ಕಲಬುರಗಿ: ಮುಸ್ಸಂಜೆ ಹೊತ್ತು, ಘಂಟೆಯ ನಾದ, ಭಕ್ತಾದಿಗಳ ಜಂಗುಳ, ಅಲ್ಲಲ್ಲಿ ಗಲಿಬಿಲಿ, ಎಲ್ಲೆಲ್ಲೂ ಸಡಗರ ಸಂಭ್ರಮ, ಸಿರಿ ಉಟ್ಟು ಶ್ರೀಂಗಾರಗೊಂಡ ಶಿಕ್ಷಕಿಯರ ಗುಂಪು ಒಂದೆಡೆ, ಅಲ್ಲಲ್ಲಿ ಮಾತಾಡುತ್ತ ಗುಂಪು ಗುಂಪಾಗಿ ನಿಂತ ಶಿಕ್ಷಕರು, ಇನ್ನೊಂದೆಡೆ, ದಾಸೋಹ ಮಹಾಮನೆಯು ಮಹಾ ಸಡಗರದಿಂದ ಕಂಗೊಳಿಸುತ್ತಿತ್ತು.
ಈ ಸುಂದರ ಘಳಿಗೆ ಕಂಗೊಳಿಸಿದ್ದು ಶರಣಬಸವೇಶ್ವರ ಸಂಸ್ಥಾನದ ದಾಸೋಹ ಮಹಾಮನೆಯಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಮಾತೋಶ್ರೀ ದಾಕ್ಷಾಯಿಣಿ ಅವ್ವನವರ ಜನ್ಮದಿನೋತ್ಸವದ ಸುಕ್ಷಣ. ದಾಸೋಹ ಮಹಾಮನೆಯ ಮಾತೆಯ ಕುರಿತು ವಿವಿ ಡೀನ್ ಡಾ. ಲಕ್ಷ್ಮಿ ಪಾಟೀಲ ಮತ್ತು ಶರಣಬಸವೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ಅಧ್ಯಾಪಕರಾದ ಮಂಗಲಾ ವಿ. ಕಪ್ರೆ ಸ್ವರಚಿತ ಕವನ ವಾಚನ ಮಾಡಿದರು.
ಶರಣಬಸವೇಶ್ವರ ಸಂಸ್ಥಾನದ ೮ನೇ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ, ೯ನೇ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪಾ ತಮ್ಮನವರು, ಸಹೋದರಿ ಮಹೇಶ್ವರಿ ಎಸ್. ಅಪ್ಪಾ, ಸಹೋದರಿ ಕೋಮಲಾ ಎಸ್. ಅಪ್ಪಾ, ಸಹೋದರಿ ಶಿವಾನಿ ಎಸ್. ಅಪ್ಪಾ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಕುಲಪತಿ ಡಾ. ನಿರಂಜನ್ ನಿಷ್ಠಿ, ಸಮ ಕುಲಪತಿ ಡಾ ವಿ.ಡಿ. ಮೈತ್ರಿ, ಕುಲಸಚಿವ ಡಾ. ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ, ಡೀನ ಡಾ. ಲಕ್ಷ್ಮಿ ಪಾಟೀಲ ಮತ್ತು ಡಾ. ಬಸವರಾಜ ಮಠಪತಿ, ಇತರರು ಇದ್ದರು.
ಶರಣಬಸವ ವಿಶ್ವವಿದ್ಯಾಲಯ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಎಲ್ಲಾ ಶಿಕ್ಷಣ ಸಂಸ್ಥೆಯ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿವರ್ಗ ಹಾಜರಿದ್ದರು.