ಮಕ್ಕಳ ದಿನಾಚರಣೆಯ ಮುನ್ನಾ ದಿನವೇ ಮಕ್ಕಳ ಕಲರವ!

0
127

ಯಡ್ರಾಮಿ: ಮಕ್ಕಳಲ್ಲಿ ನಂಬಿಕೆ ಹಾಗೂ ಛಲ ಒಂದಿದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದಾಗಿದೆ ಎಂದು ಪಟ್ಟಣದ ಮುರಘೇಂದ್ರ ಶಿವಯೋಗಿ ವಿರಕ್ತ ಮಠದ  ಶ್ರೀ ಮ.ನಿ.ಪ್ರ ಸಿದ್ದಲಿಂಗ  ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಸಗರಾದ್ರಿ ಸಾಂಸ್ಕೃತಿಕ ಸಂಗಮ ವೇದಿಕೆ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಯಡ್ರಾಮಿಯ  ಸಹಭಾಗಿತ್ವದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ  ಆಯೋಜಿಸಲಾಗಿದ್ದ  ‘ವಿಶೇಷ  ಮಕ್ಕಳ ಸಂಗಮ-13’ ಕಾರ್ಯ ಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಈ ಸಲದ ವೇದಿಕೆಯ ಕಾರ್ಯ ಕ್ರಮವನ್ನು ಸಂಪೂರ್ಣವಾಗಿ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಮೀಸಲಿಟ್ಟಿರುವುದು ಸಕಾಲಿಕ ಶ್ಲಾಘನೀಯ ಕಾರ್ಯವೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಅನೇಕ ಶಾಲೆಗಳ ಮಕ್ಕಳಿಂದ ವೈವಿಧ್ಯಮಯ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭರತನಾಟ್ಯ,ದೇಶ ಭಕ್ತಿ ಗೀತೆ,ಜಾನಪದ ಗೀತೆ,ಭಾಷಣ,ಚಿತ್ರ ಕಲಾ ಪ್ರದರ್ಶನ ಸೇರಿದ್ದವರ ಗಮನ ಸೆಳೆಯಿತು. ಯಡ್ರಾಮಿ ತಾಲೂಕಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಪ್ಪ ಎಂ ಸಜ್ಜನ್ ಮುಖ್ಯ ಅತಿಥಿಯಾಗಿದ್ದರು.

ಕಲಬುರಗಿ ಎಪಿಡಿ ಫೌಂಡೇಶನ್ ದ ಸಂಪನ್ಮೂಲ ವ್ಯಕ್ತಿ ಈರಣ್ಣ ಬಿ ಬಿರಾದಾರ್ ‘ಮಕ್ಕಳಲ್ಲಿರಬೇಕಾದ ಶೈಕ್ಷಣಿಕ ಮೌಲ್ಯಗಳು’ ಕುರಿತಾಗಿ ಉಪನ್ಯಾಸ ನೀಡಿದರು.ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಅಭಿನಂದನಾ ಪ್ರಮಾಣ ಪತ್ರ ಹಾಗೂ ಶಾಲೆಗಳಿಗೆ ಸ್ಮರಣಿಕೆಯನ್ನು ನೀಡಲಾಯಿತು.ಇದೇ ಸಂದರ್ಭದಲ್ಲಿ ಮಕ್ಕಳಿಗಾಗಿಯೇ ಏರ್ಪಡಿಸಿದ್ದ ರಾಜ್ಯ ಮಟ್ಟದ ಕವನ ಸ್ಪರ್ಧೆಯ ಫಲಿತಾಂಶವನ್ನು ಘೋಷಿಸಲಾಯಿತು.

ಈ ಕಾರ್ಯ ಕ್ರಮ ವನ್ನು ಸಂಪೂರ್ಣವಾಗಿ ಮಕ್ಕಳೇ ಅಚ್ಚುಕಟ್ಟಾಗಿ  ನಿರ್ವಹಿಸಿದರು.

ಪ್ರಮುಖರಾದ ಮಹಾಲಿಂಗಪ್ಪಗೌಡ,ಗೊಲ್ಲಾಳಪ್ಪ ಬಿರಾದಾರ,ಪ್ರಶಾಂತ ಕುನ್ನೂರ,ಸಂತೋಷ ನವಲಗುಂದ,ಬಸವರಾಜ ಅರಕೇರಿ,ಬಸ್ಸೆಟಪ್ಪ ವಾರದ,ಶಾಂತಗೌಡ,ಶಂಭುಲಿಂಗ,ರುದ್ರಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here