ಮೌಂಟ್ ವೇವ್ ಪದವಿಪೂರ್ವ ಕಾಲೇಜಿನಲ್ಲಿ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಅವರಿಂದ ‘ನಗೆ ಹಬ್ಬ’

0
72

ಕಲಬುರಗಿ: ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸನಲ್ಲಿರುವ ಮೌಂಟ್ ವೇವ್ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಪ್ರಸಿದ್ಧ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಅವರಿಂದ ನಡೆದ ‘ನಗೆ ಹಬ್ಬ’ ಕಾರ್ಯಕ್ರಮ ಭಾಗವಹಿಸಿದ್ದ ವಿದ್ಯಾರ್ಥಿಗಳಲ್ಲಿನ ಒತ್ತಡವನ್ನು ಮರೆಯುವಂತೆ ಮಾಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿತು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ತಹಾಸೀಲ್ದಾರರಾದ ಅಂಜುಮ್ ತಬಸ್ಸುಮ್, ಇಂದಿನ ಆಧುನಿಕ ಒತ್ತಡದ ಪ್ರಪಂಚದಲ್ಲಿ ಬೇಗನೇ ಶ್ರೀಮಂತನಾಗಬೇಕೆಂಬ ಹಂಬಲದಿಂದ ಮಾನಸಿಕ ಒತ್ತಡಕ್ಕೊಳಗಾಗಿ ದುಡ್ಡಿನ ಹಿಂದೆ ಬೆನ್ನತ್ತಿ ನಗು ಜತೆಗೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ ಅವರು, ಕಮಲಾಪುರ ಮತ್ತು ಮಹಾಗಾಂವ ನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ವಿಶೇಷ ತರಬೇತಿ ಕೇಂದ್ರ ಆರಂಭಿಸಲು ಚಿಂತನೆ ಮಾಡಲಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಇಂದು ನಾವು ನಾನಾ ರೀತಿಯ ಒತ್ತಡಗಳೊಂದಿಗೆ ಜೀವನ ನಡೆಸುತ್ತಿದ್ದೇವೆ. ಇದರಿಂದ ಪಾರಾಗಬೇಕಾದರೆ ಅದಕ್ಕೆ ‘ನಗು’ವೊಂದೆ ದಿವ್ಯ ಔಷಧಿಯಾಗಿದೆ. ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಮಾತನಾಡಿ, ಪರಸ್ಪರ ಪ್ರೀತಿ, ವಿಶ್ವಾಸ, ಸ್ನೇಹ ಬೆಸೆಯುವ ಮತ್ತು ಪುಕ್ಕಟ್ಟೆಯಾಗಿ ಸಿಗುವ ‘ನಗು’ ನಮಗೆಲ್ಲರಿಗೂ ಸಂಜೀವಿನಿಯಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಕಾಲೇಜಿನ ಪ್ರಾಚಾರ್ಯ ಮಹಾದೇವ ಬಡಾ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಸುರೇಶ ಲೇಂಗಟಿ, ಶಿವಾನಂದ ಮಠಪತಿ, ಕಂದಾಯ ನಿರೀಕ್ಷಕ ವೆಂಕಟೇಶ ಅದೋನಿ, ಶಿವಾನಂದ, ಉಪನ್ಯಾಸಕರಾದ ಕುಶ ಮಠಪತಿ, ಅನಂತಕುಮಾರ, ನಾಗೇಶ, ಅಂಬಿಕಾ ಎಸ್. ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here