ದಾಸೋಹ ಸೂತ್ರಗಳು ಜೀವನದ ಮೌಲ್ಯ ಹೊಂದಿವೆ: ಪ್ರೊ.ಎಚ್.ಎಂ ಮಹೇಶ್ವರಯ್ಯ

0
49

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ ೮ನೇ ಪೀಠಾಧಿಪತಿ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾರವರು ಬರೆದ ದಾಸೋಹ ಸೂತ್ರಗಳು ಆಧ್ಯಾತ್ಮಿಕತೆ, ಸಾಮಾಜಿಕ ಸಮಾನತೆ, ಆರ್ಥಿಕ ಪ್ರಗತಿ ಮತ್ತು ಜೀವನದ ಮೌಲ್ಯವನ್ನು ಒಳಗೊಂಡಿವೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಂ ಮಹೇಶ್ವರಯ್ಯ ಅಭಿಪ್ರಾಯ ಪಟ್ಟರು.

ಶರಣಬಸವ ವಿಶ್ವವಿದ್ಯಾಲಯ ಆವರಣದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಗುರುವಾರ ಶರಣಬಸವ ವಿಶ್ವವಿದ್ಯಾಲಯ ಶರಣಬಸವೇಶ್ವರ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ, ಗೋದುತಾಯಿ ಮಹಿಳಾ ಮಹಾವಿದ್ಯಾಲಯ, ಎಸ್.ಎಸ್.ಕೆ. ಬಸವೇಶ್ವರ ಯುಜಿ ಮತ್ತು ಪಿಜಿ ಕಾಲೇಜು ಜಂಟಿಯಾಗಿ ಆಯೋಜಿಸಿದ್ದ ದಾಸೋಹ ಸೂತ್ರಗಳ ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಪೂಜ್ಯ ಅಪ್ಪಾಜೀಯವರು ಬರೆದ ಮಹಾದಾಸೋಹ ಸೂತ್ರಗಳು ಸಮಾಜದ ಸೇವೆ ಮತ್ತು ಸಮರ್ಪಣೆಯ ಹಾಗೂ ಆಧ್ಯಾತ್ಮಿಕ ಆಲೋಚನೆಯ ಅತ್ಯುತ್ತಮ ಅಂಶಗಳನ್ನು ಒಳಗೊಂಡಿವೆ ಎಂದು ಹೇಳಿದರು.

Contact Your\'s Advertisement; 9902492681

ದಾಸೋಹದ ಪರಿಕಲ್ಪನೆ ಈಗಾಗಲೆ ಪ್ರಕೃತಿಯಲ್ಲಿ ಅಸ್ತಿತ್ವದಲ್ಲಿರುವುದು ಕಾಣುತ್ತೇವೆ. ಸಸ್ಯಗಳು, ಪಕ್ಷಿಗಳು ಮತ್ತು ಪ್ರಾಣಿಗಳು ಪರಸ್ಪರ ಸಹಾಯ ಮಾಡುತ್ತವೆ ಹಾಗೂ ಇತರರ ಅಗತ್ಯಗಳನ್ನು ಪೂರೈಸುವದನ್ನು ಮಹಾದಾಸೋಹ ಸೂತ್ರಗಳಲ್ಲಿ ನೈಜವಾಗಿ, ಅತೀ ಸುಂದರವಾದ ರೀತಿಯಲ್ಲಿ ವಿವರಿಸಲಾಗಿದೆ. ದಾಸೋಹ ಸೂತ್ರಗಳಲ್ಲಿ ಆಹಾರ, ಬಟ್ಟೆ, ಆಶ್ರಯ, ಹಣ ಮತ್ತು ಜ್ಞಾನದಂತಹ ಮೂಲಭೂತ ಅಗತ್ಯ ಸಂತೃಪ್ತಿ ಮತ್ತು ಸಂತೋಷದ ಬದುಕು ಸಾಗಿಸಲು ಸಹಕಾರಿಯಾಗಿವೆ ಎಂದು ತಿಳಿಸಿದರು.

ದಾಸೋಹ ಸೂತ್ರಗಳ ಬಗ್ಗೆ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಉತ್ತರ ಪ್ರದೇಶದ ಲಕ್ನೋದ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಪಕರಾದ ಡಾ. ಮನೀಶಕುಮಾರ ಗೌರವ ಮಾತನಾಡಿದ ಅವರು, ಸಂತ ಕಬೀರ ಮತ್ತು ಪೂಜ್ಯ ಅಪ್ಪಾಜಿ ಆಲೋಚನೆಗಳಲ್ಲಿ ಗಮನಾರ್ಹ ಆಲೋಚನೆಗಳಿವೆ. ಜೀವನ ಮತ್ತು ಸಮಾಜದ ಬಗೆಗಿನ ಮನೋಭಾವದಲ್ಲಿ ಆಹ್ಲಾದಕರ ಸಂಗತಿಯಾಗಿದೆ. ರಾಷ್ಟ್ರ ಮಟ್ಟದಲ್ಲಿ ಬೆಳೆಯಲು ಮಾರ್ಗದರ್ಶನವಾಗಿವೆ ಎಂದರು.

ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ ಕಾಯಕ ಮತ್ತು ದಾಸೋಹದ ಪರಿಕಲ್ಪನೆಯನ್ನು ಹೊಂದಿದ್ದ ಅಪ್ಪಾಜಿಯವರು ಕನ್ನಡ ಅಭಿಮಾನ ಹೊಂದಿದ್ದಾರೆ. ಮುಂಬರುವ ದಿನಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತದೆ ಎಂದು ಹೇಳಿದರು. ವಿವಿ ಕುಲಪತಿ ಡಾ.ನಿರಂಜನ ನಿಷ್ಠಿ ಮಾತನಾಡಿ, ಎಲ್ಲಾ ಧರ್ಮ ಸಂಸ್ಕೃತಿಗಳ ಮೌಲ್ಯಗಳ ಸಂಗಮ ದಾಸೋಹ ಸೂತ್ರಗಳಲ್ಲಡಗಿವೆ. ವೀರಶೈವ ತತ್ವಗಳಾದ ಕಾಯಕ, ದಾಸೋಹ ಹಾಗೂ ಅಷ್ಟಾವರಣದ ಮಹತ್ವವನ್ನು ದಾಸೋಹ ಸೂತ್ರಗಳು ಒಳಗೊಂಡಿವೆ ಎಂದರು. ಪೂಜ್ಯ ಅಪ್ಪಾಜೀಯವರ ಜನ್ಮ ದಿನದ ಪ್ರಯುಕ್ತ ಕಾರ್ಯಕ್ರಮದ ನಂತರ ಸಸಿ ನೇಡಲಾಯಿತು.

ಪ್ರೊ.ಸಾವಿತ್ರಾ ಜಂಬಲದಿನ್ನಿ ನಿರೂಪಿಸಿದರು. ಡಾ.ಡೌಳ್ಳೇಗೌಡರ್ ಸ್ವಾಗತಿಸಿದರು. ಡಾ.ನೀಲಾಂಬಿಕಾ ಶೇರಿಕಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here