ ಉಳಿಸಿಕೊಳ್ಳುವ ಕಾರ್ಯವಾಗಬೇಕಿದೆ ಎಂದರು. ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಮಹಿಪಾಲಾರೆಡ್ಡಿ ಮುನ್ನೂರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಜಾನಪದ ಕಲಾವಿದ ಪುಂಡಲಿಕ ಪೂಜಾರಿ, ಸಂಘಟಕ-ಕಲಾವಿದ ವಿಶ್ವನಾಥ ತೊಟ್ನಳ್ಳಿ ಕುಸನೂರ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಬಸವರಾಜ ತೋಟದ, ಹಿರಿಯ ಕಲಾವಿದೆ ಗಿರೀಜಾ ಕರ್ಪೂರ, ಪ್ರಮುಖರಾದ ಶಿವಾನಂದ ಮಠಪತಿ, ಅಪ್ಪಾರಾವ ಪೂಜಾರಿ, ಸಂಜು ಬರಗಾಲಿ, ಭೀಮಶಾ ಮಹಾಗಾಂವ, ರೇವಣಸಿದ್ದಪ್ಪ ಹೊಸಮನಿ, ನಾಗಪ್ಪ ಸಣ್ಣೂರ, ಚಂದ್ರಕಾಂತ ಡಿಗ್ಗಿ, ಬಸಪ್ಪ ಹೊಸಮನಿ, ಸಾಯಬಣ್ಣಾ ತೆಗನೂರ, ಮನೋಹರ ಚಿತ್ತಾಪುರ ಅವರಿಂದ ವಿವಿಧ ಜಾನಪದ ಕಲೆಗಳ ಪ್ರದರ್ಶನ ನಡೆಯಿತು.

ನಾಡಿನ ಪ್ರಸಿದ್ಧ ಸಂಗೀತ ಕಲಾವಿದ ಸಿದ್ಧಾರ್ಥ ಚಿಮ್ಮಾಇದಲಾಯಿ ಹಾಗೂ ಅವರ ತಂಡದವರಿಂದ
ನಡೆದ ಸಂಗೀತ ಸಂಭ್ರಮ ಕಾರ್ಯಕ್ರಮ ಜನಮನಸೂರೆಗೊಂಡಿತು. ಕರ್ನಾಟಕ ಸರ್ಕಾರದಿಂದ ನೇಮಕಗೊಂಡ ಜಾನಪದ ಅಕಾಡೆಮಿ ಸದಸ್ಯರಾದ ಡಾ.ರಾಜೇಂದ್ರ ಯರನಾಳೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ಭಾರತಿ ಅವರು ವಿಶೇಷ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಘನ ಸರ್ಕಾರವು ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ, ಅಕಾಡೆಮಿಗಳ ಮೂಲಕ ಈ ಭಾಗದಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಮತ್ತಷ್ಟು ಚುರುಕುಗೊಳಿಸುತ್ತೇವೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here