ಈಶಾನ್ಯ ಶಿಕ್ಷಕರ ಹಾಗೂ ಪದವಿಧರರ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಲು ಮನವಿ

0
367

ಸುರಪುರ: ಈಶಾನ್ಯ ಪದವಿಧರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಈ ಬಾರಿ ಕಡಿಮೆ ಮತದಾರರು ನೋದಣಿಗಾಗಿ ಅರ್ಜಿ ಸಲ್ಲಿಸಿದ್ದು ಕಳೆದ ಬಾರಿ ಚುನಾವಣೆಯಲ್ಲಿ ಈಶಾನ್ಯ ಪದವಿಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಸುಮಾರು ೩೦ ಸಾವಿರಕ್ಕೂ ಹೆಚ್ಚು ಮತದಾರರಿದ್ದರು ಆದರೆ ಈ ಬಾರಿ ಕಡಿಮೆ ಮತದಾರರು ನೋಂದಣಿ ಅರ್ಜಿಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ ತಕ್ಷಣೆವೆ ಕ್ಷೇತ್ರದ ಚುನಾವಣಾ ಅಧಿಕಾರಿಗಳು ಎಲ್ಲಾ ಅಧಿಕಾರಿಗಳ ಸಭೆ ನಡೆಸಿ ಮತದಾರರ ನೋಂದಣಿಯು ಹೆಚ್ಚಾಗಲು ಕ್ರಮವಹಿಸಲು ಸೂಚಿಸಬೇಕು ಎಂದು ವೀಧಾನ ಪರಿಷತ್ ಮಾಜಿ ಸದಸ್ಯ ಶಶೀಲ ನಮೋಷಿ ಒತ್ತಾಯಿಸಿದ್ದಾರೆ.

ಈಶಾನ್ಯ ಪದವಿಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರಾರ್ಥವಾಗಿ ಹಾಗೂ ಶಿಕ್ಷಕರ ಕುಂದು ಕೊರತೆಯನ್ನು ಆಲಸಲು ಆಗಮಿಸಿದ್ದ ಅವರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಬಾರಿ ಪ್ರತಿಯೊಬ್ಬ ಶಿಕ್ಷಕರು ಮತದಾನದಲ್ಲಿ ಪಾಲ್ಗೊಳಬೇಕು ಈ ಮೂದಲು ನೋದಣಿ ಮಾಡಿಸಿದವರು ಕೂಡಾ ಈ ಬಾರಿ ಮತದಾರರ ಪಟ್ಟಿಯಲ್ಲಿ ಮತ್ತೊಮ್ಮೆ ನೋಂದಣಿ ಮಾಡಿಸಬೇಕು ಎಂದು ಚುನಾವಣಾ ಆಯೋಗವು ಹೇಳಿದೆ ಕಾರಣ ಎಲ್ಲಾ ಶಿಕ್ಷಕರು ಹಾಗೂ ಪದವಿಧರರು ಮರು ನೋಂದಣಿ ಮಾಡಿಸಿಕೊಳ್ಳಿ ಎಂದು ತಿಳಿಸಿದರು.

Contact Your\'s Advertisement; 9902492681

ಈಭಾಗದ ಕೆಲವು ಶಾಲಾ ಶಿಕ್ಷಕರಿಗೆ ಕಳೇದ ಐದು ತಿಂಗಳಿನಿಂದ ಸಂಬಳ ವಾಗದೆ ಸಂಕಷ್ಟ ಪರಿಸ್ಥಿಯಲ್ಲಿದ್ದಾರೆ ಸಂಬಳ ವಿತರಣೆಯಲ್ಲಿ ಬಹಳಷ್ಟು ವಿಳಂಬವಾಗಿದೆ ಆರ್.ಎಂ.ಎಸ್.ಎ ಮತ್ತು ಎಸ್.ಎಸ್.ಎ ಶಾಲಾ ಶಿಕ್ಷಕರ ಸಂಬಳಕ್ಕೆ ನೀಡುವ ಅನುದಾನ ನೀಡುವಲ್ಲಿ ಕೆಲವು ಬದಲಾವಣೆ ಮಾಡುವಂತೆ ಈಗಾಗಲೆ ಶಿಕ್ಷಣ ಸಚಿವ ಸುರೇಶ ಕುಮಾರ ಅವರಿಗೆ ಒತ್ತಾಯ ಮಾಡಲಾಗಿದೆ ಅವರೂ ಕೂಡ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ ಶಿಕ್ಷಣ ಇಲಾಖೆಯಲ್ಲಿ ೧೨೮ ಕೋಟಿ ಶಿಕ್ಷಕರ ಹಾಗೂ ಸಿಬ್ಬಂದಿಗಳ ಸಂಬಳವು ಬಾಕಿ ಇದೆ ಸರ್ಕಾರ ತಕ್ಷಣಕ್ಕೆ ಈಗಾಗಲೆ ೬೮ ಕೋಟಿ ರೂ ಬಿಡುಗಡೆಗೊಳಿಸಲಾಗಿದೆ ಇನ್ನುಳಿದ ಅನುದಾನವನ್ನು ಕೆಲವೆ ದಿನಗಳಲ್ಲಿ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ ಎಂದು ಹೇಳಿದರು.

ಆರ್ಥೀಕ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸಂಬಳ ವಿಳಂಬವಾಗದಂತೆ ನೋಡಿಕೊಂಡು ಹೊಸ ಆರ್ಥೀಕ ವರ್ಷದಲ್ಲಿ ಈರೀತಿಯಾಗದಂತೆ ಕ್ರಮವಹಸುತ್ತಿದ್ದಾರೆ ಹಾಗೂ ಹೆಚ್ಚುವರಿ ಅನುದಾನವನ್ನು ಕೂಡ ಕಲ್ಪಿಸಲು ಲಾಗುತ್ತಿದ್ದೆ ಕೇಂದ್ರದ ಅನುದಾನದ ಪಾಲು ಬಂದನಂತರ ಶಿಕ್ಷಕರ ಸಂಬಳವಾಗುತ್ತಿತ್ತು ಬರುದಿನಗಳಲ್ಲಿ ಹಾಗಾಗೂವುದಿಲ್ಲ ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯದೆ ರಾಜ್ಯ ಸರ್ಕಾರದಿಂದಲೆ ಇಡಿ ಇಲಾಖೆಯ ಸಂಬಳ ಭರಿಸಲು ಕ್ರಮಕೈಗೊಳ್ಳಲಾಗುತ್ತಿದೆ ಮುಂದಿನ ಆರ್ಥೀಕ ವರ್ಷದಲ್ಲಿ ಸಂಬಳ ವಿಳಂಬದ ಸಮಸ್ಯೆ ಇರುವುದಿಲ್ಲ
ಕೆಕೆಆರ್‌ಡಿಬಿ ಅಡಿಯಲ್ಲಿ ನೀಡಿರುವ ಸಾವಿರದ ಐದುನೂರು ಕೋಟಿ ಅನುದಾನವನ್ನು ಬಳಕೆ ಮಾಡಲು ಆಗುತ್ತಿಲ್ಲ ಈ ಅನುದಾನದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರ ವೇತನ ಹಾಗೂ ಪೀಠೋಪಕರಣ ಮತ್ತು ಸಮವಸ್ತ್ರಗಳ ಖರೀದಿ ಅನುದಾನವನ್ನು ಕಲ್ಪಸಲು ಮುಖ್ಯಮಂತ್ರಿಗಳಲ್ಲಿ ಈಗಾಗಲೆ ವಿನಂತಿಸಿಕೊಳ್ಳಲಾಗಿದೆ ಮತ್ತು ೩೭೧ ಜೆ ಅಡಿಯಲ್ಲಿ ಈ ಭಾಗದ ಜನರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾಯಿತಿ ಕಾಯ್ದೆಯನ್ನು ಮರು ಪರಿಶೀಲಿಸಿ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇನ್ನು ಶಿಕ್ಷಕರ ಹೊಸ ಪಿಂಚಣಿ ಮತ್ತು ಇನ್ನಿತರ ಸಮಸ್ಯಗಳ ಕುರಿತು ತಿಳಿದುಕೊಂಡಿದ್ದೆನೆ ಮುಂಬರುವ ದಿನಗಳಲ್ಲಿ ಶಿಕ್ಷಕರ ಸಮಸ್ಯಗಳ ಕುರಿತು ಸರ್ಕಾರದ ಗಮನ ಸೇಳೆಯಲು ಪ್ರಯತ್ನಸಲಾಗುವುದು ಮತ್ತು ಅನುದಾನಿತ ಶಿಕ್ಷಕರ ಮತ್ತು ಉಪನ್ಯಾಸಕರ ಪಿಂಚಣಿ ಮತ್ತು ಜೋತಿಸಂಜೀವಿನಿ ಯೋಜನೆ ವಿಸ್ತಾರ ಇನ್ನು ಹಲವು ಸಮಸ್ಯೆಗಳನ್ನು ಸಚಿವರಲ್ಲಿ ಚರ್ಚಿಸಿ ಸರ್ಕಾರದ ಗಮನ ಸೇಳೆಯಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೇಣುಗೋಪಾಲ ಜೇವರ್ಗಿ, ಮಲ್ಲೇಶಿ ಪಾಟೀಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here