ಫೇಸ್ಬುಕ್ ಪರ ಚರ್ಚೆ: ರುಚಿತಾ ಪ್ರಥಮ

0
157

ವಾಡಿ: ಡಿಎವಿ ಪಬ್ಲಿಕ್ ಸ್ಕೂಲ್ ಸಂಸ್ಥೆ ವತಿಯಿಂದ ತೆಲಂಗಾಣದಲ್ಲಿ ಏರ್ಪಡಿಸಲಾಗಿದ್ದ ದಕ್ಷಿಣ ವಲಯ ಮಟ್ಟದ ಸಂವಾದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಾಡಿ ನಗರದ ಡಿಎವಿ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ರುಚಿತಾ ಮುಖೇಶ ಅಗರವಾಲ್ ಅವರು ಜಾಮಾಜಿಕ ಜಾಲತಾಣ ಫೇಸ್ಬುಕ್ ಪರವಾಗಿ ವಿಚಾರ ಮಂಡಿಸುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂದು ಡಿಎವಿ ದಕ್ಷಿಣ ವಲಯ ನಿರ್ದೇಶಕಿ ಸೀತಾಕಿರಣ ತಿಳಿಸಿದ್ದಾರೆ.

ವಿದ್ಯಾರ್ಥಿನಿಗೆ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿದೆ. ಪ್ರತಿಭೆ ಮೆರೆದ ಕು.ರುಚಿತಾ ಅಗರವಾಲ್ ಸಾಧನೆಗೆ ಪ್ರಾಂಶುಪಾಲೆ ವಿ.ಶಶಿಬಾಲ, ಎಸಿಸಿ ಮುಖ್ಯಶ್ಥ ಕೆ.ಆರ್.ರೆಡ್ಡಿ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಪುಷ್ಕರ್ ಚೌಧರಿ ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ಸ್ಪರ್ಧೆಯಲ್ಲಿ ದಕ್ಷಿಣ ವಲಯದ ವಿವಿಧ ರಾಜ್ಯಗಳ ಒಟ್ಟು ೧೯ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here