ರಾಕ್ಷಸ ಆರ್ಥಿಕ ವ್ಯವಸ್ಥೆ ಅಳಿಸಲು ಗಾಂಧಿವಾದಿ ಪ್ರಸನ್ನ ಹೆಗ್ಗೋಡು ಕರೆ

0
52

ಸುರಪುರ: ಇಂದು ದೇಶದಲ್ಲಿನ ನೇಕಾರ,ಕೃಷಿ ಸೇರಿದಂತೆ ಅನೇಕ ಕುಶಲಕರ್ಮಿಗಳನ್ನು ರಕ್ಷಿಸಲು ಹಾಗು ಗುಡಿ ಕೈಗಾರಿಕೆಗಳು ಅವನತಿಹಂತದಲ್ಲಿವೆ ಎಲ್ಲರು ವಿದೇಶಿ ರಾಕ್ಷಸ ಆರ್ಥಿಕ ವ್ಯವಸ್ಥೆಯನ್ನು ಮಾರುಹೋಗಿ ನಮ್ಮ ಸಂಸ್ಕೃತಿಯೊಂದಿಗೆ ಅನೇಕರ ಬಾಳಿನಲ್ಲಿ ಆಟವಾಡುತ್ತಿದ್ದಾರೆ ಇದನ್ನು ಅಳಿಸಲು ಸತ್ಯಾಗ್ರಹಕ್ಕೆ ಕೈಜೊಡಿಸುವಂತೆ ಹಿರಿಯ ಗಾಂಧಿವಾದಿ ಹಾಗು ಗ್ರಾಮ ಸೇವಾ ಸಂಘದ ಮಾರ್ಗದರ್ಶಕ ಪ್ರಸನ್ನ ಹೆಗ್ಗೋಡು ಕರೆ ನೀಡಿದರು.

ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ ಕುರಿತ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ದೇಶದಲ್ಲಿರುವ ಎಲ್ಲಾ ಕುಶಲಕರ್ಮಿ ವರ್ಗಗಳು ಇಂದು ತೀವ್ರತರವಾದ ಸಂಕಷ್ಟ ಎದುರಿಸುತ್ತಿವೆ. ಗುಡಿ ಕೈಗಾರಿಕೆಗಳು ನಾಶಮಾಡಲು ವಿದೇಶಿ ಆರ್ಥಿಕ ವ್ಯವಸ್ಥೆಯ ಜಾಗತೀಕರಣದ ಪ್ರಭಾವ ಹೆಚ್ಚಾಗುತ್ತಿದೆ. ಇದರಿಂದ ದೇಶದ ಸಂಸ್ಕೃತಿ,ಪರಂಪರೆ ಮತ್ತು ಪಾರಂಪರಿಕವಾದ ಅನೇಕ ಕಸುಬುಗಳು ಅಳಿವಿನಂಚಿಗೆ ಬಂದಿವೆ.ಆದ್ದರಿಂದ ಕೇಂದ್ರ ಸರಕಾರ ಕೂಡಲೆ ವಿದೇಶಿ ಆರ್ಥಿಕ ನೀತಿಯನ್ನು ಕೈಬಿಟ್ಟು ಸ್ಥಳಿಯವಾದ ಎಲ್ಲಾ ಗುಡಿ ಕಯಗಾರಿಕೆಗಳ ಉತ್ತೇಜನಕ್ಕೆ ಮುಂದಾಗಬೇಕು.ಇದರಿಂದ ಗುಡಿ ಕೈಗಾರಿಕೆಗಳು ಉಳಿಯಲಿವೆ.ದೇಶಿ ಸಂಸ್ಕೃತಿಯೂ ಉಳಿಯಲಿದೆ.ಅಲ್ಲದೆ ಗುಡಿ ಕೈಗಾರಿಕೆಗಳಿಂದ ವಸ್ತುಗಳ ತಯಾರಿಸುವುದರಿಂದ ಪರಿಸರ ಹಾನಿಯೂ ತಪ್ಪಲಿದೆ.ಆದ್ದರಿಂದ ಸರಕಾರಗಳು ಪಾರಂಪರಿಕ ಕಸುಬುಗಳಿಗೆ ಶೂನ್ಯ ಬಡ್ಡಿದರದ ಸಾಲ ಮತ್ತು ಇವುಗಳು ಅಭಿವೃಧ್ಧಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

Contact Your\'s Advertisement; 9902492681

ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ(ತಾತಾ) ಮಾತನಾಡಿ,ಜಾಗತೀಕ ಮಟ್ಟದಲ್ಲಿ ನಮ್ಮ ದೇಶದ ಸಂಸ್ಕೃತಿ ಮತ್ತು ಕಲೆಗಳ ಉಳಿವು ಮತ್ತು ಬೆಳವಣಿಗೆ ಇಂದಿನ ಅವಶ್ಯವಾಗಿದೆ.ಆ ನಿಟ್ಟಿನಲ್ಲಿ ಗ್ರಾಮ ಸೇವಾ ಸಂಘ ಹಾಗು ಹೋರಾಟಗಾರ ಪ್ರಸನ್ನರವರು ನಡೆಸುತ್ತಿರುವ ಈ ಜಾಗೃತಿಗೆ ನಮ್ಮ ಬೆಂಬಲವಿದೆ. ದೇಶದ ಪರಂಪರೆಗಾಗಿ ನಾವು ಇಂತಹ ಕಾರ್ಯಕ್ಕೆ ಸದಾ ಬೆಂಬಲಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಬಸವರಾಜ ಕೆಂಡದ್, ಭಾರದ್ವಾಜ, ಅಂಬ್ರಣ್ಣ ಹುಡೇದ, ಹೆಚ್.ಸಿ ಪಾಟೀಲ ಹಾಗು ವೀರಸಂಗಪ್ಪ ಹಾವೇರಿ ಮಾತನಾಡಿದರು.
ವೇದಿಕೆ ಮೇಲೆ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ, ವಿಠಪ್ಪ ಗೋರಂಟಿ,  ಬಿ.ಎ.ಕೆಂಚಾರೆಡ್ಡಿ, ಅಭಿಲಾಷ್, ಕೀರಪ್ಪ ಬಡಗಾ ಇದ್ದರು.ಜ್ಞಾನೇಶ್ವರ ಪಾಣಿಭಾತೆ,ಚೆನ್ನಮಲ್ಲಿಕಾರ್ಜುನ ಗುಂಡಾನೋರ ಪ್ರಾರ್ಥಿಸಿದರು.ಆರ್.ಕೆ.ಭಗವಾನ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here