ವಿಧ್ವಂಸಕ ಕೃತ್ಯ ತಡೆಯಲು ಎಲ್ಲರೂ ಪೊಲೀಸ್ ಇಲಾಖೆಗೆ ಸಹಕರಿಸಿ: ಎಸ್ಪಿ ವಂಶಿಕೃಷ್ಣ

0
130

ತುಮಕೂರು: ಶ್ರೀಲಂಕಾದಲ್ಲಿ  ನಡೆದ ಬಾಂಬ್ ಸ್ಪೋಟದಲ್ಲಿ ಜಿಲ್ಲೆಯ ನಾಗರೀಕರನ್ನ ಕಳೆದುಕೊಂಡಿದ್ದೇವೆ. ಅದರೆ ತುಮಕೂರಿನಲ್ಲಿ ಇಂಥ ಕೃತ್ಯ ನಡೆಯದಂತೆ ನಿಮ್ಮಲ್ಲೆರ ಸಹಕಾರ ಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ ಮನವಿ ಮಾಡಿದರು

ತುಮಕೂರಿನ ಚಿಲುಮೆ ಸಮುದಾಯ ಭವನದಲ್ಲಿ ಸವ೯ಜನಾಂಗದ ಸಭೆ ಕರೆದು ಅವರು ಮಾತನಾಡಿದ ಅವರು  ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಿಂದ ರಾಜ್ಯದ ಜನರು ಬೆಚ್ಚಿ ಬೀಳುವಂತೆ ಮಾಡಿದೆ. ಈ ದುರಂತದಲ್ಲಿ ತುಮಕೂರಿನ ನಾಗರೀಕರೊಬ್ಬರು ಮೃತಪಟ್ಟಿರೋದು ನೋವಿನ ಸಂಗತಿಯಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ನಾಗರಿಕರು ತುಮಕೂರು ಶಾಂತಿ ಜಿಲ್ಲೆಯಾಗಿರಬೇಕು ಅನ್ನೋದು ನಮ್ಮೆಲ್ಲರ ಜವಾಬ್ದಾರಿ ಅಂದರು ಹಾಗೂ ಎರಡು ದಿನಗಳ ಹಿಂದೆ ನಗರದ ಹೋಟೆಲ್ ಮಾಲೀಕರುಗಳನ್ನು ಕರೆಸಿ ಅವರಿಗೂ ಸಹ ಈ ವಿಷಯದ ಬಗ್ಗೆ ಪ್ರಸ್ತಾಪಿಸರುವ ಬಗ್ಗೆ ಸ್ಮರಿಸಿದರು.

Contact Your\'s Advertisement; 9902492681

ಈಗಾಗಲೇ ಕೆಲವು ಬಡಾವಣೆಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಕ್ಯಾಮರಾಗಾಳು ಇಲ್ಲದ ಕಡೆಗಳಲ್ಲಿ ಸ್ಥಳೀಯ ನಾಗರೀಕರೇ ಸಿಸಿ ಕ್ಯಾಮರಾಗಳಂತೆ. ಯಾವುದೆ ವ್ಯಕ್ತಿ, ವಸ್ತುಗಳು ಕಂಡು ಬಂದರೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ವಿವಿಧ ಬಡಾವಣೆಗಳಿಂದ ಹಾಗೂ ವಿವಿಧ ಧಾಮಿ೯ಕ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ಯಪಡಿಸಿದರುನ ಅಲ್ಲದೆ ಪೊಲೀಸ್ ಇಲಾಖೆಗೆ ತಮ್ಮ ಸಹಕಾರ ನೀಡುವುದಾಗಿ ಹೇಳಿದರು.

ನಗರ ಡಿವೈಎಸ್ ಪಿ ತಿಪ್ಪೇಸ್ವಾಮಿ, ಸಿಪಿಐಗಳಾದ ಚಂದ್ರಶೇಖರ್, ರಾಧಾಕೃಷ್ಣ, ರಾಘವಗೌಡ, ಮಧುಸುಧನ್, ಎಲ್ಲಾ ಪಿಎಸ್ ಐಗಳು ಭಾಗವಹಿಸಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here