ವಿದ್ಯಾರ್ಥಿಗಳಿಗೆ ರಿಂಗ್ ರಸ್ತೆಯಲ್ಲಿ ಹಾಸ್ಟೆಲ್ ನಿರ್ಮಾಣ: ಡಾ.ಶರಣು ಮೋದಿ

0
38

ಕಲಬುರಗಿ: ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ನಗರದ ಹೊರವಲಯದಲ್ಲಿರುವ ನಾಗನಹಳ್ಳಿ ರಿಂಗ್‌ರಸ್ತೆ ಸುಸಜ್ಜಿತ ಹಾಸ್ಟೆಲ್‌ ನಿರ್ಮಿಸಲಾಗುವುದು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣು ಮೋದಿ  ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ಘಟಕದ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಅವರು ಹೇಳಿದರು. ಗ್ರಾಮೀಣ ಪ್ರದೇಶ, ಹೊಬ್ಬಳಿ, ತಾಲ್ಲೂಕು ಮಟ್ಟದಲ್ಲಿ ಸಮುದಾಯವನ್ನು ಸಂಘಟಿತವಾಗಿಸಬೇಕಾಗಿದೆ. ಸಮುದಾಯದವರಿಗೆ ಆರ್ಥಿಕ ಸಹಾಯ, ಉದ್ಯೋಗ ಮತ್ತಿತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.

Contact Your\'s Advertisement; 9902492681

ರಾಜ್ಯದಲ್ಲಿ ಸಮಾಜದ ಮುಖಂಡರ ಮೇಲೆ ಸುಮಾರು 1600  ಜಾತಿ ನಿಂದನೆ ಕೇಸ್‌ಗಳಿವೆ. ಅವುಗಳ ಇತ್ಯರ್ಥಗೊಳಿಸಬೇಕಾಗಿದೆ ಎಂದರು. ಮಹಾಸಭಾದ ಯುವ ಘಟಕದ ಅಧ್ಯಕ್ಷ  ಎಂ.ಎಸ್‌.ಪಾಟೀಲ ನರಿಬೋಳ ಮಾತನಾಡಿ,  ನಗರದಲ್ಲಿ ಸಮುದಾಯವನ್ನು ಒಗ್ಗೂಡಿಸಿಬೇಕಾಗಿದೆ. ಸಮುದಾಯದ ಹಿಂದುಳಿದ ಜನರ ಸಮಸ್ಯೆಗಳಿಗೆ ಮಹಾಸಭಾ ಸ್ಪಂದಿಸುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ಸಭಾ ಘಟಕಕ್ಕೆ ಆದ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಸಭಾದ ಉಪಾಧ್ಯಕ್ಷ ಸಿದ್ರಾಮ ಪಾಟೀಲ ಅಫಜಲಪುರಕರ್‌, ಡಾ.ಶರಣು ಬಿ.ಪಾಟೀಲ, ಶಿವಾನಂದ ಖಜುರಿ,  ಡಾ.ಸುಧಾ ಆಲಕಾಯಿ, ಚಂದ್ರಶೇಖರ ಹರಸೂರ, ಶಾಂತು ಖ್ಯಾಮ, ಗೌರಿ ಆರ್, ವಿಜಯಕುಮಾರ ಹುಲಿ, ಡಾ.ರವಿ ಮಲಶೆಟ್ಟಿ, ಜಗದೇವಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here