ಮಕ್ಕಳ ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲು ಸತ್ಯಂಪೇಟೆ ಸಲಹೆ

0
63

ಶಹಾಬಾದ: ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಎಲ್ಲರ ಬದುಕನ್ನು ಆವರಿಸಿದ್ದು, ಮಕ್ಕಳಿಗೆ ಶಾಲೆಯಲ್ಲಿ ಎಷ್ಟೇ ತಿಳಿವಳಿಕೆ, ಅಪ್ಪ-ಅಮ್ಮಂದಿರು ಎಷ್ಟೇ ಬೋಧನೆ ಮಾಡಿದರೂ ಜೀವನದ ಪಾಠ ಕಲಿಸುವಲ್ಲಿ ಪಾಲಕರುವಿಫಲರಾಗಿದ್ದೇವೆ ಎಂದು ಪತ್ರಕರ್ತ, ಸಾಹಿತಿ ಶಿವರಂಜನ್ ಸತ್ಯಂಪೇಟೆ ತಿಳಿಸಿದರು.

ನಗರದ ಎಸ್. ಎಸ್. ಮರಗೋಳ್ ಪಿಯು ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ “ವಿಶ್ವ ಮಕ್ಕಳ ದಿನಾಚರಣೆ-೨೦೧೯” ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಹಿಂದಿನ ಶಿಕ್ಷಣ ಪದ್ಧತಿ ಪಕ್ಕಾ ಪ್ರಯೋಗಾತ್ಮಕವಾಗಿತ್ತು. ಆದರೆ ಇಂದಿನ ಆಧುನಿಕ ಶಿಕ್ಷಣ ಪದ್ಧತಿ ಮಕ್ಕಳಲ್ಲಿನ ಸೃಜನಶೀಲತೆ ಮತ್ತು ಕ್ರಿಯಾಶೀಲತೆ ನಾಶ ಮಾಡಿದೆ. ಇಂದಿನ ಮಕ್ಕಳು ಹಾಗೂ ಪೋಷಕರು ಮೌಲ್ಯಾಧಾರಿತ ಬದುಕಿಗಿಂತ, ವಸ್ತು ಆಧಾರಿತ ಬದುಕಿನ ಬಗ್ಗೆ ಹೆಚ್ಚು ವ್ಯಾಮೋಹಿತರಾಗಿದ್ದು, ಮಕ್ಕಳಿಗೆ ನೈತಿಕ ಶಿಕ್ಷಣ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

Contact Your\'s Advertisement; 9902492681

ಅತಿಥಿಗಳಾಗಿ ಆಗಮಿಸಿದ್ದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಯಿಂದ ವ್ಯಕ್ತಿತ್ವ ವಿಕಸನವಾಗಲಿದ್ದು, ಮಹಾತ್ಮರ ಆದರ್ಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾರ್ಥಕ ಬದುಕನ್ನು ಬಾಳಬೇಕು ಎಂದರು. ಎಸ್.ಎಸ್. ಮರಗೋಳ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಅನಿಲಕುಮಾರ ಆರ್. ಕೊಪ್ಪಳಕರ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಶ್ರದ್ಧೆ, ವಿನಯ ಬೆಳೆಸಿಕೊಳ್ಳುವುದರ ಜೊತೆಗೆ ಅಧ್ಯಯನಶೀಲರಾಗಬೇಕೆಂದು ಕರೆ ನೀಡಿದರು.

ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಶಿವಲಾಲ ಎಸ್. ಹತ್ತಿ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಲಹೆಗಾರ ಬಸವರಾಜ ಮದ್ರಿಕಿ, ವಿದ್ಯಾರ್ಥಿ ಸಲಹೆಗಾರ ಡಾ. ವೆಂಕಟರಾಜಪ್ಪ ಪಿ., ಉಪನ್ಯಾಸಕಿ ಸುಮಂಗಲಾ ಪಾಟೀಲ ವೇದಿಕೆಯಲ್ಲಿದ್ದರು. ಮಮತಾ ರಾಜಾಪುರ ನಿರೂಪಿಸಿದರು. ಶ್ವೇತಾ ಸ್ವಾಗತಿಸಿದರು. ಗೌರಮ್ಮ ಪ್ರಾರ್ಥನೆಗೀತೆ ಹಾಡಿದರು. ಇದೇವೇಳೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ವಸ್ತು ಪ್ರದರ್ಶನದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here