ಕಲಬುರರ್ಗಿ ವಿಮಾನ ನಿಲ್ದಾಣಕ್ಕೆ ಸೇವಾಲಾಲ ಹೆಸರಿಡಿ: ಜಾಧವ

0
57

ವಾಡಿ: ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂಜಾರಾ ಜನಾಂಗದ ಆರಾಧ್ಯ ದೈವ ಸಂತ ಶ್ರೀಸೇವಾಲಾಲ ಮಹಾರಾಜರ ಹೆಸರಿಡಬೇಕು ಮತ್ತು ನಿಲ್ದಾಣ ಸಿದ್ಧಗೊಳ್ಲಲು ಭೂಮಿ ಕೊಟ್ಟ ಬಂಜಾರಾ ಜನರಿಗೆ ನಿಲ್ದಾಣದಲ್ಲಿ ಉದ್ಯೋಗ ನೀಡಬೇಕು ಎಂದು ಅಖಿಲ ಭಾರತ ಬಂಜಾರಾ ಸೇವಾ ಸಂಘದ ವಾಡಿ ವಲಯ ಘಟಕದ ಅಧ್ಯಕ್ಷ ಶಂಕರ ಜಾಧವ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಶಂಕರ ಜಾಧವ, ಹಲವು ವರ್ಷಗಳಿಂದ ವಾಸವಿದ್ದ ಭೂಮಿಯನ್ನು ಬಿಟ್ಟುಕೊಡುವ ಮೂಲಕ ಬಂಜಾರಾ ಜನರು ಕಲಬುರರ್ಗಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಬದುಕಿದ್ದ ನೆಲವನ್ನು ತ್ಯಾಗ ಮಾಡಿ ಬೆರೆಡೆ ಒಲಸೆ ಹೋಗಿದ್ದಾರೆ. ಅಲ್ಲದೆ ದೇಶದಲ್ಲಿ ವಿಶಿಷ್ಟ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಬಂಜಾರಾ ಜನಸಮುದಾಯ ತನ್ನದೆಯಾದ ಇತಿಹಾಸ ಹೊಂದಿದೆ.

Contact Your\'s Advertisement; 9902492681

ಬಂಜಾರರ ತ್ಯಾಗವನ್ನು ಪರಿಗಣಿಸಿ ವಿಮಾನ ನಿಲ್ದಾಣಕ್ಕೆ ಸೇವಾಲಾಲ ಹೆಸರಿಡಬೇಕು. ಜಮೀನು ಕಳೆದುಕೊಂಡ ಕುಟುಂಬಗಳಿಗೆ ವಿಮಾನ ನಿಲ್ದಾಣದಲ್ಲಿ ಉದ್ಯೋಗ ನೀಡಬೇಕು. ನಿಲ್ದಾಣದಲ್ಲಿ ವಾಣಿಜ್ಯ ವ್ಯಾಪಾರಕ್ಕೆ ಅವಕಾಶ ಒದಗಿಸಬೇಕು. ಬಂಜಾರಾ ರೈತರು ಪುನರ್ವಸತಿ ಕಂಡಿರುವ ಪ್ರದೇಶದ ಭೂಮಿಗಳಿಗೆ ನೀರಾವರಿ ಸೌಲಭ್ಯ ಒದಗಿಸಬೇಕು.

ಈ ಕುರಿತು ಸಂಸದ ಡಾ.ಉಮೇಶ ಜಾಧವ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕ್ರಮಕೈಗೊಳ್ಳಲು ಮುಂದಾಗಬೇಕು. ಬಂಜಾರಾ ಜನರ ಬೇಡಿಕೆ ಕಡೆಗಣಿಸಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here