ಯಡಿಯೂರಿನಲ್ಲಿ ಶರಣ ಸಂದೇಶ ಜ್ಯೋತಿಯನ್ನು ಸ್ವೀಕರಿಸಿದ ವಿಶ್ವನಾಥ್ ಕೋರಣೇಶ್ವರ್ ಸ್ವಾಮೀಜಿ

0
88

ಕಲಬುರಗಿ: ಉಸ್ತುರಿ, ಧೋತ್ತರಗಾಂವ್, ಆಳಂದ್ ತೋಂಟದಾರ್ಯ ಮಠದ ಪೀಠಾಧಿಪತಿ ವಿಶ್ವನಾಥ್ ಕೋರಣೇಶ್ವರ್ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಸುಕ್ಷೇತ್ರ ಯಡಿಯೂರು ಸಿದ್ಧಲಿಂಗೇಶ್ವರ್ ಕರ್ತೃ ಗದ್ದುಗೆಯಿಂದ ಆಳಂದ್‌ವರೆಗೆ ಜರುಗಲಿರುವ ಶರಣ ಸಂದೇಶ ಜ್ಯೋತಿ ಯಾತ್ರೆ ಕಾರ್ಯಕ್ರಮದ ನಿಮಿತ್ಯ ಸೋಮವಾರ ಬೆಳಿಗ್ಗೆ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ್ ದೇವಸ್ಥಾನದಲ್ಲಿ ಜ್ಯೋತಿಯನ್ನು ವಿಶ್ವನಾಥ್ ಕೋರಣೇಶ್ವರ್ ಮಹಾಸ್ವಾಮೀಜಿ ಸ್ವೀಕರಿಸಿದರು.

ಪೂಜ್ಯ ವಿಶ್ವನಾಥ್ ಕೋರಣೇಶ್ವರ್ ಸ್ವಾಮೀಜಿ ಅವರ ನೇತೃತ್ವದಲ್ಲಿನ ಶರಣ ಸಂದೇಶ ಜ್ಯೋತಿ ಯಾತ್ರೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಪ್ರಭುಲಿಂಗ್ ಮಹಾಗಾಂವಕರ್, ಬಿಡದಿಯ ರೇಣುಕಪ್ಪ, ಜಾಗತಿಕ ಲಿಂಗಾಯತ ಮಹಾಸಭೆಯ ಆಳಂದ್ ತಾಲ್ಲೂಕು ಅಧ್ಯಕ್ಷ ರಮೇಶ್ ಲೋಹಾರ್, ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಗುರುಶರಣ್ ಪಾಟೀಲ್ ಕೊರಳ್ಳಿ, ಜಯ ಕರ್ನಾಟಕ ಸಂಘಟನೆಯ ಆಳಂದ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ್ ಕೊರಳ್ಳಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಮಾಜಿ ಅಧ್ಯಕ್ಷ ಎಸ್.ಬಿ. ಪಾಟೀಲ್, ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಸುಭಾಷ್ ಪಾಟೀಲ್ ತೆಲಕೋಣಿ, ಗ್ರಾಮ ಪಂಚಾಯಮಿತಿ ಅಭಿವೃದ್ಧಿ ಅಧಿಕಾರಿ ಬಾಬುರಾವ್ ರಾಯ್, ಖಜೂರಿಯ ಸಿದ್ಧೇಶ್ವರ್ ಭಜನಾ ಸಂಘದ ಅಧ್ಯಕ್ಷ ಸಂತೋಷ್ ವಾಣೇಗಾಂವ್, ಶ್ರೀಮಂತ್ ಸುಲ್ತಾನಪೂರೆ, ಶ್ರೀಶೈಲ್ ಚೆಂಗಳೆ, ಅಕ್ಕನ ಬಳಗದ ಸುನಂದಾ ರಾಯ್, ಮಂದಾಕಿನಿ ಖಜೂರಿ, ಪಾರ್ವತಿ ಧಂಗಾಪೂರ್, ಸಿದ್ಧರಾಮ್ ಹಡಪದ್, ಪತ್ರಕರ್ತ ಬಸವರಾಜ್ ಚಿನಿವಾರ್ ಮುಂತಾದವರು ಉಪಸ್ಥಿತರಿದ್ದರು.
ಯಾತ್ರೆಯ ನಿಮಿತ್ಯ ಭಾನುವಾರ ಆಳಂದ್‌ದಿಂದ ಆಗಮಿಸಿದ ಯಾತ್ರಾರ್ಥಿಗಳು ಯಾದಗಿರಿ ಜಿಲ್ಲೆಯ ಸುರಪುರ್ ತಾಲ್ಲೂಕಿನ ತಿಂಥಣಿ ಮೌನೇಶ್ವರ್ ಕ್ಷೇತ್ರಕ್ಕೆ ಭೇಟಿ ನೀಡಿ, ದರ್ಶನ ಪಡೆದು, ಆನಂತರ ರಾತ್ರಿ ಯಡಿಯೂರು ಸಿದ್ಧಲಿಂಗೇಶ್ವರರ ಸುಕ್ಷೇತ್ರಕ್ಕೆ ಆಗಮಿಸಿ ವಾಸ್ತವ್ಯ ಮಾಡಿದರು.

Contact Your\'s Advertisement; 9902492681

ಬೆಳಿಗ್ಗೆ ಜ್ಯೋತಿ ಯಾತ್ರೆ ಸ್ವೀಕರಿಸಿದ ಸ್ವಾಮೀಜಿ, ಯಾತ್ರಾರ್ಥಿಗಳೊಂದಿಗೆ ಚಿತ್ರದುರ್ಗ ಶ್ರೀ ಮುರುಗಾಮಠಕ್ಕೆ ಭೇಟಿ ನೀಡಿ, ಗದುಗಿನ ತೊಂಟದಾರ್ಯ ಮಠಕ್ಕೆ ತೆರಳಿ ವಾಸ್ತವ್ಯ ಮಾಡಲಿದ್ದು, ಮಂಗಳವಾರ ಆಳಂದ್ ಕಡೆ ಯಾತ್ರೆ ತೆರಳಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here