ಕಲಬುರಗಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಯಡಾ ಮಾರ್ಟಿನ್ ಮಾರ್ಬನ್ಶಾಂಗ್ ಅವರನ್ನು ಸರ್ಕಾರ ಮತ್ತೆ ಮರು ನೇಮಕ ಮಾಡಿದ್ದು, ಯಡಾ ಮಾರ್ಟಿನ್ ಮತ್ತೆ ಮರು ಅಧಿಕಾರ ಸ್ವೀಕಾರ ಮಾಡಿದರು.
ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಕಲಬುರಗಿ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಆರೇ ತಿಂಗಳಲ್ಲಿ ಅವರನ್ನು ವರ್ಗಾವಣೆ ಮಾಡಿ ಆ ಜಾಗಕ್ಕೆ ವಿನಾಯಕ್ ಪಾಟೀಲ್ ಅವರನ್ನು ನಿಯೋಜನೆ ಮಾಡಲಾಗಿತ್ತು.
ಸರ್ಕಾರದ ಈ ಕ್ರಮ ಪ್ರಶ್ನಿಸಿ ಯಡಾ ಮಾರ್ಟಿನ್ ಅವರು ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ಮೊರೆ ಹೋಗಿದ್ದರು. ನ್ಯಾಯಾಲಯ ಯಡಾ ಅವರ ಪರವಾಗಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಅವರನ್ನು ಕಲಬುರಗಿಗೆ ಮರು ನೇಮಕ ಮಾಡಿದೆ.
ನಿನ್ನೆ ಸಂಜೆ ಯಡಾ ಮಾರ್ಟಿನ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ವಿನಾಯಕ್ ಪಾಟೀಲ್ ಬೆಂಗಳೂರು ಕೇಂದ್ರ ಕಚೇರಿಗೆ ವರ್ಗವಾಗಿದೆ.