ತಾಯಿ ಕೈತುತ್ತು ಅಮೃತಕ್ಕೆ ಸಮಾನ: ಶಿಕ್ಷಕಿ ಸೌಭಾಗ್ಯ

0
39

ಕಲಬುರಗಿ: ತಾಯಿಯ ಕೈತುತ್ತು ಅಮೃತಕ್ಕೆ ಸಮಾನ ಎಂದು ಇಂಗ್ಲೀಷ್ ಮಾಧ್ಯಮ ಮುಖ್ಯ ಶಿಕ್ಷಕಿ ಸೌಭಾಗ್ಯ ಜಿ. ಬಿಲಗುಂದಿ ಅವರು ಹೇಳಿದರು.

ನಗರದ ಹುಮ್ನಾಬಾದ್ ರಸ್ತೆಯಲ್ಲಿನ ರಾಮನಗರದಲ್ಲಿರುವ ಶ್ರೀ ಗುರು ಸಂಗಮೇಶ್ವರ್ ಶಿಕ್ಷಣ ಹಾಗೂ ಕಲ್ಯಾಣ ಸಂಸ್ಥೆಯ ಎಸ್.ಜಿ.ಎಸ್. ಲಿಟ್ಲ್ ಲೋಟಸ್ ಇಂಟರ್ ನ್ಯಾಶನಲ್ ವರ್ಣಾಶ್ರಮ ಶಾಲೆಯಲ್ಲಿ ಬುಧವಾರ ಜರುಗಿದ ತಾಯಿ ತುತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾಯಿಯ ಕೈತುತ್ತು ಪುಣ್ಯಾತ್ಮರಿಗೆ ಮಾತ್ರ ಸಿಗುವ ಅಜರಾಮರವಾದ ಮೃಷ್ಟಾನ್ನ ಬೋಜನವಾಗಿದೆ ಎಂದರು.

Contact Your\'s Advertisement; 9902492681

ನಮ್ಮ ವೇದೋಪನಿಷತುಗಳಲ್ಲಿ ವಿಘ್ನ ನಿವಾರಕನಾದ ಗಣಪ ಪ್ರಥಮ ವಂದಿತನಾದರೆ. ಪ್ರಥಮ ಪೂಜಿತೆ ತಾಯಿ ಮಾತೃ ದೇವೋಭವ ಎಂದು ಕರೆಯಿಸಿಕೊಳ್ಳುತ್ತಾಳೆ. ಅಮ್ಮ ಎಂದರೆ ಅದೇನೊ ಹರುಷ. ಆ ಎರಡಕ್ಷರದ ಪದದಲ್ಲಿ ಅದಮ್ಯ ಚೈತನ್ಯವಿದೆ ಎಂದು ಅವರು ಹೇಳಿದರು.

ಒಂದು ಮಗುವಿನ ಒಳ್ಳೆಯ ಭವಿಷ್ಯ ರೂಪಿಸುವಲ್ಲಿ ತಾಯಿ ಪಾತ್ರ ಪ್ರಧಾನವಾಗಿದ್ದು, ಅಂತಹ ಒಂದು ತಾಯಿ ತುತ್ತು ಹಾಕಿ ಬೆಳೆಸುವ ಪ್ರೀತಿ ವಾತ್ಸಲ್ಯಕ್ಕೆ ಹೆಚ್ಚು ಬೆಲೆ ಇದೆ. ಆದರೆ, ಇಂದಿನ ಯಾಂತ್ರಿಕ ಜೀವನದಲ್ಲಿ ಆಡಂಬರದಿಂದ ಬಾಳಬೇಕೆಂಬ ಮಹದಾಸೆಯಿಂದ ತಾಯಿ ತಂದೆ ಇಬ್ಬರು ದುಡಿಯಲಾರಂಭಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ತಾಯಿ ಸಹಜ ಪ್ರೀತಿ ವಾತ್ಸಲ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ವಿದ್ಯಾರ್ಥಿಯ ಪಾಲಕಿ ಲಕ್ಷ್ಮೀ ಗೋಪಾಲ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಗುರುಗಳಾದ ಪ್ರತಿಭಾ ಆರ್. ಕಣಜಿಕರ್, ಶರಣು ವಿ. ದಸ್ತಾಪೂರ್, ಸಹ ಶಿಕ್ಷಕರು ಮತ್ತು ಬೋಧಕೇತರ ಶಿಕ್ಷಕರು ಉಪಸ್ಥಿತರಿದ್ದರು. ಸಂದೀಪ ಪಾಟಿಲ್ ಅವರು ಕಾರ್ಯಕ್ರಮ ನಿರೂಪಿಸಿದರು. ಸವಿತಾ ಅವರು ಸ್ವಾಗತಿಸಿದರು. ರೇಣುಕಾ ಅವರು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here