ಎಸ್.ಯು.ಸಿ.ಐ ವತಿಯಿಂದ 26 ರಿಂದ 29ರವರೆಗೆ 9ನೇ ಅಖಿಲ ಭಾರತ ವಿದ್ಯಾರ್ಥಿ ಸಮ್ಮೇಳನ: ಹಣಮಂತ

0
78

ಕಲಬುರಗಿ: ಶಿಕ್ಷಣ ಕ್ಷೇತ್ರ ಮೇಲಿಂದ ಮೇಲೆ ದಾಳಿಯನ್ನು ಎದುರಿಸುತ್ತಿದೆ. ನಮ್ಮ ದೇಶದ ನವೋದಯ ಚಿಂತಕರ, ಸ್ವಾತಂತ್ರ್ಯ ಹೋರಾಟಗಾರರ ಕನಸಾದ ವೈಜ್ಞಾನಿಕ-ಧರ್ಮನಿರಪೇಕ್ಷ ಹಾಗೂ ಪ್ರಜಾಸತ್ತಾತ್ಮಕ ಶಿಕ್ಷಣದ ಕನಸನ್ನು ನಮ್ಮನ್ನಾಳಿದ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಸರ್ಕಾರಗಳು ಮಣ್ಣುಪಾಲು ಮಾಡಿವೆ ಎಂದು ಸಂಘಟನೆಯ ಹಣಮಂತ ಎಸ್.ಹೆಚ್ ಆರೋಪಿಸಿದರು.

ಇಲ್ಲಿನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ ೨೬, ರಿಂದ  ೨೯ವರೆಗೆ ಹೈದ್ರಾಬಾದ್‌ನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಸಮ್ಮೇಳನದ ಬಹಿರಂಗ ಸಭೆಯ ಉದ್ಘಾಟಕರಾಗಿ ಹೆಸರಾಂತ ಶಿಕ್ಷಣ ತಜ್ಞರು ಹಾಗೂ ಮುಖ್ಯಸ್ಥರು, ಸ್ವಾಗತ ಸಮಿತಿ. ಪ್ರೋ. ಪಿ.ಎಲ್.ವಿಶ್ವವೇಶ್ವರ್ ರಾವ್ ಆಗಮಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಕೇಂದ್ರ ಸಮಿತಿ ಸದಸ್ಯರಾದ ಕಾ. ಕೆ.ಶ್ರೀಧರ ಆಗಮಿಸಲಿದ್ದಾರೆ  ಭಾಷಣಕಾರಾಗಿ ಎಐಡಿಎಸ್‌ಓ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ.ಅಶೋಕ್ ಮಿಶಾ  ಹಾಗೂ ಅಖಿಲ ಭಾರತ ಉಪಾಧ್ಯಕ್ಷರಾದ ವಿ.ಎನ್.ರಾಜ್‌ಶೇಖರ್ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷvಯನ್ನು  ಎಐಡಿಎಸ್‌ಓ ಅಖಿಲ ಭಾರತ ಅಧ್ಯಕ್ಷರಾದ ಕಾ. ಕಮಲ್ ಸೇನ್ ವಹಿಸಲಿದ್ದಾರೆ.  ಈ ಸಮ್ಮೇಳನದ ಮುಕ್ತಾಯ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಾ. ಪ್ರವಾಶ್ ಘೋಷ್  ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮ್ಮೇಳನದಲ್ಲಿ  ಶಿಕ್ಷಣದ ಹಲವಾರುಜ್ವಲಂತ ಸಮಸ್ಯೆಗಳಾದ ವ್ಯಾಪಾರೀಕರಣ-ಖಾಸಗೀಕರಣಕುರಿತು, ಸರ್ಕಾರಿ ಶಿಕ್ಷಣ ಸಂಸ್ಥೆಗಳು ಅಧೋಗತಿಗೆ ತಲುಪಿರುವ ಕುರಿತು, ಸರ್ಕಾರಿ ಹಾಸ್ಟೆಲ್‌ಗಳ ಸಮಸ್ಯೆಗಳ ಕುರಿತು, ಕೇಂದ್ರ-ರಾಜ್ಯ ಸರ್ಕಾರಗಳ ಶಿಕ್ಷಣದ ಬಗೆಗಿನ ನಿರ್ಲಕ್ಷ್ಯಧೋರಣೆಕುರಿತು, ಮುಂತಾದಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಮುಂದಿನ ಹೋರಾಟದರೂಪುರೇಷೆಯನ್ನು ನಿರ್ಧರಿಸಲಾಗುವುದು. ಅಲ್ಲದೆಕೇಂದ್ರ ಸರ್ಕಾರದರಾಷ್ಟ್ರೀಯ ಶಿಕ್ಷಣ ನೀತಿ-೨೦೧೯ರ ಅಪಾಯಗಳ ಬಗ್ಗೆಯೂ ಸಮಗ್ರವಾಗಿ ಚರ್ಚಿಸಿ ಮುಂದಿನ ಹೋರಾಟದ ಕಾರ್ಯಕ್ರಮಗಳ ಬಗ್ಗೆಯೂ ಸಹ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಈ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು. ಗೋಷ್ಠಿಯಲ್ಲಿ ಕಾ. ಈರಣ್ಣ ಇಸಬಾ, ಕಾ. ಸ್ನೇಹಾ ಕಟ್ಟಿಮನಿ, ಕಾ. ಗೌತಮ, ಕಾ. ತುಳಜರಾಮ. ಎನ್.ಕೆ. ಈ ಸಂಘಟನಾಕಾರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here