ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದ ವೇತನಾನುದಾನಕ್ಕೆ ಆಗ್ರಹಿಸಿ ಕಲಬುರ್ಗಿಯಲ್ಲಿ ಬೃಹತ್ ರ‍್ಯಾಲಿ

0
62

ಕಲಬುರಗಿ: ರಾಜ್ಯಾದ್ಯಂತ ಖಾಸಗಿ ಶಾಲಾ, ಕಾಲೇಜುಗಳ ಸಮಸ್ಯೆ ಪರಿಹಾರಕ್ಕಾಗಿ ಹಾಗೂ ಸರ್ಕಾರದ ವೇತನಾನುದಾನಕ್ಕೆ ಒತ್ತಾಯಿಸಿ ಮಾಜಿ ಸಚಿವ ಹಾಗೂ ರಾಜ್ಯ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಹೋರಾಟವನ್ನು ಬೆಂಬಲಿಸಿ ನಗರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯವರು ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ, ಕಾಲೇಜುಗಳ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಿದ್ದರು.

ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ, ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ. ಅಂಬಲಗಿ ಅವರ ನೇತೃತ್ವದಲ್ಲಿ ನಗರದ ಕನ್ನಡ ಭವನದಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನಡೆದ ಬೃಹತ್ ಪ್ರತಿಭಟನಾ ರ‍್ಯಾಲಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಹಾಗೂ ನೌಕರರ ಹೋರಾಟ ಸಮನ್ವಯ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತಯ್ಯ ಸಿ. ಹಿರೇಮಠ್, ಸುನೀಲ್ ಹುಡಗಿ, ಮಹೇಶ್ ಧರಿ, ಶಿವಪುತ್ರಪ್ಪ ನೆಲ್ಲಗಿ, ಅನಿಲಕುಮಾರ್ ಡಾಂಗೆ, ಇಬ್ರಾಹಿಂ ಪಟೇಲ್, ಹಣಮಂತರಾಯಗೌಡ ಪಾಟೀಲ್, ಶೇಖ್ ಮಹಿಬೂಬ್, ಬಾಬುರಾವ್ ಸುಳ್ಳದ್, ಮಲ್ಲಿಕಾರ್ಜುನ್ ಅಲ್ಲಾಪೂರ್, ನಿತಿನ್ ಕೋಸಗಿ, ಡಾ. ಪರಮೇಶ್ವರ್ ಬನ್ಸೋಡೆ, ನವೀನರೆಡ್ಡಿ, ಅರುಣಕುಮಾರ್ ಪೋಚುಲ್, ಅರವಿಂದ್ ಬಸೂದೆ, ಸೋಮನಾಥ್ ರೆಡ್ಡಿ, ಬಸವಂತರಾವ್ ಪಾಟೀಲ್, ಪವನಕುಮಾರ್ ಕೊಡದೂರ್, ಭಾಗ್ಯಮ್ಮ ಉದನೂರ್, ಜ್ಯೋತಿ ಪಾಟೀಲ್, ಶಾಲಿನಿ, ಪೂಜಾಶ್ರೀ, ಅನಿಲಕುಮಾರ್ ಚವ್ಹಾಣ್, ಸುನಿಲ್ ಸೇಡಂ, ಮೆಹಬೂಬ್ ಅಲಿ, ಅಬ್ದುಲ್ ಮಜಿದ್, ಬಾಷಾಸಾಬ, ಶಾಂತಯ್ಯ ಸ್ವಾಮಿ, ನಾಗರಾಜ್ ಚಿತ್ತಾಪೂರ್, ಖಾಸಿಂಸಾಬ್, ಮರೆಪ್ಪ, ಶ್ರೀಶೈಲ್, ಮಹ್ಮದ್ ಶಬ್ಬೀರ್, ಶಿವರಾಜ್ ಕೊರಳ್ಳಿ, ನಾಗೇಂದ್ರ ನಂದಿಕೂರ್, ಕಾಶಿನಾಥ್, ಮುತ್ತಪ್ಪ, ರಾಜಶೇಖರ್ ಗುಡ್ಡಾ ಮುಂತಾದದವರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ೧೯೯೫ರ ನಂತರ ಪ್ರಾರಂಭವಾದ ಅನುದಾನ ರಹಿತ ಕನ್ನಡ ಮಾಧ್ಯಮ ಹಾಗೂ ಪ್ರಾದೇಶಿಕ ಭಾಷಾ ಮಾಧ್ಯಮದ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಾಲಾ ಕಾಲೇಜುಗಳಿ.ಗೆ ವೇತನನುದಾನವನ್ನು ವಿಸ್ತರಣೆ ಮಾಡುವಂತೆ, ಎನ್‌ಪಿಎಸ್ ರದ್ದುಗೊಳಿಸಿ, ಓಪಿಎಸ್ ಜಾರಿಗೆ ತರುವಂತೆ, ಕಾಲ್ಪನಿಕ ವೇತನ ಬಡ್ತಿ ಜಾರಿ ಮಾಡುವಂತೆ, ಜ್ಯೋತಿ ಸಂಜೀವಿನಿಯನ್ನು ಅನುದಾನಿತ ಶಾಲಾ, ಕಾಲೇಜು ಶಿಕ್ಷಕರಿಗೂ ಜಾರಿಗೊಳಿಸುವಂತೆ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ, ಈಗಿರುವ ಶಿಕ್ಷಕರ ಮತ್ತು ಮಕ್ಕಳ ಅನುಪಾತ ೧:೫೦ನ್ನು ಕಡಿಮೆ ಮಾಡಿ ೧:೪೦ಕ್ಕೆ ಜಾರಿ ಮಾಡುವಂತೆ, ೨೦೧೯-೨೦೨೦ರ ಆರ್‌ಟಿಇ ಶುಲ್ಕ ಮರುಪಾವತಿ ಪ್ರಕ್ರಿಯೆ ಶೀಘ್ರ ಪ್ರಾರಂಭಿಸುವಂತೆ ಆಗ್ರಹಿಸಿದರು.

ಅದೇ ರೀತಿ ೩೭೧(ಜೆ)ಯಡಿ ಕಲ್ಯಾಣ ಕರ್ನಾಟಕದ ಬೇಡಿಕೆಗಳನ್ನು ಸಹ ಹೋರಾಟದಲ್ಲಿ ಮಂಡಿಸಲಾಗುವುದು. ೩೭೧(ಜೆ)ಅಡಿ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚುವರಿಯಾಗಿ ಹತ್ತು ವರ್ಷಗಳ ಅನುದಾನ ನೀಡುವಂತೆ, ಖಾಸಗಿ ಶಾಲಾ, ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳಿಗಾಗಿ ಧನಸಹಾಯ ಮಾಡುವಂತೆ, ಅನುದಾನ ನೀಡುವವರೆಗೆ ೩೭೧(ಜೆ)ದಡಿ ಕಲ್ಯಾಣ ಕರ್ನಾಟಕದ ವ್ಯಾಪ್ತಿಯಲ್ಲಿರುವ ಅನುದಾನ ರಹಿತ ಶಾಲಾ, ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ, ಉಪನ್ಯಾಸಕರಿಗೆ ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ವೇತನ ನೀಡುವಂತೆ ಅವರು ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here