ಕೆಂಭಾವಿ: ರಾಜ್ಯ ಸರಕಾರ, ಯಾದಗಿರಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಆಶ್ರಯದಲ್ಲಿ ಕೆಂಭಾವಿ ಪಟ್ಟಣದ ಸುತ್ತಮುತ್ತಲಿನ ಸರಕಾರಿ ಶಾಲೆಯ 55 ವಿದ್ಯಾರ್ಥಿಗಳು ಮೂರು ದಿನಗಳ ಕಾಲ ಕರ್ನಾಟಕ ದರ್ಶನ ಪ್ರವಾಸಕ್ಕೆ ತೆರಳಿದರು.
ಕೆಂಭಾವಿ ಪುರಸಭೆ ಮಾಜಿ ಅಧ್ಯಕ್ಷ ದೇವಪ್ಪ ಮ್ಯಾಗೇರಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಿದರು.
ಪುರಸಭೆ ಸದಸ್ಯರುಗಳಾದ ಮಹಿಪಾಲರೆಡ್ಡಿ ದಿಗ್ಗಾವಿ, ಸೋಪಿಶರಮತ್ ನಾಶಿ, ದುರ್ಗಪ್ಪ ವಡ್ಡರ, ಗುರು ಕುಂಬಾರ ಮತ್ತು ಅಶೋಕ್ ಭಂಗ, ರಂಗಪ್ಪ ವಡ್ಡರ ಹಾಗೂ ಕೆಂಭಾವಿ ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ,ಉಪಪ್ರಾಂಶುಪಾಲ ಕೆ.ಆರ್.ಪಾಟೀಲ, ಕಾಂತೇಶ ಬಿ.ಆರ್.ಪಿ, ಗುರುಸ್ವಾಮಿ ಬಿ.ಪಿ ಮುದನೂರ, ಶಿಕ್ಷಕರಾದ ಸುಭಾಷ್ ಎಚ್.ಸಿ, ಜಗದೀಶ್ ಅರಕೇರಾ (ಜೆ), ಪಾಟೀಲ ಮುದನೂರ ಸೇರಿದಂತೆ ಮುಂತಾದವರು ಹಾಜರಿದ್ದರು.