ರಾಜ್ಯದ ಎರಡು ಕ್ಷೇತ್ರದಲ್ಲಿ ಉಪಚುನಾವಣೆ, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

0
310

ಬೆಂಗಳೂರು: ರಾಜ್ಯದಲ್ಲಿ ಎರಡು ತೆರವು ಇರುವ ಸ್ಥಾನಗಳಿಗೆ ಚುನಾವಾಣೆ ಆಯೋಗ ಉಪಚುನಾವಣೆ ಘೋಷಿಸಿದ್ದು, ಮೇ. 19 ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಇದೇ 29 ಕೊನೆ ದಿನವಾಗಿದೆ. ಅದರಂತೆ ಆಯಾ ರಾಜಕೀಯ ಪಕ್ಷಗಳು ಸಹ ತಮ್ಮ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ ಮಾಡಿವೆ.

ರಾಜ್ಯದಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರಕ್ಕೆ ಆಗ ಆಗ ಶಾಸಕರು ಹಾಗೂ ವಿರೋಧ ಪಕ್ಷದ ನಾಯಕರು ಶಾಕ್ ನೀಡುತಿವೆ. ಈ ಮೂಲಕ ರಾಜ್ಯದಲ್ಲಿ ಹೈ ಡ್ರಾಮಗಳು ನಡೆತೀರುತ್ತವೆ. ಈ ಸಂದರ್ಭದಲ್ಲಿ ರಾಜಕೀಯ ಗದ್ದುಗೆ ಎರಲು ಮತ್ತು ಒಳಿಸಿಕೊಳಲು ಈ ಎರಡು ಕ್ಷೇತ್ರ ಚುನಾವಣೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಟಿಕೆಟ್ ಪ್ರಮುಖ ಪಾತ್ರವಹಿಸುತ್ತವೆ ಎಂಬುದರಲ್ಲಿ ಸಂದೇಹ ವಿಲ್ಲ.

Contact Your\'s Advertisement; 9902492681

ಬಿಜೆಪಿ ಮತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳಲ್ಲಿ ಉಪ ಚುನಾವಣೆಯ ಟಿಕೆಟ್ ಗಾಗಿ ಕಳೆದ 5 ದಿನಗಳಿಂದ ಭಾರಿ ಪೈಪೋಟಿ ನಡೆದಿತ್ತು. ಈ ಮಧ್ಯೆ ಬಂಡಾಯ ಹೋರಬಿಳುವ ಸಾಧ್ಯತೆಗಳು ಹೆಚ್ಚಿದವು ಎನ್ನಲಾಗುತ್ತಿತ್ತು. ಇದರೆ ಪಕ್ಷದ ನಾಯಕರು ಸಭೆಗಳ ಮೇಲೆ ಸಭೆ ನಡೆಸಿ ಎಲ್ಲರ ಮನವೂಲಿಸಲು ಕಸರತ್ತು ನಡೆಸಿದರು. ಈ ಪ್ರಯತ್ನದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಕೊನೆಗೂ ಯಶಸ್ವಿಯಾಗಿವೆ.

ಚಿಂಚೋಳಿ ಕ್ಷೇತ್ರದಿಂದ  ಮಾಜಿ ಶಾಸಕ ಡಾ. ಉಮೇಶ ಜಾಧವ ಅವರ ಪುತ್ರ ಅವಿನಾಶ ಜಾಧವ್ ಗೆ  ಬಿಜೆಪಿ ಟೀಕೆಟ್ ನೀಡಿದ್ದು, ಕುಂದಗೋಳ ಕ್ಷೇತ್ರದಿಂದ ಯಡಿಯೂರಪ್ಪ ಅವರ ಸಂಬಂಧಿ ಚಿಕ್ಕನಗೌಡ ಪಾಟೀಲ್ ಅವರಿಗೆ ಟಿಕೆಟ್ ನೀಡಿದ್ದು, ಚಿಕ್ಕನಗೌಡ ಅವರು ಈಗಾಗಲೇ ಒಂದು ನಾಮಪತ್ರವನ್ನು ಸಲ್ಲಿಸಿಯೂ ಆಗಿದೆ, ಅಧಿಕೃತ ನಾಮಪತ್ರ ಸಲ್ಲಿಕೆ ಇನ್ನೂ ಬಾಕಿ ಇದೆ ಎಂದು ತಿಳಿದು ಬಂದಿದೆ.

ಅದೇ ರೀತಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯಾರ್ಥಿಗಳಾಗಿ ಚಿಂಚೋಳಿಯಿಂದ ಸುಭಾಷ ರಾಠೋಡ್ ಅವರಿಗೆ ಟಿಕೆಟಿ ನೀಡಿದ್ದು. ಕುಂದಗೋಳ ಕ್ಷೇತ್ರದಿಂದ ಮಾಜಿ ಸಚಿವ ದಿ. ಸಿ.ಎಸ್. ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿಗೆ ಅವರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕಿಳಿಸಿ ತಡ ರಾತ್ರಿ ಪಕ್ಷ ಆದೇಶ ಹೊರಡಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here