ಕಾರಾಗೃಹದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಅಲ್ಪಸಂಖ್ಯಾತರ ಕಲ್ಯಾಣ ದಿನ

0
22

ಕಲಬುರಗಿ: ನವೆಂಬರ್ 19 ರಿಂದ 25 ರವರೆಗೆ ರಾಷ್ಟ್ರೀಯ ಐಕ್ಯತಾ ಸಪ್ತಾಹ ಹಿನ್ನೆಲೆಯಲ್ಲಿ ಎರಡನೇ ದಿನವಾದ ನವೆಂಬರ್ ೨೦ ರಂದು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಅಲ್ಪಸಂಖ್ಯಾತರ ದಿನವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ. ಐ.ಜೆ. ಮ್ಯಾಗೇರಿ ಅವರು ಮಾತನಾಡಿ ದೇಶದ ನಾನಾಭಾಗಗಳಲ್ಲಿ ಅಲ್ಪಸಂಖ್ಯಾತ ವರ್ಗದ ಜನರು ವಾಸಿಸುತ್ತಿದ್ದು, ಅವರ ಏಳ್ಗೆಗಾಗಿ ನಾವೆಲ್ಲರೂ ಸಹಕರಿಸಬೇಕೆಂದರು. ಕಾರಾಗೃಹದ ಅಧೀಕ್ಷಕರು ಎಲ್ಲರಿಗೂ ಐಕ್ಯತಾ ಪ್ರಮಾಣ ವಚನ ಬೋಧಿಸಿದರು.

Contact Your\'s Advertisement; 9902492681

ಈ ಸಮಾರಂಭದಲ್ಲಿ ಕಾರಾಗೃಹದ ವೈದ್ಯಾಧಿಕಾರಿ ಡಾ. ಅಣ್ಣಾರಾವ್ ಪಾಟೀಲ, ಕಚೇರಿ ಅಧೀಕ್ಷಕ ರಾಜ್‌ಆಹ್ಮದ್ ಧಂದರಗಿ ಹಾಗೂ ಜೈಲರ್ ವೃಂದದವರು ಭಾಗವಹಿಸಿದರು. ಜೈಲರ್‌ರಾದ ಸೈನಾಜ್ ನಿಗೇವಾನ್ ಸ್ವಾಗತ ಗೀತೆ ಹಾಡಿದರು. ಗೋಪಾಲಕೃಷ್ಣ ಕುಲ್ಕರ್ಣಿ ಸ್ವಾಗತಿಸಿದರು. ಜೈಲರ್‌ರಾದ ಸುನಂದಾ ವಂದಿಸಿದರು. ಶಿಕ್ಷಕ ನಾಗರಾಜ ಮೂಲಗೆ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here